ಹಿರಿಯ ನಟಿ ಪದ್ಮಾ ಕುಮುಟಾ ನಿಧನ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಕನ್ನಡ ಸಿನೆಮಾ ರಂಗದ ಅತ್ಯಂತ ವಿಶಿಷ್ಟ ನಟಿ ಪದ್ಮಾ ಕುಮುಟಾ (58) ಅವರು ಹೃದಯಾಘಾತದಿಂದ ಸೋಮವಾರ ನಿಧನರಾದರು.

ನಗರದಲ್ಲಿ ನಡೆಯುತ್ತಿದ್ದ ‘ಮಹಾನದಿ’ ಧಾರವಾಹಿ ಚಿತ್ರೀಕರಣ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.  ಪದ್ಮಾ ಅವರು ‘ಚೋಮನ ದುಡಿ’ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಹಲವಾರು ಕಲಾತ್ಮಕ ಮತ್ತು ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸಿದ್ದ ಪದ್ಮಾ ಕುಮಟ ಕನ್ನಡದ ಮನೆಮಾತಾಗಿರುವ ನಟಿಯಾಗಿದ್ದಾರೆ.

Related Tags: Veteran Kannada Actress Padma Kumta DIes
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ