ಏಳನೇ ಮಹಡಿಯಿಂದ ಬಿದ್ದ ಬಾಲಕಿ ಸಾವು

ಕರಾವಳಿ ಕರ್ನಾಟಕ ವರದಿ
ಶಾರ್ಜಾ:
ಇಲ್ಲಿನ ಮಜಾಸ್ ಜಮಾಲ್ ಅಬ್ದುಲ್ ನಾಸರ್ ಸ್ಟ್ರೀಟ್‌ನಲ್ಲಿರುವ ವಸತಿ ಸಂಕೀರ್ಣದ ಏಳನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ತ್ರಿಶೂರ್ ಮೂಲದ ಅಜಯ ಕುಮಾರ್ ಎಂಬವರ ಮಗಳು ಅಶ್ವಥಿ(16) ಸಾವಪ್ಪಿದ ಖೇದಕರ ಸಂಗತಿ ವರದಿಯಾಗಿದೆ.

ಘಟನೆ ನಡೆದಾಗ ಬಾಲಕಿಯ ತಂದೆ-ತಾಯಿ ಕೋಣೆಯಲ್ಲಿದ್ದರು ಎನ್ನಲಾಗಿದೆ.

ಶಾರ್ಜಾ ಇಂಡಿಯನ್ ಸ್ಕೂಲ್‌ನಲ್ಲಿ ಹನ್ನೊಂದನೇ ತರಗತಿ ಕಲಿಯುತ್ತಿದ್ದ ಅಶ್ವಥಿ ಬುಧವಾರ ನಡೆಯಲಿಕ್ಕಿದ್ದ ಪರೀಕ್ಷೆಗಾಗಿ ಓದುತ್ತಿದ್ದಳು.

ಅಶ್ವಥಿ ತಂದೆ-ತಾಯಿ ಮತ್ತು ಶಾರ್ಜಾ ಇಂಡಿಯನ್ ಸ್ಕೂಲ್ ವಿದ್ಯಾರ್ಥಿಯಾದ  ಸಹೋದರನನ್ನು ಅಗಲಿದ್ದಾರೆ. ಮೃತದೇಹವನ್ನು ಶಾರ್ಜಾ ಕುವೈಟ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ತ್ರಿಶೂರಿಗೆ ತರಲಾಗುವುದು.

Related Tags: Sharjah Spot Death, 16-Year old Indian Girl, 7 Storey Building, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಬಾಲಕಿ ಸಾವು, ಕರಾವಳಿ ಸುದ್ದಿ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ