ಪೆಟ್ರೋಲ್ ಬೇಕೆ? ಕ್ಯಾಶ್ ತಗೊಂಡು ಹೋಗಿ
ಶೇ.1ರಷ್ಟು ವಹಿವಾಟು ಶುಲ್ಕ ವಿಧಿಸುವ ಬ್ಯಾಂಕುಗಳ ದಿಢೀರ್ ವಿವೇಚನಾರಹಿತ ಕ್ರಮ ವಿರೋಧಿಸಿ ಕಾರ್ಡ್ ಮೂಲಕ ಕ್ಯಾಶ್‌ಲೆಸ್ ವ್ಯವಹಾರ ನಿಷೇಧ.

ಕರಾವಳಿಕರ್ನಾಟಕ ವರದಿ
ಬೆಂಗಳೂರು:
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಮೂಲಕ ಹಣ ಸ್ವೀಕಾರ ಸಂದರ್ಭ ಶೇ.1ರಷ್ಟು ವಹಿವಾಟು ಶುಲ್ಕ ವಿಧಿಸುವ ಬ್ಯಾಂಕುಗಳ ದಿಢೀರ್ ವಿವೇಚನಾರಹಿತ ಕ್ರಮ ವಿರೋಧಿಸಿ ನಾಳೆಯಿಂದ ರಾಜ್ಯಾದ್ಯಂತ ಪೆಟ್ರೋಲ್ ಬಂಕ್ ಗಳು ಕಾರ್ಡ್ ಸ್ವೀಕರಿಸುವುದನ್ನು ನಿಲ್ಲಿಸಲಿವೆ.

ತೈಲ ಮಾರಾಟ ಸಂಸ್ಥೆಗಳು ವಿತರಕರ ಲಾಭಾಂಶವನ್ನು ಶೇ.0.3ರಿಂದ ಶೇ.0.5ರ ವರೆಗೆ ನಿಗದಿಗೊಳಿಸಿವೆ. ಬ್ಯಾಂಕುಗಳು ನಮ್ಮ ಮೇಲೆ ವಹಿವಾಟು ಶುಲ್ಕ ಹೇರಿದರೆ ನಾವು ಉಳಿಯುವುದೇ ಕಷ್ಟ. ಬ್ಯಾಂಕುಗಳು ಜನರ ಕ್ಷಮೆ ಯಾಚಿಸಬೇಕು ಎಂದು ಬೆಂಗಳೂರು ಪೆಟ್ರೋಲಿಯಂ ಡೀಲರ್ ಸಂಘದ ಅಧ್ಯಕ್ಷ ಬಿ. ಆರ್.ರವೀಂದ್ರನಾಥ ಹೇಳಿದ್ದಾರೆ.

ಕೆಲವು ಪೆಟ್ರೋಲ್ ಬಂಕುಗಳಲ್ಲಿ ಇಂದು ಮಧ್ಯಾಹ್ನದಿಂದಲೇ ಕಾರ್ಡ್ ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ ಎಂದು ಗ್ರಾಹಕರು ದೂರುತ್ತಿದ್ದಾರೆ. ನೋಟು ನಿಷೇಧ ಬಳಿಕ ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ನಿಷೇಧಿಸಿದರೆ ಜನ ಸಾಮಾನ್ಯರು ಮತ್ತೊಮ್ಮೆ ತೊಂದರೆ ಎದುರಿಸುವುದಂತೂ ಖಚಿತವಾಗಿದೆ.
 

Related Tags: No Card Swipe, Petrol Stations, Service Tax
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ