ವಿದ್ಯಾರ್ಥಿನಿಗೆ ಅಶ್ಲೀಲ ಚಿತ್ರ: ಆರೋಪಿ ಸೆರೆ

ಕರಾವಳಿಕರ್ನಾಟಕ ವರದಿ
ಮಂಗಳೂರು:
ಕಾಲೇಜು ವಿದ್ಯಾರ್ಥಿನಿಯೋರ್ವರಿಗೆ ಅಶ್ಲೀಲ ಚಿತ್ರವನ್ನು ವಾಟ್ಸ್ಯಾಪ್ ಮೂಲಕ ಕಳಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆರೋಪದಲ್ಲಿ ಮೂವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಮೂಡುಶೆಡ್ಡೆಯ ಪುನೀತ್ ರಾಜ್(20) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಪುನೀತ್ ವಿದ್ಯಾರ್ಥಿನಿಯ ಭಾವಚಿತ್ರ ವಿರೂಪಗೊಳಿಸಿ ಕಳೆದ ಅಕ್ಟೋಬರ್ ತಿಂಗಳಿಂದ ವಾಟ್ಸ್ಯಾಪ್ ಮೂಲಕ ಅಶ್ಲೀಲ ಸಂದೇಶ ಕಳಿಸಿ ಚಿತ್ರವನ್ನು ಎಲ್ಲರಿಗೂ ಕಳಿಸುವುದಾಗಿ ಹೆದರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಮೂಡುಶೆಡ್ಡೆಯ ಪ್ರಥ್ವಿ ಮತ್ತು ಮಂಗಳೂರಿನ ವಿಲಾಸ್ ಎಂಬವರು ಪ್ರಮುಖ ಆರೋಪಿ ಪುನೀತನಿಗೆ ಸಹಕರಿಸಿದ್ದರು ಎಂದು ವಿದ್ಯಾರ್ಥಿನಿ ದೂರು ನೀಡಿದ್ದರು.
ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇತರ ಇಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News,ವಿದ್ಯಾರ್ಥಿನಿಗೆ ಅಶ್ಲೀಲ ವಾಟ್ಸ್ಯಾಪ್ ಚಿತ್ರ, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ