ಬೈಂದೂರಿಗೆ ತಾಲೂಕು ಭಾಗ್ಯಕ್ಕೆ ಕ್ಷಣಗಣನೆ?

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ರಾಜ್ಯ ಸಚಿವ ಸಂಪುಟ 33 ಹೊಸ ತಾಲೂಕು ರಚಿಸಲು ಒಪ್ಪಿಗೆ ಸೂಚಿಸಿದ್ದು, ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ  ಹೇಳಿದರು.

ಹೊಸ ತಾಲೂಕುಗಳ ರಚನೆ ಮಾಡುವಂತೆ ಅನೇಕ ಮನವಿಗಳು ಬಂದಿವೆ. ಎಲ್ಲವನ್ನೂ ಪರಿಗಣಿಸಿ ತಾಲ್ಲೂಕು ರಚನೆ ಮಾಡುವುದು ಆರ್ಥಿಕವಾಗಿ ಸದ್ಯಕ್ಕೆ ಕಷ್ಟ. ಹೀಗಾಗಿ ಕೇವಲ 33 ತಾಲೂಕುಗಳ ರಚಿಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದು ಕಾಗೋಡು ಹೇಳಿದ್ದಾರೆ.

ಹೊಸ ತಾಲೂಕು ರಚನೆ ಸಂಬಂಧ ರಚಿಸಲಾಗಿದ್ದ ಸಮಿತಿಗಳು ನೀಡಿದ ವರದಿಯಲ್ಲಿ ಆದ್ಯತೆಗಳ ಮೇರೆಗೆ ತಾಲೂಕು ರಚನೆಗೆ ಶಿಫಾರಸು ಮಾಡಲಾಗಿತ್ತು. ಮೊದಲ ಆದ್ಯತೆಯಲ್ಲಿರುವ ಹೆಸರುಗಳನ್ನಷ್ಟೇ ಸರ್ಕಾರ ಪರಿಗಣಿಸಲಿದೆ ಎಂದು ವಿವರಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 43 ಹೊಸ ತಾಲೂಕುಗಳನ್ನು ಘೋಷಿಸಲಾಗಿತ್ತು. ಆದರೆ ಸುಮ್ಮನೆ ಘೋಷಣೆ ಮಾಡಿದರೆ ಪ್ರಯೋಜನವಿಲ್ಲ, ತಾಲೂಕು ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸಲು ಅನುದಾನ ಅಗತ್ಯ ಎಂಬ ನೆಲೆಯಲ್ಲಿ ಸದ್ಯಕ್ಕೆ 33 ತಾಲೂಕುಗಳಿಗಷ್ಟೆ ಸಮ್ಮತಿ ಸೂಚಿಸಲಾಗಿದೆ.

Related Tags: New Byndoor Taluk, Budget Announcement, Kagodu Timmappa, Byndur Taluk Map, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ