ತುಳು 8ನೇ ಪರಿಚ್ಛೇದಕ್ಕೆ:ಮೋದಿ ಭರವಸೆ

ಕರಾವಳಿಕರ್ನಾಟಕ ವರದಿ
ಬೆಳ್ತಂಗಡಿ:
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಮನವಿ ಸಲ್ಲಿಸಲು ದೆಹಲಿಗೆ ತೆರಳಿದ್ದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದ ತುಳುನಾಡಿನ ನಿಯೋಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಭರವಸೆ ನೀಡಿದ್ದಾರೆ. 

ತುಳುವಿನ ಜತೆಗೆ ಇತರ ಭಾಷೆಗಳಿಗೂ ಮಾನ್ಯತೆ ಕೊಡುವ ಕುರಿತು ಪರಿಶೀಲಿಸಿ  ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಮೋದಿ ಭರವಸೆ ನೀಡಿದ್ದಾಗಿ ಡಾ. ಹೆಗ್ಗಡೆ ಹೇಳಿದ್ದಾರೆ.

ತುಳು ಭಾಷೆಯನ್ನು ಕರ್ನಾಟಕ, ಕೇರಳ ಮತ್ತು ಮುಂಬಯಿ ಸಹಿತ ವಿಶ್ವಾದ್ಯಂತ ಸುಮಾರು ಒಂದು ಕೋಟಿ ಜನರು ಮಾತನಾಡುತ್ತಿದ್ದಾರೆ.  ತುಳು ದ್ರಾವಿಡ ಭಾಷಾ ಕುಟುಂಬದ ಅತ್ಯಂತ ಸುಂದರ ಭಾಷೆ. ಈ ಭಾಷೆಗೆ 2,800 ವರ್ಷಗಳ ಇತಿಹಾಸವಿದೆ. ಕ್ರಿಸ್ತಪೂರ್ವದಲ್ಲೆ ಇದೊಂದು ಸ್ವತಂತ್ರ ಭಾಷೆಯಾಗಿ ರೂಪುಗೊಂಡಿತ್ತು ಎಂದು ತುಳುವಿನ ಮಹತ್ವವನ್ನು ಪ್ರಧಾನಿಗೆ ಹೆಗ್ಗಡೆ ಅವರು ವಿವರಿಸಿದರು.

ಧರ್ಮಸ್ಥಳ ದೇವಳದ ಚಟುವಟಿಕೆಗಳ ಕುರಿತ ಛಾಯಾಚಿತ್ರಗಳು ಹಾಗೂ ಕ್ಷೇತ್ರ ಪರಿಚಯದ ಪುಸ್ತಕಗಳನ್ನು ನೀಡಿ ಧರ್ಮಥಳಕ್ಕೆ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಹೆಗ್ಗಡೆ ಅವರು ಆಹ್ವಾನ ನೀಡಿದ್ದಾರೆ.

Related Tags: Tulu Language, 8th Schedule, Narendra Modi, Veerendra Heggade
 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ