ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಲಾರೆ: ಜಿ.ರಾಜಶೇಖರ್
2015ರಲ್ಲಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಗಳ ನಿರಾಕರಣೆ / ವಾಪಾಸಾತಿಗೆ ಕಾರಣವಾದ ಸನ್ನಿವೇಶ ಈಗ ಇನ್ನಷ್ಟು ಹದಗೆಟ್ಟಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ:
ತಮ್ಮ ‘ಬಹುವಚನ ಭಾರತ’ ಕೃತಿಗೆ "ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಪ್ರಶಸ್ತಿಯನ್ನು ಖ್ಯಾತ ಲೇಖಕ ಮತ್ತು ಚಿಂತಕ ಜಿ. ರಾಜಶೇಖರ ಸ್ವೀಕರಿಸಲು ನಿರಾಕರಿಸಿದ್ದಾರೆ. 

ಜಿ.ರಾಜಶೇಖರ್ ಅವರ 'ಬಹುವಚನ ಭಾರತ' ಕೃತಿಗೆ 2015 ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಜಿ. ರಾಜಶೇಖರ್ "ನನ್ನ ‘ಬಹುವಚನ ಭಾರತ’ಕೃತಿಗೆ ಪ್ರಶಸ್ತಿ ನೀಡಿದೆ. ಅಕಾಡೆಮಿ ನನ್ನ ಬಗ್ಗೆ ತೋರಿದ ಗೌರವಕ್ಕೆ ನಾನು ಕೃತಜ್ಞ. ಆದರೆ, 2015ರಲ್ಲಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಗಳ ನಿರಾಕರಣೆ / ವಾಪಾಸಾತಿಗೆ ಯಾವ ಸನ್ನಿವೇಶ ಕಾರಣವಾಯಿತೋ, ಆ ಸನ್ನಿವೇಶ ಈಗ ಇನ್ನಷ್ಟು ಹದಗೆಟ್ಟಿದೆ. ಹಾಗಾಗಿ ಈ ಪ್ರಶಸ್ತಿಯನ್ನ ನಾನು ಸ್ವೀಕರಿಸಲಾರೆ." ಎಂದು ತಿಳಿಸಿದ್ದಾರೆ.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಜಿ. ರಾಜಶೇಖರ್, ಅಕಾಡೆಮಿ ಪ್ರಶಸ್ತಿ ಸ್ವೀಕರಿಸಲಾರೆ, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ