ವೈರಲ್ ವಿಡಿಯೊ ಯೋಧ ತೇಜ್ ಪತ್ನಿ ಕಳವಳ
ಪತಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಅವರ ಸುರಕ್ಷತೆಯ ಬಗ್ಗೆ ಆತಂಕವಿದೆ ಎಂದು ಯೋಧನ ಫೇಸ್‌ಬುಕ್ ಪುಟವನ್ನೇ ಬಳಸಿಕೊಂಡು ದೂರಿದ್ದಾರೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಬಿಎಸ್‍ಎಫ್ ಯೋಧರಿಗೆ ನೀಡುವ ಆಹಾರ ಎಂದು ಅರೆ ಬೆಂದ ಪರೋಟಾ, ಒಂದು ಲೋಟ ಚಹಾ ತೋರಿಸಿ ಯೋಧರ ಕಷ್ಟಗಳ ಬಗ್ಗೆ ಫೇಸ್‍ಬುಕ್‍ನಲ್ಲಿ ವಿಡಿಯೊ ಅಪ್‍ಲೋಡ್ ಮಾಡಿದ್ದ ಯೋಧ ತೇಜ್ ಬಹದ್ದೂರ್ ಯಾದವ್ ಬಗ್ಗೆ ಬಿಎಸ್‍ಎಫ್ ತನಿಖೆ ಚುರುಕುಗೊಂಡಿದೆ. ಈ ನಡುವೆ ಯೋಧನ ಪತ್ನಿ ಸೋಮವಾರ ಸಂಜೆಯಿಂದ ತನಗೆ ಪತಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಅವರ ಸುರಕ್ಷತೆಯ ಬಗ್ಗೆ ಆತಂಕವಿದೆ ಎಂದು ಯೋಧನ ಫೇಸ್‍ಬುಕ್‍ ಪುಟವನ್ನೇ ಬಳಸಿಕೊಂಡು ದೂರಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭಾರತ -ಪಾಕಿಸ್ತಾನದ ಗಡಿಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 29ನೇ ಬೆಟಾಲಿಯನ್‍ನ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಪೂಂಚ್‌ನಲ್ಲಿರುವ ಯುನಿಟ್‌ಗೆ ವರ್ಗಾಯಿಸಿ ಅಲ್ಲಿ ಪ್ಲಂಬರ್ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತೇಜ್ ಯಾದವ್ ಅವರು ಅರೆಸೈನಿಕ ಪಡೆಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದೂ ದೂರಿದ್ದರು.
ಬಿಎಸ್‍‌ಎಫ್ ಯೋಧರಿಗೆ ನೀಡುವ ಆಹಾರ ಮತ್ತು ಅವ್ಯವಸ್ಥೆಯ ಬಗ್ಗೆ  ಫೇಸ್‍ಬುಕ್‍ನಲ್ಲಿ ಅವರು  ಅಪ್‍ಲೋಡ್ ಮಾಡಿದ ವಿಡಿಯೊ ವೈರಲ್ ಆಗಿತ್ತು.

ಈ ಬಗ್ಗೆ ಮಾತನಾಡಿದ ಬಿಎಸ್‍ಎಫ್ ಐಜಿ ಡಿ.ಕೆ ಉಪಾಧ್ಯಾಯ್ ಅವರು ತೇಜ್ ಅವರ ಹಿಂದಿನ ನಡವಳಿಕೆಯನ್ನು ನೋಡಿದರೆ ವಿಡಿಯೊದ ಹಿಂದಿನ ನಡೆ ಬಗ್ಗೆ ಸಂದೇಹ ಹುಟ್ಟುತ್ತದೆ ಎಂದು ಹೇಳಿದ್ದರು. 2010ರಲ್ಲಿ ಯೋಧ ತೇಜ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಆದರೆ ಅವರ ಕುಟುಂಬವನ್ನು ಪರಿಗಣಿಸಿ ಅವರನ್ನು ಸೇನೆಯಿಂದ ವಜಾ ಮಾಡಿರಲಿಲ್ಲ ಎಂದು ಐಜಿ ಹೇಳಿದ್ದಾರೆ.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಯೋಧ ತೇಜ್ ಬಹದ್ದೂರ್ ಯಾದವ್, ಬಿಎಸ್‍ಎಫ್, ವೈರಲ್ ವಿಡೀಯೊ, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ