ವಿದಾಯ ಭಾಷಣ: ಭಾವುಕರಾದ ಬರಾಕ್ ಒಬಾಮ

ಕರಾವಳಿ ಕರ್ನಾಟಕ ವರದಿ
ಚಿಕಾಗೊ:
ಎಲ್ಲರೂ ಒಟ್ಟಾಗಿ ಏಳುವ ಮತ್ತು ಎಲ್ಲರೂ ಒಟ್ಟಾಗಿ ಬೀಳುವ ಶಕ್ತಿ ಪ್ರಜಾಪ್ರಭುತ್ವಕ್ಕೆ ಮಾತ್ರ ಇದೆ, ಅಮೆರಿಕದ ಪ್ರತಿಯೊಬ್ಬ ಪ್ರಜೆಯೂ ಪರಸ್ಪರ ಪಾಲ್ಗೊಂಡಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಅಧ್ಯಕ್ಷರಾಗಿ ತಮ್ಮ ವಿದಾಯ ಭಾಷಣದಲ್ಲಿ ಅಮೆರಿಕ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಒಬಾಮ ಅಮೆರಿಕ ಈಗ ಉತ್ತಮ ಮತ್ತು ಸುದೃಢ ದೇಶವಾಗಿ ಮಾರ್ಪಟ್ಟಿದೆ. ದೇಶದಲ್ಲಿರುವ  ತಾರತಮ್ಯವನ್ನು ಹೋಗಲಾಡಿಸಲು ಸಶಕ್ತ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ. ಆದರೆ ಕೇವಲ ಕಾನೂನುಗಳಿಂದ ಮಾತ್ರ ಈ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ನಮ್ಮ ಮನಸ್ಸು ಕೂಡಾ ಬದಲಾಗಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಭಾಗಿತ್ವ ಮುಖ್ಯ ಎಂದು  ಹೇಳಿದ್ದಾರೆ.

ನಮ್ಮ ಹಿರಿಯರು ನಮಗೆ ಪ್ರಜಾಪ್ರಭುತ್ವವೆಂಬ ದೊಡ್ಡ ಅಸ್ತ್ರವನ್ನು ನೀಡಿದ್ದಾರೆ. ನಮ್ಮ ಸ್ವಾತಂತ್ರ್ಯದ ಮೂಲಕ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಸಾಮಾನ್ಯ ಪ್ರಜೆಯೂ ಒಳಗೊಂಡಂತೆ ಪ್ರತಿಯೊಬ್ಬರ ಪಾಲ್ಗೊಳ್ಳವಿಕೆಯಿಂದ ಮಾತ್ರ ಬದಲಾವಣೆ ಸಾಧ್ಯ. ನನ್ನ ಆಡಳಿತದ ಸಂದರ್ಭದಲ್ಲಿ ನಾನು ಪ್ರತಿನಿತ್ಯ ನಿಮ್ಮಿಂದ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿದ್ದೆ. ನೀವು ನನ್ನನ್ನು ಉತ್ತಮ ಅಧ್ಯಕ್ಷರನ್ನಾಗಿ ಮತ್ತು ಓರ್ವ ಉತ್ತಮ ವ್ಯಕ್ತಿಯನ್ನಾಗಿ ಮಾಡಿದ್ದೀರಿ ಎಂದು ಒಬಾಮ ಹೇಳಿದರು.

ಪಕ್ಷಪಾತ ಧೋರಣೆ ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿದೆ. ಭಯೋತ್ಪಾದನೆ ಜಾಗತಿಕ ಪಿಡುಗಾಗಿದೆ. ಆದರೆ ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ. ಮುಸ್ಲಿಮರಲ್ಲೂ ದೇಶಪ್ರೇಮಿಗಳಿದ್ದಾರೆ. ಅಮೆರಿಕಕ್ಕೆ ವಲಸೆ ಬಂದಿರುವವರ ಮಕ್ಕಳನ್ನು ಕೂಡ ಒಳಗೊಂಡಂತೆ ಒಗ್ಗೂಡಿ ಕೆಲಸ ಮಾಡಬೇಕಿದೆ. ನಮ್ಮ ಅಡಳಿತದ ಸಂದರ್ಭದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳನ್ನು ಟ್ರಂಪ್ ಆಡಳಿತ ಕೂಡ ಮುಂದುವರೆಸಿಕೊಂಡು ಹೋಗುತ್ತದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ಎದುರಾಳಿ ಎನನ್ನಾದರೂ ಹೇಳುತ್ತಿದ್ದರೆ ಅದನ್ನು ಕಿವಿಗೊಟ್ಟು ಕೇಳಿ.  ಪರಸ್ಪರ ಮಾತುಕತೆಯೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಭದ್ರ ಬುನಾದಿಯಾಗುತ್ತದೆ ಎಂದು ಒಬಾಮಾ ನುಡಿದರು.

Related Tags: Barack Obama, Farewell Speech, Chikago, US President, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ