ಕೊಳಂಬೆ ಕೆರೆ ಅಭಿವೃದ್ಧಿಗೆ ಸಚಿವ ಪ್ರಮೋದ್ ಶಿಲಾನ್ಯಾಸ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರುಗೊಂಡಿರುವ ಅನುದಾನ ರೂ.15.00 ಲಕ್ಷದ ಕಾಮಗಾರಿ.

ಕರಾವಳಿ ಕರ್ನಾಟಕ ವರದಿ
ಉಡುಪಿ:
ನಗರಸಭಾ ವ್ಯಾಪ್ತಿಯ ಕೊಳಂಬೆ ಶಾಂತಿ ನಗರದ ಕೆರೆ ಅಭಿವೃದ್ಧಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರುಗೊಂಡಿರುವ ಅನುದಾನ ರೂ.15.00 ಲಕ್ಷದ ಕಾಮಗಾರಿಗೆ ಮೀನುಗಾರಿಕಾ ಹಾಗೂ ಯುವಸಬಲೀಕರಣ  ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸಗೈದರು.

ನಗರಾಭಿವೃದ್ಧಿ ಪ್ರಾಧಿಕಾರವು ಕೆರೆ ಅಭಿವೃದ್ಧಿಗೆ ಸಂಗ್ರಹಿಸಿದ ಶುಲ್ಕವನ್ನು ಸಮರ್ಪಕವಾಗಿ ಕೆರೆ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದು, ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಹಲವಾರು ಕೆರೆಗಳ ಅಭಿವೃದ್ಧಿ ಮಾಡಿ ನೀರಿನ ಅಂತರ್ಜಲವನ್ನು ಉಳಿಸಿಕೊಳ್ಳಲು ಕಿಂಚಿತ್ ಪ್ರಯತ್ನ ಮಾಡುತ್ತಿದೆ. ಈ ಪರಿಸರದ ಎಲ್ಲಾ ಜನರು ಮುಂದಿನ ದಿನದಲ್ಲಿ ಇಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ನೆನಪಿಟ್ಟುಕೊಳ್ಳುವಿರೆಂಬ ನಂಬಿಕೆ ನನಗಿದೆ ಎಂದು ಅವರು ನುಡಿದರು.     

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನರಸಿಂಹ ಮೂರ್ತಿ, ಉಡುಪಿ ನಗರ ಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಉಪಾಧ್ಯಕ್ಷೆಯಾದ ಸಂಧ್ಯಾ ತಿಲಕರಾಜ್. ಸ್ಥಳೀಯ ವಾರ್ಡ್ ಸದಸ್ಯ ರಮೇಶ್ ಕಾಂಚನ್,  ನಗರಸಭಾ ಸದಸ್ಯ ಯುವರಾಜ್, ಲತಾ ಆನಂದ ಶೇರಿಗಾರ್, ಹೇಮಲತಾ ಹಿಲರಿ ಜತ್ತನ್ನ, ಜ್ಯೋತಿ ನಾಯ್ಕ್, ಪ್ರಾಧಿಕಾರದ ಸದಸ್ಯರಾದ  ಗಿರೀಶ್ ಉದ್ಯಾವರ, ಶಾಲೆಟ್ ಪಿಂಟೋ , ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ಧನ್,  ಉಡುಪಿ ತಾಲೂಕು ತಹಸೀಲ್ದಾರ್ ಶ್ರೀ ಮಹೇಶ್ಚಂದ್ರ, ನಗರಸಭೆಯ ಆಯುಕ್ತ ಮಂಜುನಾಥಯ್ಯ, ಇಂಜಿನಿಯರ್ ಗಣೇಶ್, ಗುತ್ತಿಗೆದಾರ ಹರೀಶ್ ಉದ್ಯಾವರ, ಸ್ಥಳೀಯರಾದ ಸುನಿಲ್ ಶೆಟ್ಟಿ,  ಅಶೋಕ್ ಶೇರಿಗಾರ್ , ಶಹನವಾಜ್ ಮತ್ತಿತರು ಉಪಸ್ಥಿತರಿದ್ದರು.

Related Tags: Pramodh Madhwaraj, Udupi, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ