ಜೇಸಿಐ ಸಾಸ್ತಾನ: ಅಧ್ಯಕ್ಷರಾಗಿ ದಿನೇಶ್ ಬಾಂಧವ್ಯ

ಕರಾವಳಿ ಕರ್ನಾಟಕ ವರದಿ
ಕುಂದಾಪುರ:
 ಸಾಲಿಗ್ರಾಮ ಚಿತ್ರಪಾಡಿಯ ಏಕದಂತ ಮಿನಿ ಹಾಲ್ನಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜೆಸಿಐ ಸಾಸ್ತಾನ ವೈಬ್ರೆಂಟ್ ನೂತನ ಅಧ್ಯಕ್ಷರಾಗಿ ಜೇಸಿ ದಿನೇಶ್ ಬಾಂಧವ್ಯ ಅಧಿಕಾರ ಸ್ವೀಕರಿಸಿದರು. 2016ರ ಅಧ್ಯಕ್ಷ ಜೇಸಿ ಉದಯ ಕೋಟ ವಲಯಾಧ್ಯಕ್ಷರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಜೇಸಿ ವಲಯ 15ರಲ್ಲಿಯೇ ವಿಶೇಷ ಸಾಧನೆ ಎಂಬಂತೆ ಸಾಸ್ತಾನ ಘಟಕದ ಅಂತರ್ಜಾಲ ತಾಣವನ್ನು ವಲಯ ಉಪಾಧ್ಯಕ್ಷ ಮೋಹನ ಎ. ಅವರಿಂದ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾರತೀಯ ಜೇಸಿಸ್ ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರ ಶ್ರೀಧರ ಪಿ.ಎಸ್. ಮಾತನಾಡಿ ಕಳೆದ ಒಂದು ವರ್ಷದಲ್ಲಿ ಸಾಸ್ತಾನ ಜೇಸಿಯು ಮಾಡಿದ ಸಾಧನೆ ಅಪ್ರತಿಮ ಎಂದು ಬಣ್ಣಿಸಿದರು.

ಅತಿಥಿಗಳಾಗಿ ಭಾರತೀಯ ಜೇಸಿಯ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಸೆನೆಟಿಕ್ ಸದಾನಂದ ನಾವಡ, ವಲಯಾಧ್ಯಕ್ಷ ಸಂತೋಷ್ ಜಿ. ವಲಯ ಉಪಾಧ್ಯಕ್ಷೆ ಸೌಮ್ಯ ರಾಕೇಶ್ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ಜೇಸಿ ಉದಯ್ ಕೋಟ ಸ್ವಾಗತಿಸಿ, ಕಾರ್ಯದರ್ಶಿ ಅಭಿಜಿತ್ ವಂದನಾರ್ಪಣೆಗೈದರು. ಜೇಸಿ ಶೇಖರ್ ಕುಮಾರ್, ನಾಗರಾಜ, ಉಮೇಶ್ ಕುಂದರ್, ರವಿಚಂದ್ರ, ಕೇಶವ ಆಚಾರ್ ಕೋಟ, ಕಾರ್ತಿಕ್ ರಾಜ್, ಮನು ಹಂದಾಡಿ, ಪ್ರಸನ್ನ, ರಾಕೇಶ, ನಿತೇಶ, ಚಂದ್ರ ಉಪಸ್ಥಿತರಿದ್ದರು.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News,`ಸಾಸ್ತಾನ ಜೇಸಿ, ಮನು ಹಂದಾಡಿ, ಜೇಸಿ ಉದಯ್ ಕೋಟ, ಜೆಸಿಐ ಸಾಸ್ತಾನ ವೈಬ್ರೆಂಟ್, ಜೇಸಿ ದಿನೇಶ್ ಬಾಂಧವ್ಯ, ಶ್ರೀಧರ ಪಿ.ಎಸ್, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ