ಯಡಿಯೂರಪ್ಪ ಸಿಎಂ ಮಾಡುವ ಇರಾದೆ ಬ್ರಿಗೇಡ್‌ಗೆ ಇಲ್ಲ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೆಂಬಲ ಬೇಡ ಎಂದು ಯಡಿಯೂರಪ್ಪ ಹೇಳಿರುವುದರಿಂದ ಅವರನ್ನು ಸಿಎಂ ಮಾಡಲ್ಲ: ಈಶ್ವರಪ್ಪ

ಕರಾವಳಿ ಕರ್ನಾಟಕ ವರದಿ
ಕಲಬುರಗಿ:
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಗುರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಇಲ್ಲ. ರಾಯಣ್ಣ ಬ್ರಿಗೇಡ್ ಹಿಂದುಳಿದ ವರ್ಗಗಳ ಸಂಘಟನೆಯಾಗಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜನರು ಬೇಡ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ನನಗೆ ಬ್ರಿಗೇಡ್ ಬೆಂಬಲ ಬೇಡ ಎಂದು ಬಿಎಸ್ ವೈ ಹೇಳಿದ್ದಾರೆ. ಆದ್ದರಿಂದ ರಾಯಣ್ಣ ಬ್ರಿಗೇಡ್ ನಿಲುವನ್ನು ಬದಲಾಯಿಸಿದ್ದೇವೆ ಎಂದು ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಹೇಳುವ ಮೂಲಕ ಬಿಜೆಪಿಯಲ್ಲಿ ಇಬ್ಬರು ನಾಯಕರ ನಡುವಿನ ಜಟಾಪಟಿ ಇನ್ನಷ್ಟು ಬಿರುಸುಗೊಂಡಿದೆ.

ಯಾವುದೇ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜಕೀಯ ಪಕ್ಷವಾಗಲ್ಲ. ಮಠಾಧೀಶರ ಸಲಹೆಯಂತೆ ಯಾರಿಗೂ ಬೆಂಬಲ ನೀಡಲ್ಲ ಎಂದು ಈಶ್ವರಪ್ಪ ಹೇಳಿದ್ದು, ರಾಯಣ್ಣ ಬ್ರಿಗೇಡ್ ಹಿಂದುಳಿದ ವರ್ಗಗಳ ಸಂಘಟನೆಯಾಗಿದೆ ಎಂದು ಒತ್ತಿ ಹೇಳಿರುವುದು ಗಮನಾರ್ಹ.

Related Tags: Yeddyurappa vs Eshwarappa, Kannada News, Karnataka News, Coastal Karnataka News, Karavali News, Karavali Karnataka, Latest Kannada News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ