ಯುವತಿಯ ತುಟಿ ಕಚ್ಚಿದ ದುಷ್ಕರ್ಮಿ
ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಹಸಿರಾಗಿರುವಾಗಲೇ ಈ ದೌರ್ಜನ್ಯ ನಡೆದಿದೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಕಾಡುಗೊಂಡನಹಳ್ಳಿಯಲ್ಲಿ ದುಷ್ಕರ್ಮಿಯೊಬ್ಬ ಯುವತಿಯ ತುಟಿ ಕಚ್ಚಿ ಪರಾರಿಯಾದ ಘಟನೆ ನಡೆದಿದೆ.  ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಹಸಿರಾಗಿರುವಾಗಲೇ ಈ ದೌರ್ಜನ್ಯ ನಡೆದಿದೆ. ಕೈ ಹಿಡಿದು ಎಳೆದಾಡಿ ಮುತ್ತು ಕೊಟ್ಟು, ತುಟಿ ಹಾಗೂ ನಾಲಿಗೆ ಕಚ್ಚಿದ್ದ. ಬಿಡಿಸಿಕೊಳ್ಳಲು ಯತ್ನಿಸಿದಾಗ, ಬಿಗಿಯಾಗಿ ತಬ್ಬಿಕೊಂಡು ಕಾಲುಗಳನ್ನು ತುಳಿದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ. ಗಾಯಗೊಂಡಿರುವ ಯುವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೈದು ಮಹಿಳೆಯ ಗೌರವಕ್ಕೆ ಧಕ್ಕೆ (ಐಪಿಸಿ 354), ಅಶ್ಲೀಲ ಪದಬಳಕೆ ಅಥವಾ ಸಂಜ್ಞೆ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ (ಐಪಿಸಿ 509) ಆರೋಪದಡಿ ಕಾಡುಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಎಚ್‌ಬಿಆರ್‌ ಲೇಔಟ್‌ ನಿವಾಸಿ ಯುವತಿ  ಕೋರಮಂಗಲದ ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದು, ಬೆಳಗಿನ ಪಾಳಿ ಇದ್ದಿದ್ದರಿಂದ  ಮನೆ ಸಮೀಪದ ಬಸ್‌ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದರು. ಈ ಸಂದರ್ಭ ಹಿಂಬಾಲಿಸಿ ಬಂದ ದುಷ್ಕರ್ಮಿ, ಈ ಕೃತ್ಯ ಎಸಗಿದ್ದಾನೆ. ಬುರ್ಖಾ ಧರಿಸಿಕೊಂಡು ಮನೆಯಿಂದ ಹೊರಬರುತ್ತಿದ್ದ ಯುವತಿ, ಪ್ರತಿದಿನವೂ ಒಂಟಿಯಾಗಿಯೇ ನಿಲ್ದಾಣಕ್ಕೆ ಹೋಗುತ್ತಿದ್ದರು.
 
ಕ್ಯಾಪ್‌ ಇರುವ ಸ್ವೆಟರ್‌ ಧರಿಸಿರುವ ಆರೋಪಿಯು ಅದೇ ರಸ್ತೆಯಲ್ಲಿ 2–3 ಬಾರಿ ಓಡಾಡಿದ್ದಾನೆ. ಯುವತಿ ಬರುತ್ತಿದ್ದಂತೆ ಆಕೆಯನ್ನು ಹಿಂಬಾಲಿಸಿ ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಸಿಕ್ಕಿದ್ದು, ಯುವತಿ ಮೇಲೆ ಹಲ್ಲೆ ನಡೆಸಿದ್ದ ಬಗ್ಗೆ ಯಾವುದೇ ದೃಶ್ಯಗಳು ಸಿಕ್ಕಿಲ್ಲ.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ