ಉಡುಗೆ ಕಾರಣ: ಮಹಾದೇವಿ ಹೇಳಿಕೆ ವಿವಾದ

ಕರಾವಳಿ ಕರ್ನಾಟಕ ವರದಿ
ಧಾರವಾಡ:
ಯುವತಿಯರ ಉಡುಗೆ ತೊಡುಗೆಯೇ ಲೈಂಗಿಕ ದೌರ್ಜನ್ಯಕ್ಕೆ ಕಾರಣ ಎಂದು ಮಾತೆ ಮಹಾದೇವಿ ನೀಡಿರುವ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಹೊಸವರ್ಷ ಆಚರಣೆಯ ರಾತ್ರಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತಂತೆ ಧಾರವಾಡದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹೆಣ್ಣುಮಕ್ಕಳು ಹೊಸ ವರ್ಷದ ಹೆಸರಿನಲ್ಲಿ ಈ ರೀತಿಯ ಸ್ವೇಚ್ಛಾಚಾರದ ವರ್ತನೆ ತೋರುವುದು ಅವಮಾನಕರ. ಆದಷ್ಟು ಬೇಗ ವಸ್ತ್ರ ಸಂಹಿತೆ ಜಾರಿಯಾಗಬೇಕು. ಹೀಗಾದಲ್ಲಿ ಮಾತ್ರ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಬೀಳುತ್ತದೆ. ಅತ್ಯಾಚಾರಗಳು ಹೆಚ್ಚಾಗುವಲ್ಲಿ ಅರ್ಧ ತಪ್ಪು ಹೆಣ್ಣು ಮಕ್ಕಳದು, ಇನ್ನರ್ಧ ತಪ್ಪು ಸಮಾಜದ್ದು. ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಈ ಹೇಳಿದರು.

ಇನ್ನು ಸಿನಿಮಾ ಮತ್ತು ದೃಶ್ಯ ಮಾಧ್ಯಮಗಳೂ ಇದಕ್ಕೆಲ್ಲಾ ಕಾರಣ. ಇವುಗಳಿಗೆಲ್ಲ ಕಡಿವಾಣ ಹಾಕಬೇಕಿದೆ. ಅರಬ್ ದೇಶದಲ್ಲಿರುವಂಥ ಕಠಿಣ ಕಾನೂನು ಹಾಗೂ ಆ ದೇಶಗಳಲ್ಲಿರುವ ವಸ್ತ್ರಸಂಹಿತೆ ನಮ್ಮಲ್ಲಿಯೂ ಜಾರಿಗೆ ಬರಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Related Tags: Mathe Mahaedevi, Sexual Assault, Modern Dress, Western Culture
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ