ಹಿಜಾಬ್ ಇಲ್ಲದೆ ಫೋಟೊ: ಮಹಿಳೆ ಸೆರೆ
ಇದು ಸೌದಿ ಕಾನೂನು! ಹಿಜಾಬ್ ಇಲ್ಲದೆ ಟ್ವಿಟರ್‌ಗೆ ಫೋಟೊ ಹಾಕಿದ ಸೌದಿ ಮಹಿಳೆ ಸೆರೆ.

ಕರಾವಳಿ ಕರ್ನಾಟಕ ವರದಿ
ರಿಯಾದ್‌:
ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್‌ ಧರಿಸದೆ ತೆಗೆದ ತನ್ನ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡ 20ರ ಹರೆಯದ ಮಹಿಳೆಯನ್ನು ಸೌದಿ ಅರೇಬಿಯಾದ ಪೊಲೀಸರು ಬಂಧಿಸಿದ್ದಾರೆ.

ರಿಯಾದ್‌ನ ಜನಪ್ರಿಯ ಕೆಫೆಯೊಂದರ ಎದುರುಗಡೆ ನಿಂತುಕೊಂಡು, ಹಿಜಾಬ್‌ ಧರಿಸದೇ ತೆಗೆದುಕೊಂಡ ಫೋಟೋವನ್ನು ಮಹಿಳೆ ಸಾಮಾಜಿಕ ಜಾಲ ತಾಣಕ್ಕೆ ಹಾಕಿ ಟ್ವೀಟ್‌ ಮಾಡಿರುವುದು ಇಲ್ಲಿನ ಕಾನೂನು ಕಟ್ಟಳೆಗೆ ವಿರುದ್ಧವೆಂದು ಪೊಲೀಸ್‌ ವಕ್ತಾರ ಫ‌ವಾಜ್‌ ಅಲ್‌ ಮೈಮಾನ್‌ ಹೇಳಿದ್ದಾರೆ.

ಅವರು ಬಂಧಿತ ಮಹಿಳೆಯ ಹೆಸರು, ಗುರುತನ್ನು ಬಹಿರಂಗಪಡಿಸಿಲ್ಲ. ಆದರೂ ಅನೇಕ ವೆಬ್‌ಸೈಟ್‌ಗಳು ಮಹಿಳೆಯನ್ನು ಮಲಾಕ್‌ ಅಲ್‌ ಶೆಹರೀ ಎಂದು ಗುರುತಿಸಿವೆ.

ಕಳೆದ ತಿಂಗಳಲ್ಲಿ ರಿಯಾದ್‌ ಮುಖ್ಯ ಬೀದಿಯಲ್ಲಿ ಹಿಜಬ್‌ ಧರಿಸದೆ ತೆಗೆದ ತನ್ನ ಫೋಟೋವನ್ನು ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಮಲಾಕ್‌ ಅಲ್‌ ಶೆಹರಿಯೇ ಈ ಫೋಟೊದಲ್ಲಿ ಇದ್ದಾಳೆ ಎಂದು ಸುದ್ದಿ ಹರಡಿದೆ.

ಈಕೆಯನ್ನೀಗ ಜೈಲಿಗೆ ಕಳುಹಿಸಲಾಗಿದೆ. ಸಂಬಂಧಿಕನಲ್ಲದ ಪುರುಷನೊಂದಿಗೆ ನಿಷೇಧಿತ ಸಂಬಂಧ ಹೊಂದಿರುವ ಬಗ್ಗೆ ಬಂಧಿತ ಮಹಿಳೆಯು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ ಎಂದು ಸಹ ಈಕೆಯ ಮೇಲೆ ಆರೋಪವಿದೆ.

Related Tags: Saudi Arabia Woman, Without Veil, Arrest, Twitter Upload
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ