ನೋಟು ನಿಷೇಧ ನಮ್ಮದಲ್ಲ: ಆರ್‌ಬಿಐ

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ನೋಟು ನಿಷೇಧ ಮಾಡುವ ನಿರ್ಧಾರ ನಮ್ಮದಲ್ಲ, ಕೇಂದ್ರ ಸರ್ಕಾರದ ಸಲಹೆಯನ್ನಷ್ಟೆ ನಾವು ಅನುಷ್ಠಾನಗೊಳಿಸಿದ್ದೇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸ್ಪಷ್ಟಪಡಿಸಿದೆ. ಆರ್‌ಬಿಐನ ಈ ಹೇಳಿಕೆ ನೋಟು ನಿಷೇಧ ಸರ್ಕಾರದ ನಿರ್ಧಾರವಲ್ಲ, ಅದು ಆರ್‌ಬಿಐ ಮಾಡಿದ ನಿರ್ಧಾರ ಎಂದು  ಹೇಳಿದ್ದ ಹಲವಾರು ಕೇಂದ್ರ ಅಚಿವರ ಹೇಳಿಕೆಗೆ ತದ್ವಿರುದ್ಧವಾಗಿದೆ.

ಕೇಂದ್ರ ಸರ್ಕಾರ ನವೆಂಬರ್‌ 7ರಂದು ನೀಡಿದ ಸಲಹೆ ಆಧರಿಸಿ, ಆರ್‌ಬಿಐನ ಆಡಳಿತ ಮಂಡಳಿಯು ನೋಟು ರದ್ದುಪಡಿಸುವಂತೆ ಮರುದಿನವೇ ಶಿಫಾರಸು ಮಾಡಿತು ಎಂದು ಕೂಡ ಆರ್‌ಬಿಐ ಹೇಳಿದೆ. ಸರ್ಕಾರದ ಸಲಹೆಯನ್ನು ಪರಿಶೀಲಿಸಲು ಆರ್‌ಬಿಐನ ಕೇಂದ್ರೀಯ ಮಂಡಳಿ ಮಾರನೆಯ ದಿನ ಸಭೆ ಸೇರಿತು. ಚರ್ಚೆ ನಡೆಸಿದ ನಂತರ, ಗರಿಷ್ಠ ಮುಖಬೆಲೆಯ ನೋಟುಗಳ ಮಾನ್ಯತೆ ರದ್ದು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿತು ಎಂಬ ವಿವರ ಈಗ ಬಹಿರಂಗಗೊಂಡಿದೆ.

ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ನೀಡಿರುವ ಏಳು ಪುಟಗಳ ಟಿಪ್ಪಣಿಯಲ್ಲಿ ಈ ಮೇಲಿನ ಮಾಹಿತಿ ನೀಡಲಾಗಿದೆ. ಕಾಂಗ್ರೆಸ್ ಸಂಸದ ಎಂ. ವೀರಪ್ಪ ಮೊಯಿಲಿ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.

Related Tags: RBI, Note Ban, Central Government, Demonetization
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ