ಬೆಳಗ್ಗಿನ ಉಪಹಾರಕ್ಕೆ ರುಚಿಯಾದ ಅವಲಕ್ಕಿ ದೋಸೆ

ಇಂದಿನ ಧಾವಂತದ ಜೀವನದಲ್ಲಿ ನಾವು ಯಾವಾಗಲೂ ಬೆಳಗಿನ ಉಪಹಾರಕ್ಕಾಗಿ ಸುಲಭ ವಿಧಾನದಲ್ಲಿ ತಯಾರಾಗುವ ಖಾದ್ಯವನ್ನು ಅವಲಂಬಿಸುತ್ತೇವೆ. ಆರೋಗ್ಯಕ್ಕೂ ಉತ್ತಮವಾಗಿರುವ ನಿಮ್ಮ ಡಯೆಟ್ ಅನ್ನು ನಿಯಂತ್ರಣದಲ್ಲಿಡುವ ಆಹಾರ ಪದಾರ್ಥಗಳೆಂದರೆ ನಮ್ಮ ಬೆಳಗಿನ ತಿಂಡಿ ಸ್ವರ್ಗಸದೃಶವಾಗಿರುತ್ತದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಸರಳವಾಗಿ ತಯಾರಿಸಬಹುದಾದ ಅವಲಕ್ಕಿ ದೋಸೆಯ ತಯಾರಿ ವಿಧಾನವನ್ನು ಇಲ್ಲಿ ನೀಡುತ್ತಿದ್ದೇವೆ.

ಕಡಿಮೆ ಕ್ಯಾಲೋರಿಯುಕ್ತ ಮತ್ತು ಗರಿಗರಿಯಾಗಿರುವ ಈ ದೋಸೆ ರೆಸಿಪಿ ನಿಮ್ಮ ಬೆಳಗಿನ ತಿಂಡಿಯನ್ನು ರುಚಿಕರವನ್ನಾಗಿಸುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಅವಲಕ್ಕಿಯೊಂದಿಗೆ ಅಕ್ಕಿ, ಮಜ್ಜಿಗೆ ಹೀಗೆ ನಿಮ್ಮ ಪೌಷ್ಟಿಕತೆಗೆ ಮತ್ತು ದೈಹಿಕ ಸ್ವಾಸ್ಥ್ಯಕ್ಕೆ ಅತೀ ಅಗತ್ಯವಾಗಿರುವ ಸಾಮಾಗ್ರಿಗಳನ್ನು ಮಿಶ್ರ ಮಾಡಿ ಈ ದೋಸೆಯನ್ನು ತಯಾರಿಸಲಾಗುತ್ತದೆ.
 
ನಿಮಗೆ ಇದನ್ನು ತಯಾರಿಸಲು ಹೆಚ್ಚು ಸಮಯ ಕೂಡ ಬೇಕಾಗಿಲ್ಲ. ಕೆಲವೊಂದು ಗಂಟೆಗಳವರೆಗೆ ಅಕ್ಕಿಯನ್ನು ನೆನೆಸಿ ಇದಕ್ಕೆ ಅವಲಕ್ಕಿ ಮಜ್ಜಿಗೆ ಬೆರೆಸಿ ನುಣ್ಣಗೆ ರುಬ್ಬಿ ಈ ದೋಸೆಯನ್ನು ತಯಾರಿಸಲಾಗುತ್ತದೆ. ಹಿಟ್ಟಿನಲ್ಲಿ ಬೆರೆತಿರುವ ಮಜ್ಜಿಗೆ ಮತ್ತು ಅವಲಕ್ಕಿ ನಿಮಗೆ ಇದುವರೆಗೂ ಸೇವಿಸದೇ ಇರುವ ದೋಸೆಯ ರುಚಿಯನ್ನು ನೀಡುತ್ತದೆ. ಹಾಗಿದ್ದರೆ ತಡ ಮಾಡದೇ ದೋಸೆಯನ್ನು ತಯಾರಿಸುವ ವಿಧಾನದತ್ತ ಮುನ್ನಡೆಯಿರಿ ಮತ್ತು ನಿಮ್ಮ ಮನೆಯವರಿಗೆ ಈ ರುಚಿಯಾದ ದೋಸೆಯನ್ನು ತಯಾರಿಸಿ ಅವರ ಮೆಚ್ಚುಗೆಯನ್ನು ಪಡೆದುಕೊಳ್ಳಿ.

ಅಕ್ಕಿ ಹುಡಿಯಿಂದ ಮಾಡಿದ ರುಚಿ ರುಚಿಯಾದ ರೊಟ್ಟಿ ರೆಸಿಪಿ
ಪ್ರಮಾಣ - 10-12 ದೋಸೆ
ಸಿದ್ಧತಾ ಸಮಯ: 15 ನಿಮಿಷ
ಅಡುಗೆಗೆ ಬೇಕಾದ ಸಮಯ: 10 ನಿಮಿಷ

ಸಾಮಾಗ್ರಿಗಳು
*ಅಕ್ಕಿ - 1 1/2 ಕಪ್
*ಕುಚ್ಚುಲಕ್ಕಿ (ಕೆಂಪು ಅಕ್ಕಿ)
*ಅವಲಕ್ಕಿ - 1 ಕಪ್
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ/ತುಪ್ಪ - ಸ್ವಲ್ಪ

ತಯಾರಿ ವಿಧಾನ
1.ಮೊದಲಿಗೆ ಅಕ್ಕಿಯನ್ನು 7-8 ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಸಾಕಷ್ಟು ನೀರು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಅವಲಕ್ಕಿ, ಮೊಸರು/ಮಜ್ಜಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಸಾಕಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
2.ಹಿಟ್ಟು ಮಜ್ಜಿಗೆಯಂತೆ ದಪ್ಪಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
3.ತವಾವನ್ನು ಬಿಸಿ ಮಾಡಿಕೊಳ್ಳಿ. ಮಧ್ಯಭಾಗಕ್ಕೆ ಒಂದು ಕೈಲಿನಷ್ಟು (ದೋಸೆ ಚಮಚದಷ್ಟು) ಹಿಟ್ಟನ್ನು ಸುರುವಿಕೊಳ್ಳಿ ಮತ್ತು ಕೈಲಿನ ಹಿಂಭಾಗದಿಂದ ದೋಸೆಯನ್ನು ವೃತ್ತಾಕಾರವಾಗಿ ಹುಯ್ಯಿರಿ. ಇದಕ್ಕೆ ಮುಚ್ಚಳವನ್ನು ಮುಚ್ಚಿ ಮತ್ತು ದೋಸೆಯ ಎರಡೂ ಭಾಗ ಬೇಯುವುದಕ್ಕಾಗಿ 1 ನಿಮಿಷ ಹಾಗೆಯೇ ಬಿಡಿ.
4.ನಂತರ ದೋಸೆಯನ್ನು ತಟ್ಟೆಗೆ ವರ್ಗಾಯಿಸಿ. ರುಚಿಯಾದ ಅವಲಕ್ಕಿ ದೋಸೆ ಸವಿಯಲು ಸಿದ್ಧವಾಗಿದೆ.
ಈ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಕೂಡ ನೀವು ಸೇವಿಸಬಹುದು.
ಕೃಪೆ: http://kannada.boldsky.com/

Related Tags: Poha Dosa, Avalakki Dosa, New Recipe, Hosa Ruchi, Karavali Karnataka, Aduge Mane
 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ