ಅನ್ಸಾರಿಯ ರಿಯಾದ್: ಅಧ್ಯಕ್ಷರಾಗಿ ಹಮೀದ್
ಖಜಾಂಜಿಯಾಗಿ ಅಬೂಬಕ್ಕರ್ ಪುನರಾಯ್ಕೆ. ಅನಾಥ ಮತ್ತು ಬಡ ಮಕ್ಕಳ ಅಭ್ಯುದಯಕ್ಕೆ ಪರಿಶ್ರಮಿಸುವವರಿಗೆ ಇಹ ಮತ್ತು ಪರಲೋಕದ ವಿಜಯ ಪಾಪ್ತಿ.

ಕರಾವಳಿ ಕರ್ನಾಟಕ ವರದಿ/ಮೊಹಮದ್ ಬಶೀರ್
ರಿಯಾದ್:
ಅನ್ಸಾರಿಯ ಯತೀಮ್ ಖಾನ (ರಿ) ಸುಳ್ಯ ಇದರ ರಿಯಾದ್ ಅನಿವಾಸಿ ಭಾರತೀಯ ಘಟಕದ ಪ್ರಥಮ ವಾರ್ಷಿಕ ಮಹಾಸಭೆ ಸೌದಿ ಅರೇಬಿಯಾದ ರಿಯದಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್ ಎಂ ಸುಳ್ಯರವರು ವಹಿಸಿದ್ದರು. ಬಹು. ಉಮರ್ ಫೈಜಿ ದುಃಅ ಪ್ರಾರ್ಥನೆಗೈದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಿ ಕೆ ಎಸ್ ಸಿ ಕೇಂದ್ರೀಯ ಸಮಿತಿ ಕಾರ್ಯದರ್ಶಿ ಜನಾಬ್ ದಾವೂದ್ ಕಜೆಮಾರುರವರು, "ಅನಾಥ ಮತ್ತು ಬಡ ಮಕ್ಕಳ ಸಂರಕ್ಷಣೆಗೆ ಇಸ್ಲಾಂ ಅತಿ ಮಹತ್ವನ್ನು ನೀಡಿದೆ. ತವರೂರಿನ ಸಂಸ್ಥೆಗೆ ಬೇಕಾಗಿ ಸಂಘಟಿತ ಪ್ರಯತ್ನ ಮತ್ತು ಯೋಜನೆಗಳನ್ನು ರೂಪಿಸಿ ಸಹಕರಿಸುತ್ತಿರುವ ಅನ್ಸಾರಿಯ ರಿಯಾದ್ ಸಮಿತಿಯ ಕಾರ್ಯಪ್ರವೃತ್ತಿ ಶ್ಲಾಘನೀಯ" ಎಂದರು.

ದಿಕ್ಷುಚಿ ಭಾಷಣ ಮಾಡಿದ ಸುನ್ನಿ ಯುವಜನ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಬಹು. ರಫೀಕ್ ಫೈಝಿ ಯವರು, "ಪ್ರವಾದಿ ಮೊಹಮ್ಮದ್ ಪೈಗಂಬರರು, ಪರಿಶುದ್ಧ ಕುರಾನ್ ಮತ್ತು ಹದೀಸ್ ಗಳು ಯತೀಮ್ ಮಕ್ಕಳನ್ನು ಸಂರಕ್ಷಿಸುವವರು, ಅದಕ್ಕೆ ಸಹಕಾರ ನೀಡುವವರು ಮತ್ತು ಪ್ರೆರೇಪಿಸುವವರಿಗೆ ಮಹತ್ವದ ಸ್ಥಾನವನ್ನು ಕಲ್ಪಿಸಿದ್ದಾರೆ. ನಿಸ್ವಾರ್ಥ ಸೇವಾಮನೋಭಾವದಿಂದ ಅನಾಥ ಮತ್ತು ಬಡ ಮಕ್ಕಳ ಅಭ್ಯುದಯಕ್ಕೆ ಪರಿಶ್ರಮಿಸುವವರಿಗೆ ಇಹ ಮತ್ತು ಪರಲೋಕದ ವಿಜಯ ಪಾಪ್ತಿ ಸಾಧ್ಯ" ಎಂದರು.

ಅನ್ಸಾರಿಯ ರಿಯಾದ್ ಸಮಿತಿಯ ಗೌರವಾಧ್ಯಕ್ಷ ಇಬ್ರಾಹಿಂ ನಡುಬೈಲು, ಕಾರ್ಯದರ್ಶಿ ಸಲೀಂ ಪ್ರೀಯ, ಮೊಹಮ್ಮದ್ ಅಲಿ ಫೈಝಿ ಮಲಪ್ಪುರಂ ಮುಖ್ಯ ಅತಿಥಿಗಳಾಗಿದ್ದರು. ಇದೆ ಸಂದರ್ಭದಲ್ಲಿ 2017 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಎಸ್ ಎಂ ಸುಳ್ಯ, ಉಪಾದ್ಯಕ್ಷರುಗಳಾಗಿ ಉಸ್ಮಾನ್ ಅರಂತೋಡು ಮತ್ತು ಹನೀಫ್ ನಾರ್ಕೋಡು, ಕಾರ್ಯದರ್ಶಿಯಾಗಿ ಬಷೀರ್ ಅರಂಬೂರು, ಜೊತೆ ಕಾರ್ಯದರ್ಶಿಯಾಗಿ ಸಿದ್ದಿಕ್ ನಾವೂರು ಮತ್ತು ಹಸೈನಾರ್ ಗೂನಡ್ಕ, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಸಿ ಬೋರುಗುಡ್ಡೆ, ಸಲಹಾ ಸಮಿತಿ ಸದಸ್ಯರಾಗಿ ಉಮರ್ ಎನ್ಮೂರು ಮತ್ತು ಅಬ್ದುಲ್ ನಿಝರ್ ಬಾರ್ಪಣೆ, ವಲಯ ಸಂಯೋಜಕರುಗಳಾಗಿ ನಿಝರ್ ಬೆಟ್ಟಂಪಾಡಿ, ಇರ್ಷಾದ್ ಸುಳ್ಯ, ಮುನೀರ್ ಸುಳ್ಯ, ಸಲಾಂ ಕಲ್ಮಕ್ಕರ್ ಪಾಲಡ್ಕ, ಬಷೀರ್ ಕೆ ಟಿ ಎಸ್ (ಅಭ), ಮುಸ್ತಫಾ ಪನ್ನೆ ಅರಂಬೂರು (ಕಸೀಮ್), ಉಮರ್ ಅಡ್ಕಾರ್ (ಅಲ್-ಘಾತ್) ಮತ್ತು ಶರೀಫ್ ಬಾರ್ಪಣೆ (ಅಲ್-ಖರ್ಜ್) ಆಯ್ಕೆಯಾದರು.

ಸಿದ್ದಿಕ್ ನಾವೂರು ಸ್ವಾಗತಿಸಿದರು, ಬಷೀರ್ ಅರಂಬೂರು ವರದಿ ವಾಚಿಸಿದರು, ಅಬೂಬಕ್ಕರ್ ಬೋರುಗುಡ್ಡೆ ಲೆಕ್ಕಪತ್ರ ಮಂಡಿಸಿದರು.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News,ಅನ್ಸಾರಿಯ ಯತೀಮ್ ಖಾನ (ರಿ) ಸುಳ್ಯ, ರಿಯಾದ್ ಅನಿವಾಸಿ ಭಾರತೀಯ ಘಟಕ, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ