ಪ್ರವೀಣ್, ಸಂತೋಷ್ ಕೊಲೆ: ಆರೋಪಿಗಳ ಸೆರೆ
ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಭಯಾನಕ ಕೊಲೆ ಪ್ರಕರಣಗಳ ಆರೋಪಿಗಳ ಬಂಧನ.

ಕರಾವಳಿ ಕರ್ನಾಟಕ ವರದಿ
ಉಡುಪಿ:
ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಭಯಾನಕ ಕೊಲೆ ಪ್ರಕರಣಗಳ ಆರೋಪಿಗಳಲ್ಲಿ ಒಟ್ಟು ಹದಿಮೂರು ಆರೋಪಿಗಳನ್ನು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ನೇತೃತ್ವದ ಪೊಲೀಸರು  ಬಂಧಿಸಿದ್ದಾರೆ.

ಪ್ರವೀಣ್‌ ಕುಲಾಲ್

ಡಿ.19ರಂದು ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯ ಹಿರಿಯಡ್ಕ ಕೋತ್ನಕಟ್ಟೆ ಎಂಬಲ್ಲಿ ನಡೆದ ರೌಡಿ ವರ್ವಾಡಿ ಪ್ರವೀಣ್‌ ಕುಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಉಡುಪಿ ಪೊಲೀಸರು ಬಂಧಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಿರಿಯಡ್ಕ ನಿವಾಸಿ ಸಂತೋಷ್‌ ರಾಮ್‌ ಯಾನೆ ಪುತ್ತಿಗೆ ಸಂತು (33), ಹಿರಿಯಡ್ಕ ಓಂತಿಬೆಟ್ಟು ನಿವಾಸಿ ಸಂತೋಷ್‌ ಮಡಿವಾಳ ಯಾನೆ ಮಾಂಬೆಟ್ಟು ಸಂತು (33), ಬೆಳಗಾಂ ಹಿಂಡಲಗ ಜೈಲಿನಲ್ಲಿ  ಶಿಕ್ಷಾ ಬಂಧಿ ಖೈದಿ ಸಂತೋಷ್‌ ಪೂಜಾರಿ ಯಾನೆ ಸಂತು (39), ಫಲಿಮಾರಿನ  ನಿವಾಸಿ ಲತೇಶ ಪೂಜಾರಿ (31), ಉಡುಪಿ ಸಂತೆಕಟ್ಟೆ ವಾಸಿ ಸುಜಿತ್ ಪಿಂಟೋ  (33) ಆರೋಪಿಗಳಾಗಿದ್ದಾರೆ.

ಜೈಲಿನಲ್ಲಿ ಕೊಲೆಯ ಸ್ಕೆಚ್ ಹಾಕಿದರು
ಬೆಳಗಾಂ ಹಿಂಡಲಗಾ ಕೇಂದ್ರ ಕಾರಗೃಹದಲ್ಲಿದ್ದ  ಸಂತೋಷ್‌ ಪೂಜಾರಿ ಯಾನೆ ಸಂತುವನ್ನು ಕೊಲೆ ಮಾಡುವ ಸಲುವಾಗಿ ಪ್ರವೀಣ್ ಕುಲಾಲನು ಸಂಚು ರೂಪಿಸಿದ ವಿಚಾರ ಮಾಂಬೆಟ್ಟು ಸಂತೋಷನ ಮುಖಾಂತರ ಆತನಿಗೆ ತಿಳಿದಿತ್ತು. ಡಿಸೆಂಬರ್ 14ರಂದು  ಆರೋಪಿಗಳಲ್ಲಿ ಕೆಲವರು ಜೈಲಿನಲ್ಲಿ, ಸಂತುವನ್ನು ಭೇಟಿ ಮಾಡಿ  ಪ್ರವೀಣ್‌ ಕುಲಾಲನನ್ನು ಕೊಲೆ ಮಾಡುವ ಬಗ್ಗೆ  ನಿರ್ಧರಿಸುತ್ತಾರೆ. 5 ನೇ ಆರೋಪಿ ಎರಡನೇ ಆರೋಪಿಗೆ 1,50,000ರೂಪಾಯಿ ಹಣವನ್ನು ನೀಡುತ್ತಾನೆ.

ದಿಯಾ ಬಾರ್‌ಗೆ ಕುಲಾಲನನ್ನು ಕರೆಸಿ ಕೊಂದರು
ವ್ಯವಸ್ಥಿತ ಯೋಜನೆಯಂತೆ  ಹಿರಿಯಡ್ಕದ ಕೋತ್ನಕಟ್ಟೆ ದಿಯಾ ಬಾರ್‌ಗೆ ವರ್ವಾಡಿ ಪ್ರವೀಣ್‌ ಕುಲಾಲನನ್ನು ಕರೆಸಿಕೊಂಡು ಆರೋಪಿಗಳು ಪ್ರವೀಣ್‌ ಕುಲಾಲನಿಗೆ  ತಲವಾರಿನಿಂದ ಹಲ್ಲೆಗೈದು  ಕೊಲೆ ಮಾಡಿದ್ದಾಗಿ ತನಿಖೆ ಸಂದರ್ಭ ತಿಳಿದು ಬಂದಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಟಿ.ಬಾಲಕೃಷ್ಣ,  ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಅವರ ಮಾರ್ಗದರ್ಶನದಂತೆ ಉಡುಪಿ ಪೊಲೀಸ್ ಉಪಾಧೀಕ್ಷಕ ಕುಮಾರಸ್ವಾಮಿಯವರ ನಿರ್ದೇಶನದಂತೆ ಬ್ರಹ್ಮಾವರ ಸಿಪಿಐ ಶ್ರೀಕಾಂತ ಕೆ,  ಉಡುಪಿ ಡಿಸಿಐಬಿ ಪೊಲೀಸ್‌ ನಿರೀಕ್ಷಕ ಸಂಪತ್‌ ಕುಮಾರ್‌ ಹಾಗೂ  ತಂಡ,  ಹಿರಿಯಡ್ಕ ಠಾಣಾ ಪಿ.ಎಸ್‌.ಐ  ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ  ಭೇದಿಸಿ  ಆರೋಪಿಗಳು ಕೊಲೆ ಕೃತ್ಯಕ್ಕೆ ಉಪಯೋಗಿಸಿದ ಎರಡು ತಲವಾರು, ಒಂದು ಬೊಂಡಕೆತ್ತುವ ಕತ್ತಿ, ಒಂದು ಬೈಕ್ , ರಿಟ್ಜ್ ಕಾರು, ನಗದು 1,26,000ರೂ. ವಶಪಡಿಸಿಕೊಂಡಿದ್ದಾರೆ.

ಸಂತೋಷ್ ನಾಯಕ್ ಕೊಲೆ ಆರೋಪಿಗಳ ಸೆರೆ
ಉಡುಪಿ:
ಪರ್ಕಳದ ಸಣ್ಣಕ್ಕಿಬೆಟ್ಟು ವಾಸಿ ಸಂತೋಷ್‌ ನಾಯಕ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯರ್ಲಾಪಾಡಿಯ ಪ್ರಸಾದ್‌ (23), ಮಂಗಳೂರು ಕೃಷ್ಣಾಪುರ ವಾಸಿ ದಯಾನಂದ (37), ಉಡುಪಿಯ ವಿಲ್‌ಪ್ರೆಡ್‌ ಅರ್ಥರ್‌ ಯಾನೆ ವಿನ್ನು(40), ಹಿರಿಯಡ್ಕದ ಜಯಂತ್‌ ಪೈ (55), ಪೆರ್ಣಂಕೀಲದ ವಾಸಿ  ಕೃಷ್ಣ(33), ಮರ್ಣೆ ವಾಸಿ ಮಹೇಶ್‌ ಆಚಾರಿ(23), ಪೆರ್ಣಂಕೀಲದ ವಾಸಿ  ರಮೇಶ್‌(35), ಪ್ರಕಾಶ್ ಮೂಲ್ಯ ಕೊಡಿಬೆಟ್ಟು (29) ಬಂಧಿತರು.

ವರ್ವಾಡಿ ಪ್ರವೀಣ್, ಸಹಚರರು ಥಳಿಸಿ ಕೊಲೆಗೈದರು
ಆರೋಪಿಗಳಾದ ನಿತ್ಯಾನಂತದ ನಾಯಕ್‌ , ಜಯಂತ್‌ ಪೈ ಮತ್ತು ವಿಲ್‌ಪ್ರೆಡ್‌ ಅರ್ಥರ್‌ ಯಾನೆ ವಿನ್ನುಗೆ ಕೊಲೆಯಾದ ಸಂತೋಷ್‌ ನಾಯಕ್‌  ಕಳೆದ ಐದಾರು ವರ್ಷದಿಂದ ಕೊಡಬೇಕಾದ ಹಣವನ್ನು ಕೊಡದೆ ಸತಾಯಿಸುತ್ತಿದ್ದ.  ಹಣವನ್ನು ವಸೂಲು ಮಾಡುವಂತೆ ಈ ಮೂವರು ಆರೋಪಿಗಳು ರೌಡಿ ಪ್ರವೀಣ್‌ ಕುಲಾಲನಿಗೆ ತಿಳಿಸಿದ್ದು, ಡಿ.2,2016ರ ಬೆಳಿಗ್ಗೆ ಪ್ರವೀಣ್‌ ಕುಲಾಲನು  ಸಂತೋಷ ನಾಯಕನನ್ನು ಕುದಿಯ ಆತನ ಹೆಂಡತಿ ಮನೆಯಿಂದ ಅಪಹರಣ ಮಾಡಿ ವರ್ವಾಡಿಗೆ ಕರೆದೊಯ್ದಿದ್ದ.  ಅಲ್ಲಿ ತನ್ನ ಸಹಚರರೊಂದಿಗೆ ಸೇರಿ ಆತನಿಗೆ ಹಿಂಸೆ ನೀಡಿ ಬಾಯಿ ಬಿಡಿಸಲು ಪ್ರಯತ್ನಿಸಿದ್ದ. ಅಲ್ಲಿಗೆ ನಿತ್ಯಾನಂತದ ನಾಯಕ್‌ , ಜಯಂತ್‌ ಪೈ ಮತ್ತು ವಿಲ್‌ಪ್ರೆಡ್‌ ಅರ್ಥರ್‌ ಯಾನೆ ವಿನ್ನು ರವರನ್ನು ಪ್ರವೀಣ್‌ ಕುಲಾಲನು ಕರೆಯಿಸಿಕೊಂಡು  ಅವರ ಮುಂದೆ ಹೊಡೆದು ಹಿಂಸೆ ಮಾಡಿ  ಬಾಯಿ  ಬಿಡಿಸಲು ಪ್ರಯತ್ನಿಸಿದ್ದರು. ಹಿಂಸೆ ತಾಳಲಾಗದೇ ಸಂತೋಷ್‌ ನಾಯಕನು ಸ್ಥಳದಲ್ಲಿಯೇ  ಮೃತಪಟ್ಟಿದ್ದ.

ಮನೆಯ ಬಾಗಿಲನ್ನೂ ಮುರಿದರು, ಮನೆಯವರನ್ನೂ ಹೊತ್ತೊಯ್ದರು
ಅದೇ ರಾತ್ರಿ ಸಣ್ಣಕ್ಕಿಬೆಟ್ಟಿನಲ್ಲಿರುವ ಮೃತ ಸಂತೋಷ್‌ ನಾಯಕನ ಮನೆಗೆ ಪ್ರವೀಣ್‌ ಕುಲಾಲ್‌ ತನ್ನ ಸಹಚರರೊಂದಿಗೆ ಬಂದು  ಮನೆಯ ಬಾಗಿಲು ಒಡೆದು ಮನೆಯಲ್ಲಿ  ಹಣ ಇರುವ ಶಂಕೆಯಲ್ಲಿ ಮನೆಯ ಕಪಾಟುಗಳನ್ನು ಒಡೆದು ಹಣ ಇದೆಯೇ ಎಂದು  ತಪಾಸಣೆ ಮಾಡಿದ್ದ. ನಂತರ ಮನೆಯ ಮುಂದಿರುವ ದೇವರ ಗುಡಿಯ ಪೀಠವನ್ನು ಅಗೆದು ಹಣ ಇದೆಯೇ ಎಂದು ತಪಾಸಣೆ ನಡೆಸಿದ್ದರು. ಆದರೆ ಹಣ ಸಿಕ್ಕಿರಲಿಲ್ಲ. ಮನೆಯಲ್ಲಿದ್ದ  ಸಂತೋಷ್‌ ನಾಯಕ್‌ ಹೆಂಡತಿ ಸುಮಿತ್ರಾ, ತಾಯಿ ರತ್ನಾವತಿ ನಾಯಕ್‌, ತಮ್ಮ ವಿದ್ಯಾಧರ, ತಮ್ಮನ ಹೆಂಡತಿ ಶೋಭ ಮತ್ತು ಮೃತರ ಮಕ್ಕಳನ್ನು ಹೆದರಿಸಿ ಬಲತ್ಕಾರವಾಗಿ ಕಾರಿನಲ್ಲಿ ವಾರ್ವಡಿಗೆ ಕರೆದುಕೊಂಡು  ಹೋಗಿ ಅವರಿಂದಲೂ ಹಣವಿರುವ ಬಗ್ಗೆ ಬಾಯಿ ಬಿಡಿಸಲು ಪ್ರಯತ್ನ ಮಾಡಿದ್ದರು. ಅವರಲ್ಲಿರುವ ಕರಿಮಣಿ ಸರ, ಉಂಗುರ, ಮಕ್ಕಳ ಕಾಲು ಚೈನ್‌ ಕಿತ್ತುಕೊಂಡು ವಾಪಾಸು  ಎಲ್ಲರನ್ನು ಸಣ್ಣಕ್ಕಿ  ಬೆಟ್ಟಿಗೆ ಬಿಟ್ಟು ಹೋಗಿದ್ದರು.

ಕಾಲು ಕಡಿದು ಮೃತ ದೇಹ ಬಾವಿಗೆ ಎಸೆದರು
ಅದೇ ರಾತ್ರಿ ಮೃತ ದೇಹ ಇರುವ ವರ್ವಾಡಿಗೆ ಬಂದು ಮೃತ ದೇಹದ ಕಾಲುಗಳನ್ನು ಕತ್ತರಿಸಿ ಗೋಣೀ ಚೀಲಕ್ಕೆ ಹಾಕಿ  ಮೃತ ದೇಹವನ್ನು ಪರ್ಣಂಕೀಲ ಕಾಡಿನಲ್ಲಿರುವ ಒಂದು ಪಾಳು ಬಾವಿಯಲ್ಲಿ ಪ್ರವೀಣ ಕುಲಾಲನು , ಸಹಚರೊಂದಿಗೆ ಹೂತು ಹಾಕಿದ ಬಗ್ಗೆ ಆರೋಪಿಗಳು ವಿಚಾರಣೆ ಸಂದರ್ಭ ಬಾಯ್ಬಿಟ್ಟಿದ್ದಾರೆ.  ಕೃತ್ಯಕ್ಕೆ ಸಂಬಂಧಿಸಿ ಉಪಯೋಗಿಸಿದ ಕಾರು , ಹಗ್ಗಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಕೊಲೆಯಾದವನ ಪತ್ನಿ ಪೊಲೀಸ್ ದೂರು ನೀಡಿದರು
ಸಂತೋಷ್‌ ನಾಯಕ್‌ ಪತ್ನಿ ಸುಮಿತ್ರಾ ನಾಯಕ್‌ ತನ್ನ ಪತಿಯನ್ನು ವರ್ವಾಡಿಯ ಪ್ರವೀಣ್‌ ಕುಲಾಲ ಇತರರೊಂದಿಗೆ ಸೇರಿ ಕೊಲೆ ಮಾಡಿ ಶವವನ್ನು ನಾಶ ಮಾಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಜ.4, 2017 ರಂದು ದೂರು ನೀಡಿದ್ದು  ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಟಿ.ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಅವರ  ಮಾರ್ಗದರ್ಶನದಂತೆ ಉಡುಪಿ ಪೊಲೀಸ್ ಉಪಾಧೀಕ್ಷಕ ಕುಮಾರಸ್ವಾಮಿ ನಿರ್ದೇಶನದಂತೆ   ಬ್ರಹ್ಮಾವರ ಸಿಪಿಐ ಶ್ರೀಕಾಂತ ಕೆ,  ಉಡುಪಿ ಡಿಸಿಐಬಿ ಪೊಲೀಸ್‌ ನಿರೀಕ್ಷಕರಾದ ಸಂಪತ್‌ ಕುಮಾರ್‌ ಹಾಗೂ  ತಂಡ,  ಹಿರಿಯಡ್ಕ ಠಾಣಾ ಪಿ.ಎಸ್‌.ಐ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ  ಹಾಗೂ  ಸಿ.ಡಿ.ಆರ್‌ ವಿಭಾಗದವರು ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ:
►►ಉಡುಪಿ: ಹಾಡುಹಗಲೆ ಕುಖ್ಯಾತ ರೌಡಿಯನ್ನು ಕೊಚ್ಚಿ ಕೊಲೆ
http://bit.ly/2icg3Ng
►►ಕೊಲೆಗೆ ವಿಫಲ ಯತ್ನ: ಸುಪಾರಿ ಹಂತಕರ ಕೃತ್ಯಕ್ಕೆ ಬೂದಿ ಮುಚ್ಚಿದ ಕೆಂಡವಾದ ಬೈಲೂರು http://bit.ly/1UCTg4b
►►ಹಪ್ತಾ ವಸೂಲಿ, ಕೊಲೆಯತ್ನ: ಆರೋಪಿಗಳ ಸೆರೆ http://bit.ly/2gRtw7p
►►ಸುಪಾರಿ ಹಣ ಬರಲಿಲ್ಲವೆಂದು ಸುಮಿತ್ ಶೆಟ್ಟಿ ಕೊಲೆ ಯತ್ನ? http://bit.ly/1YA3DeU
►►ಬೈಲೂರು ಶೂಟೌಟ್: ಪ್ರಮುಖ ಆರೋಪಿ ಕುಲಾಲ್ ಸೆರೆ http://bit.ly/2gRu5y6

Related Tags: Udupi SP Balkrishna, Varvadi Praveen Kulal, Murder, Notorious Rowdy, Hiriadka Police Kannada News, Karnataka News, Coastal Karnataka News, Karavali News, Karavali Karnataka, Latest Kannada News, ವರ್ವಾಡಿ ಪ್ರವೀಣ್ ಕುಲಾಲ್, ಸಂತೋಷ್ ನಾಯಕ್ ಕೊಲೆ, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ