ಬಂಡಾಯ ಶಮನಕ್ಕೆ ಮುಲಾಯಂ ಯತ್ನ

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಬಂಡಾಯವೆದ್ದಿರುವ ಪುತ್ರ ಅಖಿಲೇಶ್ ಯಾದವ್ ಬಣವನ್ನು ಸಂತೈಸುವ ಪ್ರಯತ್ನವಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಂಡಾಯ ಶಮನಕ್ಕೆ ಮುಲಾಯಂ ಸಿಂಗ್ ಯಾದವ್ ಯತ್ನಿಸಿದ್ದು ಪಕ್ಷದ ಕಾರ್ಯಕ್ರಮದಲ್ಲಿ ಪುತ್ರ ಅಖಿಲೇಶ್ ಯಾದವ್ ಅವರೇ ಮುಂದಿನ  ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರು. 

ತಮ್ಮ ಪುತ್ರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ತಮಗೆ ಯಾವುದೇ  ಜಗಳವೂ ಇಲ್ಲ ಮತ್ತು ಕೆಲ ವಿಚಾರಗಳಲ್ಲಿ ಗೊಂದಲಗಿಳಿದ್ದು, ಶೀಘ್ರವೇ ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದರು.
 
ಅಖಿಲೇಶ್ ಬಣ ಹಾಗೂ ಮುಲಾಯಂ ಸಿಂಗ್ ಯಾದವ್ ಬಣಗಳು ಪಕ್ಷದ ಚಿಹ್ನೆಗಾಗಿ ಕಸರತ್ತು ಮುಂದುವರೆಸಿದ್ದು, 25 ವರ್ಷಗಳ ಹಿಂದೆ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದಾಗ ಪಡೆದುಕೊಳ್ಳಲಾಗಿದ್ದ ‘ಸೈಕಲ್’ ಚಿಹ್ನೆಯ  ಪ್ರತಿಪಾದನೆ ಸಲುವಾಗಿ ದೆಹಲಿಯಲ್ಲಿ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ್ದೆ ಎಂದು ಹೇಳಿದ ಮುಲಾಯಂ ಹೇಳಿದ್ದಾರೆ. ಅಂತೆಯೇ ಅಖಿಲೇಶ್ ಯಾದವ್ ಅವರು ತಾವೇ ಪಕ್ಷದ ಮುಖ್ಯಸ್ಥ ಹಾಗೂ ಸೈಕಲ್ ಚಿಹ್ನೆ ತಮಗೆ ಸೇರಿದ್ದು  ಎಂಬುದಾಗಿಯೂ ತಮಗೆ 200-229ಕ್ಕೂ ಹೆಚ್ಚು ಮಂದಿ ಎಸ್​ಪಿ ಶಾಸಕರ ಬೆಂಬಲ ತಮಗಿದೆ ಎಂದು ಪ್ರತಿಪಾದಿಸಿದ್ದಾರೆ. ಉಭಯ ಬಣಗಳ ಅಹವಾಲು ಆಲಿಸಿರುವ ಚುನಾವಣಾ ಆಯೋಗವು ಅಹವಾಲುಗಳು ತೃಪ್ತಿಕರವಾಗದೇ  ಇದ್ದಲ್ಲಿ ಸೈಕಲ್ ಚಿಹ್ನೆಯನ್ನು ಸ್ಥಗಿತಗೊಳಿಸಬಹುದು ಎಂದು ಹೇಳಲಾಗುತ್ತಿದೆ.

Related Tags: Mulayam Singh Yada, Akhilesh Yadav, Samajavadi Party, Cycl Symbol
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ