ಮೃತದೇಹ ರವಾನೆಗೆ ಸೋಶಿಯಲ್ ಫೋರಂ ನೆರವು
ಇಂಡಿಯನ್ ಸೋಶಿಯಲ್ ಫೋರಂ ಪ್ರಯತ್ನದಿಂದ ಹೊನ್ನಾವರಕ್ಕೆ ತಲುಪಿದ ಮೊಹಮ್ಮದ್ ರಫೀಕ್ ಮೃತದೇಹ

ಕರಾವಳಿ ಕರ್ನಾಟಕ ವರದಿ/ಮೊಹಮದ್ ನವೀದ್, ಕುಂದಾಪುರ
ರಿಯಾದ್ (ಸೌದಿ ಅರೇಬಿಯಾ):
ಇಲ್ಲಿನ ಬುರೈದ ನಗರದಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಮೊಹಮ್ಮದ್ ರಫೀಕ್ ಅವರ ಮೃತದೇಹವನ್ನು ಹೊನ್ನಾವರಕ್ಕೆ ಇಂಡಿಯನ್ ಸೋಷಿಯಲ್ ಫೋರಂ ಪ್ರಯತ್ನದಿಂದ ಕಳಿಸಿಕೊಡಲಾಗಿದೆ.

ಸುಮಾರು ಎಂಟು ವರ್ಷಗಳಿಂದ ಚಾಲಕರಾಗಿ ಸೌದಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ರಫೀಕ್ ಅವರು ನವೆಂಬರ್ 25ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿರುವ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಸ್ವಗ್ರಾಮಕ್ಕೆ ಕಳುಹಿಸಿಕೊಡುವ  ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರಾದ ಹೊನ್ನಾವರದ ಅಬ್ದುಲ್ ಅಝೀಝ್ ಅವರು ಇಂಡಿಯನ್  ಸೋಶಿಯಲ್  ಫೋರಂ ಸದಸ್ಯರನ್ನು ನೆರವಿಗಾಗಿ ಸಂಪರ್ಕಿಸಿದ್ದರು.

ಇಂಡಿಯನ್  ಸೋಶಿಯಲ್  ಫೋರಂ ಬುರೈದ ಘಟಕದ ಅಬ್ದುಲ್ರಹುಫ್ಕಳಾಯಿ, ಅಯಾಝ್ ಕೃಷ್ಣಾಪುರ, ಇರ್ಫಾನ್ ಅಡ್ಡುರು ಮತ್ತು  ಅಬ್ದುಲ್ ಅಝೀಝ್  ಹೊನ್ನಾವರ ತಂಡವುತಕ್ಷಣವೇ ಸ್ಪಂದಿಸಿ ಸೌದಿಅರೇಬಿಯಾದ ಕಾನೂನಿನಂತೆ ಪೊಲೀಸ್ ಠಾಣೆ ಮತ್ತು ಕಫೀಲ್ (ವೀಸಾಪ್ರಾಯೋಜಕ)ರನ್ನು ನಿರಂತರ  ಭೇಟಿ ಮಾಡಿ ದಾಖಲೆಗಳನ್ನು ಸರಿಪಡಿಸಲು ಶ್ರಮಿಸಿತು.

ಅಂತಿಮವಾಗಿ ಮೃತ ಮೊಹ್ಮದ್ ರಫೀಕ್ ಅವರ ಸಂಬಂಧಿಯಾದ ಅಬ್ದುಲ್ಅಝೀಝ ಹೊನ್ನಾವರ ಅವರ ಹೆಸರಿನ ಮೇಲೆ ಭಾರತೀಯ ರಾಯಭಾರ ಕಚೇರಿಯ ಮೂಲಕ  ಮೃತದೇಹ ಹಸ್ತಾಂತರ ಅಧಿಕಾರ ಪತ್ರ ಪಡೆಯಲಾಯಿತು. ವಿಮಾನದ ಮೂಲಕ ಮೃತದೇಹವನ್ನು ಇಂಡಿಯನ್ ಸೋಷಿಯಲ್ ಫೋರಂ ಸದಸ್ಯರು ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದು, ನೊಂದ ಕುಟುಂಬದ ಕಣ್ಣೀರು ಒರೆಸಲು ತಮ್ಮಿಂದಾದ ನೆರವು ನೀಡಿದ ತೃಪ್ತಿ ಹೊಂದಿದ್ದಾರೆ. ಇಂಡಿಯನ್ ಸೋಷಿಯಲ್ ಫೋರಂ ಸಕಾಲಿಕ ನೆರವಿಗೆ ಮೃತರ ಸಂಬಂಧಿಗಳು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಮೊಹಮ್ಮದ್ ರಪೀಕ್ ಅವರ  ಅಕಾಲಿಕ ಮರಣಕ್ಕೆ ಇಂದಿಯನ್ ಸೋಷಿಯಲ್ ಫೋರಂ ಬುರೈದ ಘಟಕ ಸಮಿತಿಯು ಸಂತಾಪ ಸೂಚಿಸಿದೆ.
 

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, Indian Social Forum
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ