ಬದುಕಿ, ಬದುಕಲು ಬಿಡುವುದೇ ಮಾನವ ಶೇಷ್ಠ ಧರ್ಮ

ಕರಾವಳಿ ಕರ್ನಾಟಕ ವರದಿ/ಆರ್.ಬಿ.ಜಗದೀಶ್
ಕಾರ್ಕಳ: ಬದುಕಿ, ಬದುಕಲು ಬಿಡುವುದು ಮಾನವನ ಶೇಷ್ಠ ಧರ್ಮವಾಗಿದೆ. ಎಲ್ಲಾ ಸಮಾಜದಲ್ಲಿ ಎಲ್ಲಾ ಅಂತಸ್ತಿನ ಜನರಿದ್ದು, ಕೆಳಸ್ತರದಲ್ಲಿರುವವರನ್ನು ಗುರುತಿಸುವ ಕಾರ್ಯ ಸಂಘಟನೆಗಳು ನಡೆಸಬೇಕಾಗಿದೆ. ತನು ಮನದಿಂದ ಕಾರ್ಯ ನಿರ್ವಹಿಸುವವರೇ ಸ್ವಯಂ ಸೇವಕರು. ಅದು ಗೌರವದ ಕೆಲಸ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್ ಅಭಿಮತ ವ್ಯಕ್ತಪಡಿಸಿದರು.

ಹಿರಿಯಂಗಡಿ ಮಹಾವೀರ ಭವನದಲ್ಲಿ ಜರುಗಿದ್ದ ಕಾರ್ಕಳ ವಿಧಾನಸಭಾ ಕ್ಷೇತ್ರದ ಜೈನ ಸ್ವಯಂಸೇವಕರ ತಂಡ ಮತ್ತು ಸ್ವಸಹಾಯ ಸಂಘದ ಸಮಾವೇಶ ಮತ್ತು ಸಂಘದ ಕಚೇರಿ ಉದ್ಘಾಟನೆ ಬಳಿಕ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಜನಸಂಖ್ಯೆ ಆಧಾರದಲ್ಲಿ ಸೌಲಭ್ಯಗಳನ್ನು ನೀಡಿದರೆ ಎಲ್ಲರಿಗೂ ಸಿಗುವಂತಾಗುತ್ತದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಪ್ರಬಲರಾಗಿ ಜಾಗೃತರಾಗುತ್ತಿದ್ದಾರೆ ಎಂದು ಅವರು ಹೇಳಿದರು

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿಧಾನಸಭಾ ಪ್ರತಿಪಕ್ಷ ಮುಖ್ಯ ಸಚೇತಕ ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ,  ಸರಕಾರದ ಸವಲತ್ತು ಎಲ್ಲಾ ಆರ್ಹ ವ್ಯಕ್ತಿಗಳಿಗೆ ದೊರೆತಾಗ ಯೋಜನೆ ಸಫಲವಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳ ಕರ್ತವ್ಯ ಮಹತ್ವದಾಗಿದೆ. ಎಲ್ಲಾ ಮಾಹಿತಿ ಕ್ರೋಡಿಕರಣದ ಫಲವಾಗಿ ಒಂದಲ್ಲ ಒಂದು ಯೋಜನೆಯನ್ನು ಕಾರ್ಕಳದಲ್ಲಿ ಅನುಷ್ಠಾನಗೊಳಿಸಲಾಗಿದೆ. ಜೈನ ಸಮುದಾಯಕ್ಕೆ ಶೇ.1 ಅನುಪಾತ ನೀತಿಯನ್ನು ಕೈಬಿಟ್ಟು ಜನಸಂಖ್ಯೆಗೆ ಅನುಗುಣವಾಗಿ ಯೋಜನೆಗಳನ್ನು ಹಾಕಿಕೊಂಡಾಗ ಅದರ ಪ್ರಯೋಜನೆ ಪರಿಣಾಮಕಾರಿಯಾಗುತ್ತದೆ. ಆನೆಕರೆ ಬಸದಿ ಅಭಿವೃದ್ಧಿಯನ್ನು ಕೇಂದ್ರೀಕೃತಗೊಳಿಸಿ ಮುಂದಿನ ಬಜೆಟ್ನಲ್ಲಿ ನೆರವು ಕೋರುವುದಾಗಿ ತಿಳಿಸಿದರು.

ಮಾಜಿಸಚಿವ, ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಜೈನ ಸಮುದಾಯವು ಸಮಾಜದಲ್ಲಿ ದೊಡ್ಡ ಗೌರವ ಸ್ಥಾನ ಪಡೆದಿದೆ. ಅಹಿಂಸವಾದ ತತ್ವದ ಮೂಲಕ ವಿಶ್ವಕ್ಕೆ ಶಾಂತಿ ಸಾಮರಸ್ಯ ಸಂದೇಶವನ್ನು ಸಾರಿದ ಏಕೈಕ ಧರ್ಮ ಇದಾಗಿದೆ. ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಜೈನರು ಸ್ವಾಭಿಮಾನಿಗಳು. ಉತ್ತರ ಭಾರತದಲ್ಲಿ ವ್ಯಾಪಾರಿಗಳಾಗಿಯೂ ಕರ್ನಾಟಕದಲ್ಲಿ ಕೃಷಿಕರಾಗಿ ಶ್ರಮ ಜೀವನ ನಡೆಸುತ್ತಿದ್ದಾರೆ. ಶಿಕ್ಷಣದಿಂದ ಸಮಾಜ ಬದಲಾವಣೆ ಸಾಧ್ಯ. ಆದುದರಿಂದ ಶಿಕ್ಷಣಕ್ಕೆ ಎಲ್ಲಾ ಸಮಾಜವು ಹೆಚ್ಚಿನ ಒತ್ತು ನೀಡಬೇಕು ಎಂದರು.

ಭಾರತೀಯ ಜೈನ್ ಮಿಲನ್ ವಲಯ-8ರ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಅಲ್ಪ ಸಂಖ್ಯಾತ ನಿಗಮದ ರಾಜ್ಯ ಅಧಕ್ಷ ಎಂ.ಎ.ಗಫೂರ್ ಮಾತನಾಡಿ, 1.2 ಕೋಟಿ ಅನುದಾನವನ್ನು ಕಾರ್ಕಳ ತಾಲೂಕುಒಂದಕ್ಕೆ ಅಲ್ಪಸಂಖ್ಯಾತ ನಿಗಮದಿಂದ ಸಹಾಯ ಧನ ನೀಡಿದೆ. 350 ಸ್ವಸಹಾಯದ ಮೂಲಕ 620 ಮಂದಿ ಸೌಲಭ್ಯ ಪಡೆದಿದ್ದಾರೆ. ನಿಗಮದಲ್ಲಿ ಶೇ. 80 ಮುಸಲ್ಮಾನರಿಗೆ. ಶೇ. 10 ಕ್ರಸ್ತರಿಗೆ, ಉಳಿದ ಶೇ.10ರಲ್ಲಿ ಬೌದ್ಧರು, ಪಾರ್ಸಿಗಳು, ಸಿಖ್, ಜೈನರಿಗೆ ಮೀಸಲಿಡಲಾಗಿದೆ. ಕರಾವಳಿಯ ಶಾಸಕರ ಸಹಕಾರದೊಂದಿಗೆ ಗುರಿ ಮೀರಿ ಸಾಧನೆಗಳು ನಡೆದಿರುವುದನ್ನು ಇಲ್ಲಿ ಪ್ರಸ್ತಾಪಿಸಿದರು. ಜನಸಂಖ್ಯೆಗೆ ಅನುಗುಣವಾಗಿ ಯೋಜನೆಯನ್ನು ರೂಪಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ. ಹೆಚ್ಚಿನ ಅನುದಾನದ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟು ಆರ್ಹ ಫಲಾನುಭವಿಗಳಿಗೆ ನೆರವು ಒದಗಿಸುವ ಕಾರ್ಯ ನಡೆಸುವುದಾಗಿ ಭರವಸೆ ನೀಡಿದರು.

ರಾಷ್ಟ್ರೀಯ ಅಲ್ಪಸಂಖ್ಯಾತ ನಿಗಮದಿಂದ 23 ಕೊಟಿ ಅನುದಾನ ಬಿಡುಗಡೆಯಾಗಬೇಕಾಗಿದೆ. ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಶೈಲೇಂದ್ರ ಜೈನ್ ಮಾತನಾಡಿ ಸರಕಾರ ಪ್ರತಿಯೊಂದು ಯೋಜನೆಯು ಅರಿತುಕೊಳ್ಳಬೇಕು. ನಿಗಮದಿಂದ ಪದವಿ ಶಿಕ್ಷಣ ಪಡೆಯಲು ಶೇ. 2ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಇದೆ. ವಿದೇಶದಲ್ಲಿ ಇರುವಂತಹ ವಿದ್ಯಾರ್ಥಿಗಳಿಗೂ ಇದರ ಸವಲತ್ತು ಪಾಪ್ತಿಯಾಗುತ್ತದೆ. ಜೈನ ಬಸದಿಗಳ ಅಭಿವೃದ್ಧಿಗೆ  ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ  ಅನುದಾನದ  ನೆರವು ಒದಗಿಸುವುದಾಗಿಯೂ ಹೇಳಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಜೈನ ಜೀಣೋದ್ಧಾರಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ವಿಜಯಕುಮಾರ್ ಮಾತನಾಡಿ ಕರ್ನಾಟಕದಲ್ಲಿ ಜೈನರು ಅಲ್ಪಸಂಖ್ಯಾತರಾಗಿದ್ದರೂ, ಉನ್ನತ  ವಿದ್ಯಾಭ್ಯಾಸ ಹೊಂದಿದ್ದಾರೆ. ದೇಶದಲ್ಲಿ ಅದಾಯ ತೆರೆಗೆ ಪಾವರಿಸುವಲ್ಲಿ ಮೊದಲಿಗರು. ಬಡತನದ ವಿರುದ್ಧ  ಹೋರಾಟ ನಡೆಸಿ ಪ್ರಗತಿ ಸಾಧಿಸಬೇಕೆಂದರು.

ಸಂಘದ ರಾಜ್ಯ ಸಂಚಾಲಕ ನೇಮಿರಾಜ ಅರಿಗ ಸಭಾಧ್ಯಕ್ಷತೆ ವಹಿಸಲಿ ಮಾತನಾಡಿ, ಸಂಘಟನೆಯ ಸಹಕಾರದಿಂದ ಕಾರ್ಕಳದಲ್ಲಿ 40 ಲಕ್ಷ ಅನುದಾನವನ್ನು ಸ್ವಸಹಾಯ ಸಂಘಗಳಿಗೆ ಒದಗಿಸಿದ್ದು, ಅದರಲ್ಲಿ 20 ಲಕ್ಷ ಸಹಾಯಧನವಾಗಿದೆ. 8 ಮನೆಗಳಿಗೆ ತಲಾ ಒಂದು ಲಕ್ಷ ನೆರವು ನೀಡಲಾಗಿದೆ. 20 ಗಂಗಾಕಲ್ಯಾಣ ಸೌಲಭ್ಯ ಒದಗಿಸಲಾಗಿದೆ. ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಿಂದ ಶಾದಿ ಭಾಗ್ಯ ಯೋಜನೆಯಡಿಯಲ್ಲಿ 16 ಮಂದಿಗೆ ತಲಾ 50 ಸಾವಿರದಂತೆ ಸಹಾಯಧನ ಒದಗಿಸಲು ನೆರವಾಗಿದೆ. ರಾಜ್ಯದಲ್ಲಿ 15 ಸಾವಿರ ಸದಸ್ಯರಿದ್ದು, 8 ಸಾವಿರ ಮಹಿಳೆಯ ಸಂಖ್ಯೆ ಬಲ ಹೊಂದಿದೆ ಎಂದರು. ಜೈನ ಸಮುದಾಯಕ್ಕಾಗಿ ಅಲ್ಪ ಸಂಖ್ಯಾತ ನಿಗಮವು 30 ಕೋಟಿ ಅನುದಾನವನ್ನು ಮೀಸಲಿಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ನಾರಾವಿ ಜಿನಚೈತ್ಯಾಲಯಗಳ ಆಡಳಿತ ಸಮಿತಿಯ ಕಾರ್ಯಧ್ಯಕ್ಷ ಎನ್.ಪ್ರೇಮ್ಕುಮಾರ್, ಕನರ್ಾಟಕ ಜೈನ ಪುರೋಜಿತ ಸಂಘದ ಅಧ್ಯಕ್ಷ ಚಂದ್ರರಾಜೇಂದ್ರ ಅರಸು, ಕಾರ್ಕಳ ಶ್ರೀ ಜಿನವಾನಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಕೆ.ಶಶಿಕಲಾ ಹೆಗ್ಡೆ, ರಾಜ್ಯದ ವಿವಿಧ ಸಂಘಟನೆಯಗಳ ಸಂಚಾಲಕರಾದ ಬಿ.ಎಸ್.ಪ್ರಕಾಶ್ ಮೈಸೂರು, ಡಿ.ಕೆ.ಜೈನ್ ಚಿಕ್ಕಮಗಳೂರು, ಕರಿಬಸವಣ್ಣನವರ್ ಹಾವೇರಿ, ಧಾರವಾಡ ವಿನಾಯಕ ಶೆಟ್ಟಿ, ಪ್ರವೀಣ್ ಬಲ್ಲಾಳ್, ಪಾಶ್ರ್ವನಾಥ ಜೈನ್ ಬೆಳ್ತಂಗಡಿ, ವೃಷ್ಭರಾಜ ಜೈನ್ ಬಂಟ್ವಾಳ, ಪ್ರಸಿದ್ಧ ಜೈನ್ ಮೂಡಿಗೆರೆ, ಶಿವರಾಜ್ ಜೈನ್ ಕಾರ್ಕಳ, ಶಾಂತಿರಾಜ ಕೊಪ್ಪಳ, ಜಯಪ್ರಕಾಶ್ ನಂದ್ರೇಕರ್ ಬಾಗಲಕೋಟೆ, ಪ್ರಕಾಶ್ ಮುತ್ತಿನ ಗದಗ, ಸುರೇರ್ಶ ಹಿರೇವಳ್ಳಿ ಕಲಕಟಗಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಾಲಕ್ಷ್ಮೀ ಸ್ವಸಹಾಯ ಗೂಂಪಿನ ಸದಸ್ಯರು ಪ್ರಾರ್ಥಿಸಿದರು. ಸಾಂಸ್ಕೃತಿಕ ಕಕಾರ್ಯದರ್ಶಿ ಶರ್ಮಿಳಾ ನಿರಂಜನ್ ಅಜಿಲ ವರದಿ ಮಂಡಿಸಿದರು.  ಸಲಹೆ ಸಮಿತಿ ಗೌರವಧ್ಯಕ್ಷ ಧರಣೇಂದ್ರ ಜೈನ್ ಸಂದೇಶ ಪತ್ರ ವಾಚಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಶ್ರೇಯಾಂಸ ಜೈನ್ ಸ್ವಾಗತಿಸಿದರು. ಪಾಶ್ರ್ವನಾಥ ವರ್ಮ ಸಣ್ಯವಾದವಿತ್ತರು. ಅಜಿತ್ ಕೊಕ್ರಾಡಿ ನಿರೂಪಿಸಿದರು.

ಅತ್ಯುತ್ತಮ ಸ್ವಸಹಾಯ ಸಂಘಗಳಿಗೆ ಪುರಸ್ಕಾರ
ವೃಷಭ ಸ್ವಸಹಾಯ ಸಂಘ ಹುಕ್ರಟ್ಟೆ ಮಾಳ, ಸಮೃದ್ಧಿ  ಸ್ವಸಹಾಯ ಸಂಘ ಬೋರ್ಗಲ್ಗುಡ್ಡೆ ನಿಟ್ಟೆ ಇವುಗಳು ಅತ್ಯುತ್ತಮ ಸ್ವಸಹಾಯ ಸಂಘಗಳಾಗಿ ಗುರುತಿಸಿ ಕೊಂಡಿದ್ದು ಶಾಸಕ ಅಭಯಚಂದ್ರ ಜೈನ್ ಪುರಸ್ಕಾರ ನೀಡಿ ಗೌರವಿಸಿದರು.

ಸಮಾನ ಮನಸ್ಕದಿಂದ ಸ್ವೀಕರಿಸಿದೆ
ಸ್ಥಾನಗಳನ್ನು ಕಳೆದುಕೊಂಡ ಸಂದರ್ಭದಲ್ಲಿ ಸಚಿವರ ಸಮುದಾಯದವರು,ಬೆಂಬಲಿಗರು ರೊಚ್ಚಿಗೆದ್ದು ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಸರ್ವೇಸಾಮಾನ್ಯವಾಗಿರುತ್ತದೆ.ನಾನು ಸಚಿವ ಸ್ಥಾನ ಕಳೆದುಕೊಂಡಾಗ ಅಂತಹ ಸನ್ನಿವೇಶಗಳು ಎದುರಾಗಿಲ್ಲ. ಪ್ರಚೋದಿಸಿಲ್ಲ.  ಅಧಿಕಾರ ಇರಲಿ ಇಲ್ಲದೇ ಇರಲಿ ಯಥಾಮನಸ್ಕದಿಂದ ಅದನ್ನು ಸ್ವೀಕರಿಸಿದ್ದೇನೆ. ಇದಕ್ಕೆ ಜೈನ ಸಮುದಾಯದವರಲ್ಲಿ ಇರುವಂತಹ ಸ್ವಾಭಿಮಾನ ಕಾರಣವಾಗಿದೆ ಎಂದು ತನ್ನ ಮಾನದಾಳದ ಮಾತುಗಳನ್ನು ಮಾಜಿ ಸಚಿವ ಹಾಗೂ ಶಾಸಕ ಅಭಯಚಂದ್ರ ಜೈನ್ ಹೇಳಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ