ಮಿಸ್ಟರ್ ಆಂಡ್ ಮಿಸ್ ಕುಂದಾಪುರ: ಪ್ರಶಸ್ತಿ ಪ್ರದಾನ
‘ಮಿಸ್ಟರ್ ಕುಂದಾಪುರ’ ಪ್ರಶಸ್ತಿ ನಾಗರಾಜ ಅವರಿಗೆ ಸಂದಿದ್ದು, ‘ಮಿಸ್ ಕುಂದಾಪುರ’ ಪ್ರಶಸ್ತಿ ರೋಶಲ್ ಆಲ್ಮೇಡಾ ಅವರ ಮುಡಿಗೇರಿತು. ಗೌತಮ್ ನಾವಡ ವಡೇರಹೋಬಳಿ ಸ್ಪರ್ಧೆ ಆಯೋಜಿಸಿದ್ದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ:
‘ಮಿಸ್ಟರ್ ಆಂಡ್ ಮಿಸ್ ಕುಂದಾಪುರ 2016’ ಸ್ಪರ್ಧೆಯನ್ನು ಕುಂದಾಪುರ ಡಾಟ್ ಕಾಮ್ ಆಶ್ರಯದಲ್ಲಿ ಜೆಸಿಐ ಕುಂದಾಪುರ ಸಿಟಿ, ಪೋರ್ಥ್ ಪೋಕಸ್ ಗ್ರೂಪ್, ಆಲ್ಫೈನ್ ಕ್ಲಾಸಿಕ್ ಹರ್ಬಲ್ ಹೇರ್ ಆಯಿಲ್, ಮಂಗಳೂರಿನ ಸೌರಾಷ್ಟ್ರ ಕ್ಲಾತ್ ಸ್ಟೋರ್ ಸಹಯೋಗದಲ್ಲಿ ಸ್ಥಳೀಯ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಏರ್ಪಡಿಸಲಾಗಿತ್ತು.

‘ಮಿಸ್ಟರ್ ಕುಂದಾಪುರ’ ಪ್ರಶಸ್ತಿ ನಾಗರಾಜ ಅವರಿಗೆ ಸಂದಿದ್ದು, ಲಿಖಿತ ಕಾಂಚನ್ ಪ್ರಥಮ ರನ್ನರ್ ಹಾಗೂ ಅಭಿಲಾಷ್ ದೇವಾಡಿಗ ದ್ವಿತೀಯ ರನ್ನರ್ ಆಗಿ ಆಯ್ಕೆಯಾಗಿದ್ದಾರೆ. ‘ಮಿಸ್ ಕುಂದಾಪುರ’ ಪ್ರಶಸ್ತಿ ರೋಶಲ್ ಆಲ್ಮೇಡಾ ಅವರ ಮುಡಿಗೇರಿತು. ಪ್ರಥಮ ರನ್ನರ್ ಪ್ರಶಸ್ತಿಯನ್ನು ವರ್ಷ ಮಠಪತಿ, ದ್ವಿತೀಯ ರನ್ನರ್ ಪ್ರಶಸ್ತಿ ಚೈತ್ರಾ ಪಡೆದಿದ್ದಾರೆ.

ಚಿತ್ರನಟಿ ಶುಭರಕ್ಷ ಬೆಂಗಳೂರು, ಐಟಿ ಉದ್ಯಮಿ ಸೋನಿಯಾ ರಾಡ್ರಿಗಸ್, ಆಯಾನ್ರಾಜ್ ರಾಜಸ್ಥಾನ್ ಇವರು ತೀರ್ಪುಗಾರರಾಗಿದ್ದರು.

ಸ್ಪರ್ಧೆಯ ಪ್ರಥಮ ಸುತ್ತು ಕುಂದಾಪುರ ಡಾಟ್ ಕಾಮ್ ಫೇಸ್ ಬುಕ್ ಪುಟದಲ್ಲಿ ನಡೆದಿದ್ದು, ಅತೀ ಹೆಚ್ಚು ಲೈಕ್ ಪಡೆದ 15ಯುವಕರು ಮತ್ತು 15ಯುವತಿಯರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಝಹೀರ್ ಅಹ್ಮದ್ ನಾಕುದ, ನ್ಯಾಯವಾದಿ ಮುರ್ಡೇಶ್ವರ ರವಿಕಿರಣ್ ಶಾನುಭೋಗ್, ಜೆಸಿಐ ಕುಂದಾಪುರ ಅಧ್ಯಕ್ಷ ಕುಂಭಾಶಿ ಮಂಜುನಾಥ ಕಾಮತ್. ಸ್ಪರ್ಧೆಯ ಆಯೋಜಕ ಗೌತಮ್ ನಾವಡ ವಡೇರಹೋಬಳಿ, ಜೆಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಶ ಹುಸೇನ್ ಹೈಕಾಡಿ, ಉದ್ಯಮಿ, ಫ್ಯಾಷನ್ ಕೋರ್ಟ್ ಮುಖ್ಯಸ್ಥ ಕಾರ್ತಿಕೇಯ ಮಧ್ಯಸ್ಥ, ರಿತೇಶ್ ಕಾಮತ್, ಉಪೇಂದ್ರ ನಾವಡ ಉಪಸ್ಥಿತರಿದ್ದರು.

ನ್ಯಾಯವಾದಿ ರಾಘವೇಂದ್ರ ಚರಣ್ ಕಾರ್ಯಕ್ರಮ ನಿರೂಪಿಸಿದರು.

Related Tags: Kundapur Beauty Contest, City Jc Programme, Miss Kundapur, Mister Kundapur 2016, Roshal Almeida, Nagaraj, Gautham Navada V, coondapur.com, Raghavendra Charan Navada, Zahir Ahamed Alpine Associatess, Kartikeya Madhyastha, Kannada News, Karnataka News, Coastal Karnataka News, Karavali News, Karavali K
 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ