ದರ್ಗಾಕ್ಕೆ ಬಂದ ನಾಲ್ವರು ನೀರುಪಾಲು
ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಬರುವ ಸಮಯದಲ್ಲಿ ಹೊಳೆಗೆ ಸ್ನಾನ ಮಾಡಲು ಇಳಿದಿದ್ದರು.

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ:
ತಾಲೂಕಿನ ನಡ ಗ್ರಾಮದ ಅಂತ್ರಾಯಿಪಲ್ಕೆ ಗಡಾಯಿಕಲ್ಲು ಬಳಿ ಹೊಳೆಯಲ್ಲಿ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವಪ್ಪಿದ ಖೇದಕರ ಸಂಗತಿ ವರದಿಯಾಗಿದೆ. ಇನ್ನೊಬ್ಬರು ನೀರಿನಲ್ಲಿ ಮುಳುಗಿದ್ದರೂ ಅಪಾಯದಿಂದ ಪಾರಾಗಿದ್ದಾರೆ.

ರಹೀಮ್(30), ಫಕೀರನಕಟ್ಟೆಯ 'ಸಹೀಮ್ ಮಂಝಿಲ್ ನಿವಾಸಿ ಅಬ್ದುಲ್ ಅವರ ಪುತ್ರಿ, ರಹೀಮ್ ಅವರ ಪತ್ನಿ  ರುಬೀನಾ(25), ರುಬೀನಾ ಸಹೋದರಿ ಯಾಸ್ಮಿನ್(23), ಅಕ್ಕನ ಮಗ ಸುಬಾನ್(15)ಎಂಬವರುಗಳು ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ಪಕೀರನಕಟ್ಟೆ  ನಿವಾಸಿಗಳಾಗಿದ್ದು, ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಬರುವ ಸಮಯದಲ್ಲಿ ಜಮಾಲಾಬಾದ್ ಕೋಟೆ ವೀಕ್ಷಿಸಿ ಮರಳುವಾಗ ಹೊಳೆಗೆ ಸ್ನಾನ ಮಾಡಲು ಇಳಿದಿದ್ದರು. ಇನ್ನೊಬ್ಬಾಕೆ ಮೈಮೂನಾ ಎಂಬವರು ನೀರಲ್ಲಿ ಮುಳುಗಿ ಅಸ್ವಸ್ಥ ಗೊಂಡವರು ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:
►►ಜಮಾಲಾಬಾದ್ ಕೋಟೆ ರಸ್ತೆ ಅಧೋಗತಿ:
http://bit.ly/2juJR3B

Related Tags: Beltangady, Kaup Drowning, Nada, Rahim, Rubina, Rubina, Yasmin Suban, Jamalabad Fort, Kannada News, Kannada News, Karnataka News, Coastal Karnataka News, Karavali News, Karavali Karnataka, Latest Kannada News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ