ಟೀಕಾಕಾರರ ಬಾಯಿ ಮುಚ್ಚಿಸಿದ ಕ್ರಿಕೆಟಿಗ ಶಮಿ

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಬುರ್ಖಾ ಧರಿಸದೆ ಇರುವ ಪತ್ನಿಯ ಜೊತೆ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಕ್ಕೆ ಸಂಪ್ರದಾಯವಾದಿ ಮುಸ್ಲಿಮರಿಂದ ಟೀಕೆಗೆ ಒಳಗಾಗಿದ್ದ ಕ್ರಿಕೆಟಿಗ ಮೊಹಮ್ಮದ್ ಶಮಿ ಇದು ನನ್ನ ಜೀವನ, ನೀವು ಚಿಂತೆ ಮಾಡಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡ ವೇಗದ ಬೌಲರ್ ಮೊಹಮ್ಮದ್ ಶಮಿ ಕೆಲ ದಿನಗಳ ಹಿಂದಷ್ಟೇ ಪತ್ನಿಯೊಂದಿಗಿರುವ ಫೋಟೋವೊಂದನ್ನು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದರು. ಫೋಟೋದಲ್ಲಿ ಶಮಿ ಅವರ ಪತ್ನಿ ಬುರ್ಖಾ ಧರಿಸಿರಲಿಲ್ಲ. ಈ ಫೋಟೋಗೆ ಕೆಲ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿ ಟೀಕೆಗಳನ್ನು ಮಾಡಿದ್ದರು.

ಶಮಿ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು, ಮುಸ್ಲಿಂ ಹೆಣ್ಣು ಮಕ್ಕಳು ಮೈ ತುಂಬಾ ಬಟ್ಟೆಯನ್ನು ತೊಡಬೇಕು ಹಾಗೂ ಸಾರ್ವಜನಿಕವಾಗಿ ಅರೆಬರೆ ತೊಟ್ಟು ತೋರಿಸಿಕೊಳ್ಳಬಾರದೆಂದು ಎಂದು ಸಲಹ್ ನೀಡಿದ್ದರು.

ಈ ಹಿನ್ನಲೆಯಲ್ಲಿ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡ ಶಮಿ ಅವರು, ಇದು ನನ್ನ ಜೀವನವಾಗಿದ್ದು ಯಾವುದು ಮಾಡಿದರೆ ಸರಿ ಹಾಗೂ ಯಾವುದು ತಪ್ಪು ಎಂಬುದು ನನಗೆ ಗೊತ್ತಿದೆ. ನಾವೆಷ್ಟು ಒಳ್ಳೆಯವರೆಂಬುದನ್ನು ಮೊದಲು ನಮ್ಮ ಆಂತರಾಳವನ್ನು ಕೇಳಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಶಮಿ ಅವರ ಬೆಂಬಲಕ್ಕೆ ಕ್ರಿಕೆಟರ್ ಮೊಹಮ್ಮದ್ ಕೈಫ್ ಅವರೂ ಕೂಡ ಬಂದಿದ್ದು, ಕಾಮೆಂಟ್‌ಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿ ಕಾಮೆಂಟ್‌ಗಳು ನಿಜಕ್ಕೂ ನಾಚಿಕೆಗೇಡು. ದೇಶದಲ್ಲಿ ಮಾಡಲು ಬೇರೆ ಬೇಕಾದಷ್ಟು ವಿಷಯಗಳಿವೆ. ಈ ವಿಷಯವನ್ನು ದೊಡ್ಡದು ಮಾಡಬೇಡಿ. ಶಮಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.

Related Tags: Mohammed Shami, Cricketer, Photo With Wife, Burkha
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ