ಪೆಟ್ರೋಲ್‌ ಬಂಕ್‌ಗಳಲ್ಲಿ ಕಾರ್ಡ್‌ ಬಳಸಬಹುದು
ಜ.13ರವರೆಗೆ ಕಾರ್ಡ್ ವಹಿವಾಟು ಮುಂದುವರಿಸುವ ನಿರ್ಧಾರ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳ ಬಳಕೆ ಮೇಲೆ ಸೇವಾ ಶುಲ್ಕ ವಿಧಿಸಬೇಕೆಂಬ  ನಿರ್ಧಾರವನ್ನು ಬ್ಯಾಂಕ್‌ಗಳು ತಾತ್ಕಾಲಿಕವಾಗಿ ಹಿಂಪಡೆದಿರುವುದರಿಂದ ಜನವರಿ13 ರವರೆಗೆ ಕಾರ್ಡ್ ವಹಿವಾಟು ಮುಂದುವರಿಸಲು ಬಂಕ್‌ ಮಾಲೀಕರು ನಿರ್ಧರಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳು, ಪೆಟ್ರೋಲ್ ಬಂಕ್ ವಿತರಕರು ಮತ್ತು ಸರಕಾರಿ ಸಾಮ್ಯದ ತೈಲ ಸಂಸ್ಥೆಗಳ ಮಧ್ಯೆ ಮಾತುಕತೆ ನಡೆದ ಬಳಿಕ ವಹಿವಾಟು ಶುಲ್ಕ ಹೇರಿಕೆಯ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆಯಲು ಬ್ಯಾಂಕುಗಳು ನಿರ್ಧರಿಸಿದವು.

ಮಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ ಅಖಿಲ ಭಾರತ ಪೆಟ್ರೋಲಿಯಂ ವರ್ತಕರ ಸಂಘದ ಪದಾಧಿಕಾರಿಗಳು ಸಭೆ ನಡೆಸಿದ್ದ ಬ್ಯಾಂಕ್‌ಗಳು ಸೇವಾ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿ ಕಾರ್ಡ್‌ ಮೂಲಕ ಹಣ ಪಾವತಿಸುವ ಸೌಲಭ್ಯವನ್ನು ಮಧ್ಯರಾತ್ರಿಯಿಂದಲೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದರು.  ತಡರಾತ್ರಿ  ನಿಲುವು ಬದಲಿಸಿದ್ದಾರೆ.

ಇದನ್ನೂ ಓದಿ:
►►ಕಾರ್ಡ್ ಕೊಟ್ಟರೆ ನಿಮಗೆ ಇಂಧನ ಸಿಗದು, ಕ್ಯಾಶ್ ತಗೊಂಡು ಹೋಗಲೇಬೇಕು. ಯಾಕೆ?
http://bit.ly/2jqdkjs

Related Tags: Card Swipe, Petrol Stations, Service Tax, Karavalikaranataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ