ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕಗಳ ರಾಶಿ!
ಪ್ರಮೋದ್ ಮುತಾಲಿಕ್, ಪ್ರವಿಣ್ ತೊಗಾಡಿಯಾ, ಕಲ್ಲಡ್ಕ ಡಾನ್, ಚಕ್ರಮ್ ಸೂಲಿಬೆಲೆ ಇವರಿಗೆ ನಾಲಿಗೆಯಿಂದಲೇ ಬೆಂಕಿ ಹಚ್ಚುವ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಕಂಚು ಈ ಮೂರು ಪದಕ ಸಿಗಲಿದೆ.

ಪ್ರವೀಣ್. ಎಸ್. ಶೆಟ್ಟಿ,  ಮಂಗಳೂರು
ಮಾನ್ಯರೇ, ಮುಂದಿನ 2020 ರ ಒಲಿಂಪಿಕ್ ಕ್ರೀಡೋತ್ಸವಕ್ಕೆ ಈಗಿನಿಂದಲೇ ಸಿದ್ಧತೆಗಳನ್ನು ನಡೆಸುವುದಾಗಿ ಪ್ರಧಾನಿ ಮೋದಿ ಮೊನ್ನೆ ಹೇಳಿಕೆ ಕೊಟ್ಟಿದ್ದು ಎಲ್ಲರಿಗೂ ಖುಷಿಯಾಗಿದೆ. ಕೇವಲ ಪೂಜೆ ಭಜನೆ ಮಂತ್ರ ಪಠಣ ಹೋಮ ಹವನ ಇವುಗಳಿಂದ ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತ ಕನಿಷ್ಠ 100 ಚಿನ್ನದ ಪದಕ ಗೆಲ್ಲಬಹುದು ಎಂದು ಆರೆಸ್ಸೆಸ್ ನೇತಾರ ಮೋಹನ್ ಭಾಗ್ವತ್ ಹೇಳಿದ್ದಾರಂತೆ. ಗಂಡು ಹುಡುಗರೂ ಒಲಿಂಪಿಕ್ ಪದಕ ಗೆಲ್ಲ ಬೇಕಾದರೆ ಬ್ರಹ್ಮಚಾರಿ ಆಗಿದ್ದುಕೊಂಡೇ ಗೋಪೂಜೆಯ ಜತೆಗೆ ಶತ್ರುನಾಶ ಯಜ್ಞ ಹೋಮ ಹವನ ಮಾಡುತ್ತಿದ್ದರೆ ಒಲಿಂಪಿಕ್‌ನಲ್ಲಿ ಸುಲಭವಾಗಿ ಪದಕ ಗೆಲ್ಲಬಹುದಂತೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಧಾನಿಯ ಕೋರಿಕೆಯ ಮೇರೆಗೆ ಈ ಕೆಳಗಿನ ಹಲವು ಹೊಸ ಆಟಗಳು ಸೇರ್ಪಡೆಗೊಳ್ಳಲಿವೆ.  2020 ರಲ್ಲಿ ದೇವಸ್ಥಾನಗಳ ಅಷ್ಟಬಂಧ-ಬ್ರಹ್ಮಕಲಶ-ಜೀರ್ಣೋದ್ಧಾರಕ್ಕೆ ಪ್ರತ್ಯೇಕ ಸ್ಪರ್ಧೆಯಿದ್ದು ಅದರಲ್ಲಿ ಕೇವಲ ನಮ್ಮ ಕರಾವಳಿಯ ಅರ್ಚಕರು, ಕಾವಿಧಾರಿಗಳು ಹಾಗೂ ಅವರ ಚೇಲಾ ಬಂಟರು ಮಾತ್ರ ಭಾಗವಹಿಸಬಹುದಂತೆ.

ಗೋಮಾಂಸ ರಫ್ತಿನ ಸ್ಪರ್ಧೆಯಲ್ಲಿ ಕೇವಲ ಈರುಳ್ಳಿ ಬೆಳ್ಳುಳ್ಳಿ ಸಹಾ ತಿನ್ನದ ಪಕ್ಕಾ ಅಹಿಂಸಾವಾದಿ ಜೈನರಿಗೆ ಮಾತ್ರ ಸ್ಥಾನವಂತೆ. ಜೈನರ ಮುಂದಾಳು ಅಮಿತ್ ಷಾ ಇದಕ್ಕೆ ತನ್ನ ಜಾತಿಯ ಸ್ಪರ್ಧಿಗಳನ್ನು ತಯಾರು ಮಾಡಲು ಹಲಾಲ್ ಮಾಂಸ ತಯಾರಿಸುವ ವಿಧಾನ ಕಲಿಸುತ್ತಿದ್ದಾನಂತೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ನಕಲಿ ದೇಶಭಕ್ತಿ ಹಾಗೂ ದೊಂಬಿ ಗಲಾಟೆಗಳ ಸ್ಪರ್ಧೆಯೂ ಇರಲಿದೆ. ದೊಂಬಿ ಗಲಾಟೆಯ ಸ್ಪರ್ಧೆ ಹಾಗೂ ನಕಲಿ ದೇಶ ಭಕ್ತಿಯ ಸ್ಪರ್ಧೆಯಲ್ಲಿ ಏಬಿವಿಪಿಯವರಿಗೆ ಚಿನ್ನದ ಪದಕ ಗ್ಯಾರಂಟಿ. ಇವೆಲ್ಲಕ್ಕೆ ಅಂಬಾನಿ-ಅದಾನಿಗಳು ಸ್ಪಾನ್ಸರರ್ ಮತ್ತು ಮೀಡಿಯಾ ಪಾರ್ಟ್ನರ್ ಅಗಲಿದ್ದಾರಂತೆ.

ಅಮಿತ್ ಷಾ ಸ್ವತಃ ಶೂಟಿಂಗ್ ಮತ್ತು ಆರ್ಚಾರಿ (ನಕಲಿ ಎಂಕೌಂಟರ್)ಸ್ಪರ್ಧೆಯಲ್ಲಿಭಾಗವಹಿಸಲಿದ್ದಾರಂತೆ, ಇನ್ನು ನಾಟಕ ಸ್ಪರ್ಧೆ ಹಾಗೂ ಸುಳ್ಳಿನ ಸ್ಪರ್ಧೆಯಲ್ಲಿ ಸ್ವತಃ ನಮ್ಮ ಬೂಸಿ ಬಸ್ಯಾ ಪ್ರಧಾನಿಗಳೇ ಏಕೈಕ ಸ್ಪರ್ಧಿಯಂತೆ. ಅವರಿಗೆ ವಿಶ್ವದಲ್ಲೆಲ್ಲೂ ಸರಿಸಾಟಿ ಸ್ಪರ್ಧಿಯೇ ಇಲ್ಲ ಬಿಡಿ.  ಇಡಿ ಇಡಿ ರಸ್ತೆಗಳನ್ನೇ ನುಂಗುವ ಸ್ಪರ್ಧೆಯಲ್ಲಿ ಗಡ್ಕರಿಗೆ ಚಿನ್ನದ ಪದಕ ಗ್ಯಾರಂಟಿ. ಕೋಟಿಗಟ್ಟಲೆ ಟನ್ನು ಉಕ್ಕಿನ ಅದಿರುವ ನುಂಗುವ ಸ್ಪರ್ಧೆಗೆ ಬಳ್ಳಾರಿ ಗಣಿಗಳ್ಳ ರೆಡ್ಡಿಗಳೇ ಬೆಸ್ಟ್.  ಹೆಣ್ಣು ಭ್ರೂಣಹತ್ಯೆ ಹಾಗೂ ಮರ್ಯಾದಾ ಹತ್ಯೆಯ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳು ಕೇವಲ ಹರ್ಯಾಣ–ರಾಜಸ್ಥಾನದ ರಜಪೂತ ಮತ್ತು ಜಾಟ್ ಜಾತಿಯವರಂತೆ. ದನದ ಚರ್ಮ ಸುಲಿಯುವಾಗ ದಲಿತರಿಗೆ ಅಮಾನುಷವಾಗಿ ಬಡಿಯುವ ಸ್ಪರ್ಧೆಯೂ ಇದೆಯಂತೆ. ಅದರಲ್ಲಿ ಗುಜರಾತಿಗಳಿಗೆ ಪ್ರಥಮ ಪ್ರಾಶಸ್ತ್ಯ. ಕಾರಣ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಸೇನಾಪಡೆಗೆ ಸೇರುವಲ್ಲಿ ಗುಜರಾತಿಗಳು ಈ ವರೆಗೆ ಅತ್ಯಂತ ಹಿಂದುಳಿದಿರುವುದರಿಂದ ಕನಿಷ್ಠ ದಲಿತ ಚರ್ಮಕಾರರಿಗೆ ಬಡಿಯುವ ಸ್ಪರ್ಧೆಯಲ್ಲಾದರೂ ಅವರು ತಮ್ಮ ವೀರತ್ವ ತೋರಿಸಿ ಚಿನ್ನ ಗೆಲ್ಲುವುದು ಸಾಧ್ಯ.

ರಾಜಕೀಯ ಭ್ರಷ್ಟಾಚಾರದ ಸ್ಪರ್ಧೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ಕಡೆಯಿಂದ ತುರುಸಿನ ಸ್ಪರ್ಧಿಗಳು ಇದ್ದಾರೆ. ಕೋಮುವಾದದಲ್ಲಿ ಬಿಜೆಪಿ ಏಕೈಕ ಸ್ಪರ್ಧಿಯಾದರೆ ಜಾತಿವಾದದಲ್ಲಿ ಕಾಂಗ್ರೆಸ್ ಸಹಾ ಸ್ಪರ್ಧಿಸಲಿದೆ. ನೆಹರೂ ಕುಟುಂಬದ ಕಾಲು ನೆಕ್ಕುವ ಸ್ಪರ್ಧೆಯಲ್ಲಿ ಕಾಂಗ್ರೆಸ್ ಏಕಮೇವ ಸ್ಪರ್ಧಿ. ಪ್ರಮೋದ್ ಮುತಾಲಿಕ್, ಪ್ರವಿಣ್ ತೊಗಾಡಿಯಾ, ಕಲ್ಲಡ್ಕ ಡಾನ್, ಚಕ್ರಮ್ ಸೂಲಿಬೆಲೆ ಇವರಿಗೆ ನಾಲಿಗೆಯಿಂದಲೇ ಬೆಂಕಿ ಹಚ್ಚುವ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಕಂಚು ಈ ಮೂರು ಪದಕ ಸಿಗಲಿದೆ. ಸುಪಾರಿ ಕೊಲೆಯ ಸ್ಪರ್ಧೆಯಲ್ಲಿ ನರೇಶ್ ಶೆಣೈ ಜೈಲಿನಿಂದಲೇ ಸ್ಪರ್ಧಿಸುತ್ತಾನೆ. ಅನೈತಿಕ ಪೊಲೀಸ್ಗಿರಿ ಸ್ಪರ್ಧೆಯಲ್ಲಿ ನಮ್ಮ ಕರಾವಳಿಯ ಶೂದ್ರ ಪಡ್ಡೆಗಳಿಗೆ ಮಾತ್ರ ಸ್ಥಾನವಂತೆ. ಇನ್ನು ಕೇವಲ ಗೋ-ಭಕ್ತರಿಗಾಗಿ ಗೋಮೂತ್ರ ಹಾಗೂ ಗೋ-ಸೆಗಣಿ ಸೇವನೆಯ ಸ್ಪರ್ಧೆ ಇರಲಿದೆ. ಇದಕ್ಕೆ ಗೋಸ್ವಾಮಿ ಮತ್ತು ಬಾಬಾ ರಾಮದೇವ್ ಕೋಚ್ ಆಗಲಿದ್ದಾರೆ. ಇದರಲ್ಲೂ ನಮಗೆ ಚಿನ್ನದ ಪದಕ ಗ್ಯಾರಂಟಿ. ಆಷಾಢಭೂತಿ ಸ್ಥಾನಕ್ಕೆ ಹಾಗೂ ಚಿಯರ್ ಲೀಡರ್ ಕುಣಿತಕ್ಕೆ ಪೇಜಾವರರು ಮತ್ತು ರವಿಶಂಕ್ರಗುರು ಒಪ್ಪಿಕೊಂಡಿದ್ದಾರಂತೆ (ಇದಕ್ಕಾಗಿ ದೇವರು ಅವರಿಗೆ 2020 ರ ವರೆಗೆ ಧೀರ್ಘಾಯುಷ್ಯ ಕೊಡಲಿ).

ದೇವರ ಹೆಸರಲ್ಲಿ ವ್ಯಾಪಾರ ಮಾಡುವ ಸ್ಪರ್ಧೆಯಲ್ಲಿ ಹರೆಕೃಷ್ಣ ಪಂಥ ಸಹಿತ ಅನೇಕ ಚಾಂಪಿಯನ್ ಗಳು ನಮ್ಮಲ್ಲಿದ್ದಾರೆ.ಕಾಳಸಂತೆ ಹಾಗೂ ರೈತರ ಶೋಷಣೆಯಲ್ಲಿ ಸ್ಪರ್ಧಿಸಲು ಅನೇಕ ಬನಿಯಾ-ವೈಶ್ಯರು ತಯಾರಿದ್ದಾರೆ.  ಪತ್ನಿಯ ಹೆಣ ಹೊತ್ತು 12 ಕಿಮಿ ನಡೆಯುವ ಹೃದಯವಿದ್ರಾವಕ ಸ್ಪರ್ಧೆಯೂ ಇರಲಿದೆಯಂತೆ. ಜತೆಗೆ ಬರಗಾಲದಲ್ಲಿ ಹುಲ್ಲಿನ ಬೀಜ ಮತ್ತು ಕಪ್ಪೆ ಇಲಿ ಇರುವೆ ಹುಳು ಹುಪ್ಪಟೆ ತಿನ್ನುವ ಸ್ಪರ್ಧೆಯೂ ಇರಲಿದೆ. ಅದರಲ್ಲಿ ಓಡಿಶಾದ ಕಾಲಹಂಡಿಯ ಬುಡಕಟ್ಟು ಜನಾಂಗದ ಬಡವರು ಮಾತ್ರ ಭಾಗವಹಿಸ ಬಹುದಂತೆ. ಹಾಗಾಗಿ ಕೇಸರಿ ದೇಶಭಕ್ತರೇ ನೀವು 2020 ರಲ್ಲಿ ವಿಶ್ವಗುರು ಆಗಲಿರುವ ಭಾರತದ ಭಯಂಕರ ಒಲಿಂಪಿಕ್ ಸಾಧನೆಯನ್ನು ಸೆಲೆಬ್ರೇಟ್ ಮಾಡಲು ಚೈನಾ ಪಟಾಕಿ ಹಾಗೂ ನೈಜೀರಿಯ ಗಾಂಜಾ-ಡ್ರಗ್ಸ್ ಗಳೊಂದಿಗೆ ಈಗಿನಿಂದಲೇ ತಯಾರಾಗಿರ ಬೇಕೆಂದು ನನ್ನ ವಿನಮ್ರ ಸಲಹೆ.

Related Tags: Olympic Games, Indian Performance, Ravi Kiran Rai, Reader''s Letter
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ