ಗೌರಿಶಂಕರ ಸ್ವಾಮಿ ಇನ್ನಿಲ್ಲ
ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಶ್ರೀಗಳು ಗೊಲ್ಲಹಳ್ಳಿಯಲ್ಲಿ ಮಠ ಸ್ಥಾಪಿಸಿದ್ದರು.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಕಳೆದ ಕೆಲ ದಿನಗಳಿಂದ ಪಾರ್ಶವಾಯು ಸಮಸ್ಯೆಯಿಂದ ಬಳಲುತ್ತಿದ್ದ ಗೌರಿಶಂಕರ ಸ್ವಾಮಿ(71) ಇಂದು ವಿಧಿವಶರಾಗಿದ್ದಾರೆ.

ಗೌರಿಶಂಕರ ಸ್ವಾಮೀಜಿಯವರು ಪಾರ್ಶವಾಯು ಹಾಗೂ ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದು ಇತ್ತೀಚೆಗೆ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಗೌರಿಶಂಕರ ಸ್ವಾಮಿ ವಿಧಿವಶರಾಗಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಕಳೆದ ಹಲವು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಶ್ರೀಗಳು ತುಮಕೂರಿನ ಗುಬ್ಬಿ ತಾಲ್ಲೂಕಿನ ಗೊಲ್ಲಹಳ್ಳಿಯಲ್ಲಿ ಸಿದ್ಧಗಂಗಾ ಮಠ ಸ್ಥಾಪಿಸಿ ಅಲ್ಲಿಯೇ  ವಾಸಿಸುತ್ತಿದ್ದರು. ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟದ ಕಾನೂನು ಹೋರಾಟ ಇನ್ನೂ ತುಮಕೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

Related Tags: Gowrishankar Swami, Died, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ