ನಾಗೇಶ್ ಹೆಗಡೆ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ಗೌರವ ಪ್ರಶಸ್ತಿಗೆ ಪತ್ರಕರ್ತ ನಾಗೇಶ ಹೆಗಡೆ, ವಿಮರ್ಶಕಿ ಎಚ್.ಎಸ್‌. ಶ್ರೀಮತಿ, ವಿಮರ್ಶಕ ಪ್ರೊ.ಓ.ಎಲ್‌. ನಾಗಭೂಷಣಸ್ವಾಮಿ, ಕಥೆಗಾರ ಬಸವರಾಜು ಕುಕ್ಕರಹಳ್ಳಿ ಮತ್ತು ಕಾದಂಬರಿಕಾರ ಬಾಳಾಸಾಹೇಬ ಲೋಕಾಪುರ ಭಾಜನರಾಗಿದ್ದಾರೆ.

ಪ್ರಶಸ್ತಿಯು 50 ಸಾವಿರ ನಗದು ಹಾಗೂ ಪ್ರಮಾಣ ಪತ್ರ  ಒಳಗೊಂಡಿದೆ. ಫೆ. 7 ಸಂಜೆ 5 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಂದು ಬೆಳಿಗ್ಗೆ 10.30ಕ್ಕೆ ಗೌರವ ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಕುರಿತ ವಿಚಾರಸಂಕಿರಣ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ  ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

2015ರ ವರ್ಷದ ಬಹುಮಾನಕ್ಕೆ 16 ಪ್ರಕಾರದ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ತಲಾ 25 ಸಾವಿರ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು.

2015ರ ದತ್ತಿನಿಧಿ ಬಹುಮಾನಕ್ಕೆ 7 ಲೇಖಕರನ್ನು ಆಯ್ಕೆ ಮಾಡಲಾಗಿದೆ. ವರ್ಷದ ಬಹುಮಾನ ಮತ್ತು ದತ್ತಿನಿಧಿ ಬಹುಮಾನಕ್ಕೆ ಶೇ 50 ರಷ್ಟು ಯುವ ಸಾಹಿತಿಗಳು ಮತ್ತು ಮಹಿಳೆಯರನ್ನು ಆಯ್ಕೆ ಮಾಡಿರುವುದು ಈ ಬಾರಿಯ ವಿಶೇಷ ಎಂದು ಅಕಾಡೆಮಿ ಅಧ್ಯಕ್ಷೆ ವಿವರಿಸಿದರು.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಜಿ. ರಾಜಶೇಖರ್, ಅಕಾಡೆಮಿ ಪ್ರಶಸ್ತಿ, ನಾಗೇಶ್ ಹೆಗಡೆ, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ