ಪ್ರಿಯತಮೆ ಕೆಲಸ ಕೊಡಿಸಿದಳು. ಇವನು ಕೈಕೊಟ್ಟ
ಕಿನ್ನಿಗೋಳಿಯ ಯುವತಿಯನ್ನು ಪ್ರೀತಿಸಿದ ನಾಟಕವಾಡಿ ವಂಚಿಸಿದ ವಾಮಂಜೂರಿನ ಯುವಕನ ವಿರುದ್ಧ ಪೊಲೀಸ್ ದೂರು.

ಕರಾವಳಿಕರ್ನಾಟಕ ವರದಿ/ಅಜಿತ್ ಸಿಕ್ವೇರಾ
ಮಂಗಳೂರು:
ಕಿನ್ನಿಗೋಳಿಯ ಆಕೆ ತನ್ನ ಮನಮೆಚ್ಚಿದ ವಾಮಂಜೂರಿನ ಯುವಕ ಅಮಿತ್ ಬದುಕಲ್ಲಿ ನೆಲೆ ಕಾಣಲಿ ಎಂದು ಕಂಡಕಂಡವರ ಕೈಕಾಲು ಹಿಡಿದು, ಸಾಲ ಮಾಡಿ ಅವನನ್ನು ಅಬುದಾಬಿಗೆ ಕಳಿಸಿಕೊಟ್ಟಳು.  ಅಮಿತ್ ಜೊತೆ ಬದುಕು ಕಳೆಯುವುದು ಎಂಬ ವಿಶ್ವಾಸದ ಮೇಲೆ ಆತನಿಗೆ ತನ್ನ ಸರ್ವಸ್ವವನ್ನೂ ಅರ್ಪಿಸಿದಳು. ಒಂದು ದಿನ ಅಮಿತ್ ಮನೆಗೂ ಹೋಗಿದ್ದಳು. ನಿನ್ನ ಜೊತೆಗೇ ಅಮಿತ್ ಮದುವೆ ಮಾಡ್ತೀವಿ ಅಂತ ಅಮಿತ್ ಅಪ್ಪ ಅಮ್ಮ ಭಾಷೆ ಕೂಡ ಕೊಟ್ಟಿದ್ದರು.

ಈಗ ಅಮಿತ್ ಊರಿಗೆ ಬಂದವನು ಮದುವೆ ಆಗಲ್ಲ ಎಂದು ಹೇಳಿ ಮತ್ತೆ ಅಬುದಾಬಿಗೆ ಹಾರಿದ್ದಾನೆ. ಪೊಲೀಸರಿಗೆ ದೂರಿದರೆ ನಿನ್ನ ಫೋಟೋಗಳನ್ನು ಫೇಸ್‍ಬುಕ್‍ಗೆ ಹಾಕಿ ಮರ್ಯಾದೆ ತೆಗಿತೀನಿ ಎಂದು ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ಆತನನ್ನು ಮನಸಾರೆ ಪ್ರೀತಿಸಿದ್ದ ಯುವತಿ ಧೈರ್ಯ ಮಾಡಿ ಮೂಲ್ಕಿ ಪೊಲೀಸ್  ಠಾಣೆಯಲ್ಲಿ ದೂರಿದ್ದಾರೆ.

ಕಿನ್ನಿಗೋಳಿಯ ಯುವತಿ ಮತ್ತು ವಾಮಂಜೂರಿನ ನಿವಾಸಿ ಅಮಿತ್ ಮಂಗಳೂರಿನಲ್ಲಿ ಇಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರಿಗೂ ಸ್ನೇಹವಾಗಿದೆ. ಮುಂದೆ ಸ್ನೇಹ ಪ್ರೀತಿಯಲ್ಲಿ ಬದಲಾಗಿತ್ತು. ಈಗ ಅಮಿತ್ ನಂಬಿಕೆ ದ್ರೋಹ ಎಸಗಿದ್ದಾನೆ ಎಂದು ಯುವತಿ ಕಣ್ಣೀರಾಗಿದ್ದಾರೆ.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಮುಲ್ಕಿ ಪೊಲೀಸ್, ವಾಮಂಜೂರು ಅಮಿತ್. ಕಿನ್ನಿಗೋಳಿ ಲವ್ ಕೇಸ್, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ