ಉಡ ಬೇಟೆಯಾಡಿ ಫೇಸ್‌ಬುಕ್‌ನಲ್ಲಿ ಫೋಟೊ

ಕರಾವಳಿ ಕರ್ನಾಟಕ ವರದಿ
ಚಿಕ್ಕಮಗಳೂರು:
ಜಿಲ್ಲೆಯ ಬಾಳೆಹೊನ್ನೂರಿನ ಕಾಫಿ ತೋಟವೊಂದರಲ್ಲಿ ನಾಲ್ವರು ಯುವಕರ ತಂಡ ಅಳಿವಿನಂಚಿನಲ್ಲಿರುವ ಉಡ ಶಿಕಾರಿ ಮಾಡಿದೆ. ಸತ್ತ ಉಡ ಹಿಡಿದುಕೊಂಡು ವಿವಿಧ ಭಂಗಿಯಲ್ಲಿ ಭಾವಚಿತ್ರ ತೆಗೆಸಿಕೊಂಡು ಫೆಸ್‌ಬುಕ್‌ಗೆ ಅಪ್‌ಲೋಡ್ ಮಾಡಲಾಗಿದೆ. ಆರೋಪಿಗಳ ಪತ್ತೆಗೆ ಈಗ ಅರಣ್ಯ ಇಲಾಖೆ ಮುಂದಾಗಿದೆ.

ಬಾಳೆಹೊನ್ನೂರು ಪಟ್ಟಣದ ಕಳಸ ರಸ್ತೆಯಲ್ಲಿರುವ ಕಾಫಿ ಎಸ್ಟೇಟ್‌ವೊಂದರಲ್ಲಿ ಹೊಸ ವರ್ಷ ಆಚರಣೆ ದಿನ ಸ್ಥಳೀಯ ಬೇಟೆಗಾರರು ಉಡ ಕೊಂದು ಸಂಭ್ರಮ ಆಚರಿಸಿದ್ದಾರೆ. ನೆತ್ತಿಚೌಕದ ಅರಣ್ಯ ಪ್ರದೇಶದಲ್ಲಿ ಜೋಡಿ ಕಡವೆ ಬೇಟೆಯಾಡಿರುವ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ, ಮತ್ತೊಂದು ಅಪರೂಪದ ಪ್ರಾಣಿಯನ್ನು ಮಲೆನಾಡಿನಲ್ಲಿ ಮಾಂಸಕ್ಕಾಗಿ ಬೇಟೆಯಾಡಿರುವುದು ಬೆಳಕಿಗೆ ಬಂದಿದೆ.

ಅಪ್ಪು, ನವೀನ ಮತ್ತು ಈತನ ಸಹೋದರ ಹಾಗೂ ಸೈಫ್‌ ಎಂಬುವವರು ಕಾಫಿ ಎಸ್ಟೇಟ್‌ನಲ್ಲಿ ಉಡ ಕೊಂದಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಪ್ರಕರಣ ಅರಣ್ಯ ಇಲಾಖೆ ಗಮನಕ್ಕೆ ಬರುತ್ತಿದ್ದಂತೆ ನಾಲ್ವರು ಯುವಕರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಕೊಪ್ಪ ವಿಭಾಗದ ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಉಡ ಅಳಿವಿನಂಚಿನಲ್ಲಿರುವ ಪ್ರಾಣಿ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸರಿಸೃಪ ವರ್ಗದಡಿ ಶೆಡ್ಯೂಲ್‌ 1ರಡಿ ಈ ಪ್ರಾಣಿಯನ್ನು ಗುರುತಿಸಿ, ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಈ ಪ್ರಾಣಿಯನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧ. 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಇದನ್ನೂ ಓದಿ:
ಕಡವೆ ಬೇಟೆ. 11 ಆರೋಪಿಗಳ ಬಂಧನ: ಆರೋಪಿಗಳಲ್ಲಿ ಟೆಕ್ಕಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು:
http://bit.ly/2j3gARu

Related Tags: Monitor Lizard, Hunting, Nettichowka, Balehonnur, Chikmagalur, Kemmannugundi, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ