ನಾದಿನಿಯ ತುಟಿ ಕಚ್ಚಿದ ಭಾವ ಸೆರೆ
ಯುವಕನೊಬ್ಬ ನಾದಿನಿಯನ್ನೂ ಮದುವೆಯಾಗಲು ಬಯಸಿ ಹೆಣೆದ ನಾಟಕದ ನೈಜ್ಯತೆ ಬಯಲು.

ಕರಾವಳಿಕರ್ನಾಟಕ ವರದಿ
ಬೆಂಗಳೂರು:
ಕಾಡುಗೊಂಡನಹಳ್ಳಿಯಲ್ಲಿ ಯುವತಿಯನ್ನು ಹಿಂದಿನಿಂದ ತಬ್ಬಿಕೊಂಡು ಕೈ ಹಿಡಿದು ಎಳೆದಾಡಿ ಮುತ್ತು ಕೊಟ್ಟು, ತುಟಿ ಹಾಗೂ ನಾಲಿಗೆ ಕಚ್ಚಿದ್ದ ಆಕೆಯ ಭಾವ ಇರ್ಷಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಾದಿನಿ ಈತನ ಅಪ್ಪುಗೆಯಿಂದ ಬಿಡಿಸಿಕೊಳ್ಳಲು ಯತ್ನಿಸಿದಾಗ, ಇನ್ನೂ ಬಿಗಿಯಾಗಿ ತಬ್ಬಿಕೊಂಡು ಕಾಲುಗಳನ್ನು ತುಳಿದಿದ್ದ. ಯುವತಿಯ ಮಾನ ಹಾನಿಯಾದ ಸುದ್ದಿ ಹಬ್ಬಿದರೆ ಆಕೆಯನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ ತಮ್ಮ ಮದುವೆಗೆ ಅನುಕೂಲವಾದೀತು ಎಂದು ಈ  ನಾಟಕ ಮಾಡಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಕೆ.ಜಿ.ಹಳ್ಳಿಯಲ್ಲಿ ಬೆಳಿಗ್ಗೆ 6:30ರ ಹೊತ್ತಿಗೆ ಬುರ್ಖಾಧಾರಿ ಯುವತಿಯನ್ನು ದುಷ್ಕರ್ಮಿಯೊಬ್ಬ ತಬ್ಬಿಕೊಂಡು ತುಟಿ ಕಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿತ್ತು.

ಪೊಲೀಸ್ ವಿಚಾರಣೆ ಸಂದರ್ಭ ನಾದಿನಿಯು ತನ್ನ ನಾಲಿಗೆಯನ್ನು ಇರ್ಷಾದ್ ಕಚ್ಚಿಲ್ಲ, ತಾನೇ ನಾಲಗೆ ಕಚ್ಚಿಕೊಂಡಿದ್ದಾಗಿ ಹೇಳಿಕೆ ನೀಡಿದ್ದಳು. ಯುವತಿಯ ಅಕ್ಕನನ್ನು ಮದುವೆಯಾದ ಇರ್ಷಾದ್ ನಾದಿನಿಯನ್ನೂ ಮದುವೆಯಾಗಲು ಬಯಸಿದ್ದ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೈದು ಮಹಿಳೆಯ ಗೌರವಕ್ಕೆ ಧಕ್ಕೆ (ಐಪಿಸಿ 354), ಅಶ್ಲೀಲ ಪದಬಳಕೆ ಅಥವಾ ಸಂಜ್ಞೆ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ (ಐಪಿಸಿ 509) ಆರೋಪದಡಿ ಕಾಡುಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಚ್‌ಬಿಆರ್‌ ಲೇಔಟ್‌ ನಿವಾಸಿ ಯುವತಿ  ಕೋರಮಂಗಲದ ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದು, ಬೆಳಗಿನ ಪಾಳಿ ಇದ್ದಿದ್ದರಿಂದ  ಮನೆ ಸಮೀಪದ ಬಸ್‌ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದರು. ಈ ಸಂದರ್ಭ ಹಿಂಬಾಲಿಸಿ ಬಂದ ಇರ್ಷಾದ್, ಈ ಕೃತ್ಯ ಎಸಗಿದ್ದಾನೆ. ಬುರ್ಖಾ ಧರಿಸಿಕೊಂಡು ಮನೆಯಿಂದ ಹೊರಬರುತ್ತಿದ್ದ ಯುವತಿ, ಪ್ರತಿದಿನವೂ ಒಂಟಿಯಾಗಿಯೇ ನಿಲ್ದಾಣಕ್ಕೆ ಹೋಗುತ್ತಿದ್ದರು.
 
ಕ್ಯಾಪ್‌ ಇರುವ ಸ್ವೆಟರ್‌ ಧರಿಸಿರುವ ಆರೋಪಿಯು ಅದೇ ರಸ್ತೆಯಲ್ಲಿ 2–3 ಬಾರಿ ಓಡಾಡಿದ, ಯುವತಿ ಬರುತ್ತಿದ್ದಂತೆ ಆಕೆಯನ್ನು ಹಿಂಬಾಲಿಸಿ ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಸಿಕ್ಕಿದ್ದು, ಯುವತಿ ಮೇಲೆ ಹಲ್ಲೆ ನಡೆಸಿದ್ದ ಬಗ್ಗೆ ಯಾವುದೇ ದೃಶ್ಯಗಳು ಸಿಕ್ಕಿರಲಿಲ್ಲ.
 

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ