ಜಲ್ಲಿಕಟ್ಟು ನಿಷೇಧಿಸುವುದಾದರೆ ಬಿರಿಯಾನಿಯನ್ನೂ ನಿಷೇಧಿಸಿ

ಕರಾವಳಿ ಕರ್ನಾಟಕ ವರದಿ
ಚೆನ್ನೈ:
ಜಲ್ಲಿಕಟ್ಟು ಸ್ಪರ್ಧೆಯಿಂದಾಗಿ ಪ್ರಾಣಿ ಹಿಂಸೆ ನಡೆಯುತ್ತದೆ ಎಂದು ವಾದಿಸುವವರು ಬಿರಿಯಾನಿಯನ್ನೂ ನಿಷೇಧಿಸಬೇಕು ಎಂದು ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ನಿಷೇಧವನ್ನು ವಿರೋಧಿಸಿ ಖ್ಯಾತ ನಟ ಕಮಲ ಹಾಸನ್ ಕಿಡಿಕಾರಿದ್ದಾರೆ.

ಚೆನ್ನೈನಲ್ಲಿ ಇಂಡಿಯ ಟುಡೇ ಸೌತ್ ಕಾನ್‍ಕ್ಲೇವ್ ನಲ್ಲಿ ಮಾತನಾಡಿದ ಕಮಲ್ ಹಾಸನ್, ಜಲ್ಲಿಕಟ್ಟು ಸ್ಪರ್ಧೆಯಿಂದಾಗಿ ಪ್ರಾಣಿ ಹಿಂಸೆ ನಡೆಯುತ್ತದೆ ಎಂದು ವಾದಿಸುವವರು ಬಿರಿಯಾನಿಯನ್ನೂ ನಿಷೇಧಿಸಬೇಕು. ಜಲ್ಲಿಕಟ್ಟು ತಮಿಳುನಾಡಿನ ಸಾಂಸ್ಕೃತಿಕ ಕ್ರೀಡೆಯಾಗಿದೆ . ನೀವು ಜಲ್ಲಿಕಟ್ಟು ನಿಷೇಧಿಸುವುದಾದರೆ, ಬಿರಿಯಾನಿ ಕೂಡಾ ನಿಷೇಧಿಸಿ. ನಾನು ಜಲ್ಲಿಕಟ್ಟು ಸ್ಪರ್ಧೆಯ ದೊಡ್ಡ ಅಭಿಮಾನಿ. ಹಲವಾರು ಬಾರಿ ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಗೂಳಿಗಳ ಕೊಂಬು ಮುರಿಯುವುದಾಗಲೀ ಮಾಡುವುದಿಲ್ಲ. ಇಲ್ಲಿ ಅವುಗಳನ್ನು ಮಣಿಸಲಾಗುತ್ತದೆಯೇ ಹೊರತು ದೈಹಿಕ ಹಿಂಸೆ ನೀಡಲಾಗುವುದಿಲ್ಲ ಎಂದು ಕಮಲ್ ಸ್ಪಷ್ಟಪಡಿಸಿದ್ದಾರೆ.

ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು 2014ರಲ್ಲಿ ಸುಪ್ರೀಂಕೋರ್ಟ್ ಪ್ರಸ್ತುತ ಸ್ಪರ್ಧೆಯನ್ನು ನಿಷೇಧಿಸಿತ್ತು. ಈ ಹಿಂದೆಯೂ ಕೂಡ ಜಲ್ಲಿಕಟ್ಟು ಸ್ಪರ್ಧೆ ನಿಷೇಧದ ವಿರುದ್ಧ ಕಮಲ್ ಹಾಸನ್ ಮಾತನಾಡಿದ್ದು ಸ್ಮರಿಸಬಹುದಾಗಿದೆ.

Related Tags: Kamal Haasan, India Today Conclave, Jallikattu, Ban Biryani, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ