ಅಮೇರಿಕ ಸೇನೆ: ಧಾರ್ಮಿಕ ಸ್ವಾತಂತ್ರ್ಯ ಹೆಚ್ಚಳ

ಕರಾವಳಿ ಕರ್ನಾಟಕ ವರದಿ
ವಾಷಿಂಗ್ಟನ್‌:
ಭಾರತೀಯ ಸೇನೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹೆಚ್ಚಾಗುತ್ತಿರುವ ಸಂದರ್ಭದಲ್ಲೆ ಅತ್ತ ಅಮೇರಿಕ ಧಾರ್ಮಿಕ ಅಲ್ಪಸಂಖ್ಯಾತರ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಸಿಖ್ಖರು ಸೇರಿದಂತೆ ಇತರ ಧರ್ಮಗಳ ಯೋಧರಿಗೆ ಪೇಟಾ ಅಥವಾ ಹಿಜಬ್‌ ಧರಿಸಲು ಹಾಗೂ ಗಡ್ಡ ಬಿಡಲು ಅವಕಾಶ ನೀಡಿದೆ.

ಈ ಬಗ್ಗೆ ಹೊಸ ನಿಯಮಾವಳಿಗಳನ್ನು ಗುರುವಾರ ಪ್ರಕಟಿಸಲಾಗಿದೆ. ಇದರಿಂದ ಸಿಖ್‌ ಧರ್ಮೀಯರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಬಹುದಿನಗಳ ಬೇಡಿಕೆಗೆ ಈಡೇರಿದೆ.

ಈ ಹೊಸ ನಿಯಮಾವಳಿಗಳಿಗೆ ಒಪ್ಪಿಗೆ ದೊರೆತ ಬಳಿಕ, ಸೇನೆಯ ಎಲ್ಲ ಹಂತದ ಹುದ್ದೆಗಳಿಗೂ ಅನ್ವಯವಾಗಲಿದೆ. ಅನಿವಾರ್ಯ ಪ್ರಸಂಗ ಹೊರತುಪಡಿಸಿ, ಸೇವಾವಧಿಯಲ್ಲಿ ಧಾರ್ಮಿಕ ನಿಯಮದಂತೆ ನಡೆದುಕೊಳ್ಳಲು ಅನುವು ಮಾಡಿಕೊಡಲಾಗಿದೆ. ಹೊಸ ನಿಯಾಮವಳಿಯನ್ನು ಸಿಖ್‌ ಯೋಧರು ಹಾಗೂ ವಕೀಲರು ಸ್ವಾಗತಿಸಿದ್ದಾರೆ.

ಇದೊಂದು ಅತ್ಯುತ್ತಮ ತೀರ್ಮಾನ. ಇದರಿಂದ  ಸೇನೆಗೂ ಸಹಕಾರಿಯಾಗಲಿದೆ.   ಹೊಸ ನಿಯಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ಖರು ಸೇನೆಗೆ ಸೇರಲು ಅನುಕೂಲಕರವಾಗಲಿದೆ ಎಂದು ಸಂಸದ ಜಾನ್ ಕ್ರೌಲಿ ಅಭಿಪ್ರಾಯಪಟ್ಟಿದ್ದಾರೆ.

Related Tags: US Army, Sikh Soldiers, Turban
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ