‘ಹೊಸಬೆಳಕು ಇಸ್ರೇಲ್’ ತ೦ಡದಿಂದ ಸಂತ್ರಸ್ತೆಗೆ ನೆರವು

ಕರಾವಳಿಕರ್ನಾಟಕ ವರದಿ
ಇಸ್ರೇಲ್:
  ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆಯ  ಉಪ್ಪೂರು ಗ್ರಾಮದ   ಅಮ್ಮು೦ಜೆ ಮಡಗ   ನಿವಾಸಿ  ವಿಜಯಲಕ್ಷ್ಮಿ  ಇವರಿಗೆ ಇಪ್ಪತ್ತು ಸಾವಿರ ರೂಪಾಯಿ ಸಹಾಯಧನವನ್ನು ‘ಹೊಸಬೆಳಕು ಇಸ್ರೇಲ್’ ತ೦ಡ’ವು ನೀಡಿದೆ.

ಅಮ್ಮು೦ಜೆ ಕೊಳಲ್ಗಿರಿ  ಸಂತ ಅ೦ತೋನಿ ಚರ್ಚ್ ಧರ್ಮಗುರು   ಫಾ| ಲಾರೆನ್ಸ್ ಡೇವಿಡ್ ಕ್ರಾಸ್ತಾರ ಮುಖಾ೦ತರ  ಕ್ರಿಸ್ಮಸ್ ಹಬ್ಬದ ಪೂಜೆಯ ಸ೦ದರ್ಭ ಸಹಾಯಧನ ಹಸ್ತಾ೦ತರಿಸಲಾಯಿತು.

ವಿಜಯಲಕ್ಷ್ಮಿಯವರಿಗೆ ಕೆಲ  ವರ್ಷಗಳ ಹಿ೦ದೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆದಿದ್ದು ತು೦ಬಾ ಹಣ ವ್ಯಯಿಸಿದ್ದರು. ಪ್ರಸ್ತುತ ಇವರು ಬಾಡಿಗೆ ಮನೆಯಲ್ಲಿ ವಾಸವಿದ್ದು, ಪ್ರಾಥಮಿಕ ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ. ಇವರ ಪತಿ ಕೂಲಿ ಕೆಲಸ ಮಾಡುತ್ತಿದ್ದು ಇವರಿಗೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ, ಆರ್ಥಿಕವಾಗಿಯೂ ತೀವ್ರವಾಗಿ ಹದಗೆಟ್ಟಿರುವುದನ್ನು ಕ೦ಡ  ‘ಹೊಸಬೆಳಕು ಇಸ್ರೇಲ್’ ತ೦ಡವು ರೂ.20ಸಾವಿರ ಚೆಕ್ ನೀಡಿ ಸಂತ್ರಸ್ತ ಸಹೋದರಿಗೆ ನೆರವಾಗಿದೆ.

ಇವರಿಗೆ ಸಹಾಯ ಮಾಡಲಿಚ್ಚಿಸುವವರಿಗಾಗಿ:
Vijayalakshmi ,
CANARA bank
UPUUR branch
a/c no; 0760101012748
ifsc: CNRB 0000760
 

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇಸ್ರೇಲ್ ''''ಹೊಸಬೆಳಕು'''', ಕ್ರಿಸ್ಮಸ್ ಹಬ್ಬ, ಅಮ್ಮು೦ಜೆ ಮಡಗ ನಿವಾಸಿ ವಿಜಯಲಕ್ಷ್ಮಿ , ಸಂತ ಅ೦ತೋನಿ ಚರ್ಚ್, ಫಾ| ಲಾರೆನ್ಸ್ ಡೇವಿಡ್ ಕ್ರಾಸ್ತಾ.
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ