ಬ್ಯುಟೀಷಿಯನ್ ಆತ್ಮಹತ್ಯೆ: ತಂಡಗಳಿಂದ ಹೊಡೆದಾಟ

ಕರಾವಳಿಕರ್ನಾಟಕ ವರದಿ
ಮಂಗಳೂರು
: ನಗರದಲ್ಲಿ ಬ್ಯುಟೀಷಿಯನ್ ಆಗಿದ್ದ ಮಧುಶ್ರೀ(21) ಎಂಬವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಎರಡು ತಂಡಗಳು ಪರಸ್ಪರ ಹೊಡೆದಾಡಿದ ಕಳವಳಕಾರಿ ಘಟನೆ ವರದಿಯಾಗಿದೆ.

ಹಲ್ಲೆ-ಪ್ರತಿಹಲ್ಲೆಯಲ್ಲಿ ಸೂರಜ್, ಸುನಿಲ್, ಪವನ್ ಮತ್ತು ವಿಶ್ವನಾಥ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾವಿಗೀಡಾದ ಮಧುಶ್ರೀಯವರ ಕೈಯಲ್ಲಿ ಸೂರಜ್ ಎಂಬಾತನ ಹೆಸರನ್ನು ಬರೆದಿತ್ತು ಎನ್ನಲಾಗಿದೆ. ಆದರೆ ಹೆತ್ತವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಸೂರಜ್ ಸಂತೋಷನಗರಕ್ಕೆ ಅಂಗಡಿಗೆ ಬಂದ ಸಂದರ್ಭ ಪಂಡಿತ್ ಹೌಸ್ ಸುನೀಲ್, ವಿಶ್ವನಾಥ ಮತ್ತು ಪವನ್ ಎಂಬವರು ಮಾರಕ ಹಲ್ಲೆ ನಡೆಸಿದ್ದು, ಸೂರಜ್ ತಲೆ ಒಡೆದಿದೆ ಎನ್ನಲಾಗಿದೆ. ಇದನ್ನು ನೋಡಿದ ಸೂರಜ್ ಗೆಳೆಯರು ಆರೋಪಿಗಳಿಗೆ ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
 

Related Tags: Ullal Police, Kannada News, Karnataka News, Coastal Karnataka News, Karavali News, Karavali Karnataka, Latest Kannada News,ಬ್ಯುಟೀಷಿಯನ್ ಮಧುಶ್ರೀ ಸಾವು, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ