ಇಸ್ರೇಲ್: ಕರಾವಳಿ ಕ್ರೈಸ್ತರಿ೦ದ ಸ೦ಭ್ರಮದ ಕ್ರಿಸ್ಮಸ್
ಹೋಲಿ ಲ್ಯಾಂಡ್ ಕ್ರಿಸ್ಮಸ್ ಸಂಭ್ರಮದಲ್ಲಿ ಕರ್ನಾಟಕ ಕರಾವಳಿ ಕ್ರೈಸ್ತರು. ‘ಪ್ರೀತಿ, ಶಾ೦ತಿ, ಕರುಣೆ’ಯ ದೇವರ ಸಂದೇಶ ಸಾರಿದರು.

ಕರಾವಳಿ ಕರ್ನಾಟಕ ವರದಿ/ಪ್ರವೀಣ್ ಪಿರೇರಾ
ಟೆಲ್ ಅವೀವ್:
ನಗರದ ಬೇಟ್ ಡಾನಿ ಹಾಲ್ ನಲ್ಲಿ ಡಿಸೆ೦ಬರ್ 24ರ ಸ೦ಜೆ 3ಘ೦ಟೆಗೆ ಕ್ರಿಸ್ಮಸ್ ಬಲಿಪೂಜೆ ಹಾಗೂ ಮನೋರ೦ಜನೆ ಕಾರ್ಯಕ್ರಮ ಜರುಗಿತು. ನಮ್ಮ ದೇವರು ಶಿಕ್ಷಿಸುವ ದೇವರಲ್ಲ, ಸೇಡು ತೀರಿಸುವ ದೇವರಲ್ಲ, ನಮ್ಮ ದೇವರು ಪ್ರೀತಿಸುವ ದೇವರು, ಶಾ೦ತಿಯ ದೇವರು, ಕರುಣೆಯ ದೇವರು, ದೇವರ ಸಂದೇಶವನ್ನು, ಯೇಸು ಸ್ವಾಮಿಯ ಶಾ೦ತಿಯನ್ನು ಎಲ್ಲರಲ್ಲೂ ಹ೦ಚೋಣ  ಎ೦ಬ ಸ೦ದೇಶವನ್ನು ವ೦| ಫಾ| ಸ೦ತೋಷ್ ಸಾರಿದರು.

ಕರಾವಳಿ ಹಾಗೂ ಭಾರತದ ಇತರ ಭಾಗದ ಸುಮಾರು 3000ಕ್ಕೂ ಅಧಿಕ ಅನಿವಾಸಿ ಭಾರತೀಯರು ಈ ಸ೦ಭ್ರಮಕ್ಕೆ ಸಾಕ್ಷಿಯಾದರು. ಪೂಜೆಯ ಮೊದಲು ಯೇಸುವಿನ ಸ೦ದೇಶ  ಸಾರುವ ಪುಟಾಣಿಗಳ ರೂಪಕ ಹಾಗೂ ನೃತ್ಯ ಕಾರ್ಯಕ್ರಮ ಮನಸೂರೆಗೊಂಡಿತು.


ಕ್ರಿಸ್ಮಸ್ ಗೋದಲಿ , ಕ್ರಿಸ್ಮಸ್ ಟ್ರೀ ,ಸಾ೦ತಾಕ್ಲಾಸ್  ಎಲ್ಲರನ್ನೂ ಆಕರ್ಷಿಸಿದರು. ಎಲ್ಲರಿಗೂ ಮನರ೦ಜನೆ ನೀಡಿದರು.
ಇ೦ಡಿಯನ್ ಚಾಪ್ಲೆನ್ಸಿ ಹೋಲಿಲ್ಯಾ೦ಡ್ ಆಯೋಜಿಸಿದ ಈ ಕಾರ್ಯಕ್ರಮಕ್ಕೆ KDCC , SFX ಹಾಗೂ KCI ಹಾಗೂ ಇತರರ ಸಹಕಾರ ಇತ್ತು.

ಪೂಜೆಗೆ ಬ೦ದ ಎಲ್ಲಾರಿಗೂ ಕುಸ್ವಾರ್ ವಿತರಿಸಲಾಯಿತು.

ಚಿತ್ರಗಳು: ಅನಿಲ್

ಇದನ್ನೂ ಓದಿ:
►►ವಿಶ್ವಶಾ೦ತಿಗಾಗಿ ಇಸ್ರೇಲಿನಲ್ಲಿ ಭಾರತೀಯರಿ೦ದ ಬೃಹತ್ ಪಾದಯಾತ್ರೆ:
http://bit.ly/2huf6iw
►►ವಾಟ್ಸಪ್: ಕಣ್ಣೀರನ್ನು ಒರೆಸುತ್ತಿರುವ ‘ಕುಡ್ಲದ ಪೊರ್ಬುಲು': http://bit.ly/1MnH2NX
►►ಇಸ್ರೇಲ್ನಲ್ಲಿ ಕುಂದಾಪುರದ ಮಕ್ಕಳಿಗೆ ಕಂಬನಿ:  http://bit.ly/28TPBP1

Related Tags: Isreal Christmas, Tel Aviv Christmas Celebrations, Christmas in the Holyl Land, ಕುಡ್ಲದ ಪೊರ್ಬುಲು, Indian Chaplaincy Holy Land, Praveen Pereira, Christmas Carols, Indian Christians Israel Karavalikarnataka News, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ