ಹೆಮ್ಮಾಡಿ: ಹಳೆ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

ಕರಾವಳಿ ಕರ್ನಾಟಕ ವರದಿ
ಕುಂದಾಪುರ:
ಜನತಾ ಪ್ರೌಢ ಶಾಲೆ ಹೆಮ್ಮಾಡಿ ಇದರ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಸುದೀರ್ಘ 32 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ  ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ನಂದಿ ದೇವಾಡಿಗ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರಾಜು ಪೂಜಾರಿ ಕಾಳೂರಮನೆ, ಚಂದ್ರ ನಾಯ್ಕ್, ಕಾರ್ಯದರ್ಶಿಯಾಗಿ ರಾಘವೇಂದ್ರ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ಉದಯ್ ಆಚಾರ್, ಕೋಶಾಧಿಕಾರಿಯಾಗಿ ಪತ್ರಕರ್ತ ಶಶಿಧರ ಹೆಮ್ಮಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಪೂಜಾರಿ ಅರೆಕಲ್ಲು ಮನೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಕಾಂತ ಹೆಮ್ಮಾಡಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ, ನರಸಿಂಹ ಗಾಣಿಗ, ರವೀಶ್ ಡಿ.ಎಚ್, ಗಣೇಶ್ ಕಟ್ ಬೇಲ್ತೂರು, ಸತೀಶ್ ಪೈ, ಜಗದೀಶ್ ಶೆಟ್ಟಿ, ಮಹೇಂದ್ರ ದೇವಾಡಿಗ, ಸಚಿನ್, ಲೋಹಿತಾಶ್ವ, ಜೆರಾಲ್ಡ್ ಕ್ರಾಸ್ತಾ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಗೊಂಡ ಹಳೆ ವಿದ್ಯಾರ್ಥಿ ಸಂಘಕ್ಕೆ ಶಾಲಾ ಮುಖ್ಯೋಪಾಧ್ಯಾಯ ಮೋಹನ್ ದಾಸ್ ಶೆಟ್ಟಿ ಶುಭ ಹಾರೈಸಿ ಮಾತನಾಡಿದರು. ಶಿಕ್ಷಕರಾದ ದಿನಾಕರ, ವಿಠಲ, ಜಗದೀಶ್ ಶೆಟ್ಟಿ, ಮಹೇಂದ್ರ, ಶ್ರೀಧರ ಗಾಣಿಗ, ದೇವೇಂದ್ರ ನಾಯ್ಕ್, ಗುಮಾಸ್ತ ರಘುರಾಮ್, ನಾಗೇಶ್ ಉಪಸ್ಥಿತರಿದ್ದರು.

ಶ್ರೀಕಾಂತ ಹೆಮ್ಮಾಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ರಾಘವೇಂದ್ರ ಕುಲಾಲ್ ವಂದಿಸಿದರು.

Related Tags: New Committee, Old Students Union, Janatha High School Hemmady, President Nandhi Devadiga, Secretary Raghavendra Kulal, Shashidhar Hemmady, Raju Poojary, Chandra Naik, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ