ನಾಯಕತ್ವಕ್ಕೆ ಎಂ.ಎಸ್.ಧೋನಿ ವಿದಾಯ

ನವದೆಹಲಿ: ಟೀಮ್ ಇಂಡಿಯಾದ ಯಶಸ್ವಿ ಕಪ್ತಾನರೆಂದು ಖ್ಯಾತರಾದ ಮಹೇಂದ್ರ ಸಿಂಗ್ ಧೋನಿ ಭಾರತ ಏಕದಿನ ಮತ್ತು ಟಿ–20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಆದರೆ ಟೀಮ್ ಇಂಡಿಯಾ ಆಟಗಾರರಾಗಿ ಧೋನಿ ಮುಂದುವರಿಯಲಿದ್ದಾರೆ. ಈ ನಿರ್ಧಾರದಿಂದಾಗಿ ಮುಂದಿನ ಸರಣಿಯಲ್ಲಿ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುವ ಸಾಧ್ಯತೆಯಿದೆ.
 
ಜನವರಿ 15ರಿಂದ ನಡೆಯುವ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವ ಭಾರತ ತಂಡದ ಆಯ್ಕೆಯು ಶುಕ್ರವಾರ ನಡೆಯಲಿದೆ. ಅದಕ್ಕೂ ಮುನ್ನವೇ ದೋನಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
 
ಭಾರತ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಧೋನಿ ಒಬ್ಬರಾಗಿದ್ದಾರೆ. ಅವರ ನೇತೃತ್ವದಲ್ಲಿ ತಂಡವು  2007ರ ಟಿ–20 ವಿಶ್ವಕಪ್, 2011ರ ಐಸಿಸಿ ಏಕದಿನ ವಿಶ್ವಕಪ್  ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. 2014ರ ಡಿಸೆಂಬರ್‌ನಲ್ಲಿ ಧೋನಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
 
283 ಏಕದಿನ ಪಂದ್ಯಗಳು, 9110 ರನ್‌ಗಳು, 9  ಶತಕಗಳು, 61 ಅರ್ಧಶತಕಗಳು, ವಿಕೆಟ್‌ ಕೀಪಿಂಗ್‌ನಲ್ಲಿ 267 ಕ್ಯಾಚ್ ಮತ್ತು 92 ಸ್ಟಂಪಿಂಗ್ ಧೋನಿ ಸಾಧನೆ.

Related Tags: M. S. Dhoni. Indian Cricket
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ