ಭರತಖಂಡದಲ್ಲಿ ಇದೆಲ್ಲವೂ ಸಾಧ್ಯ
2014ಕ್ಕೆ ಮುಂಚೆ ಗೋಮಾಂಸ ರಫ್ತಿನಲ್ಲಿ ಭಾರತ ನಂಬರ್ ವನ್ ಆದುದಕ್ಕೆ ಜನರೇಕೆ ಪ್ರತಿಕ್ರಿಯಿಸುತ್ತಿಲ್ಲವೆಂದು ಕೇಳುವ ವ್ಯಕ್ತಿಯೂ ಮತ್ತು 2014ರ ನಂತರ ಗೋರಕ್ಷಕರ ವಿರುದ್ಧ ಹರಿಹಾಯುವ ವ್ಯಕ್ತಿಯೂ ಒಬ್ಬನೇ ಆಗಿರುವುದು ಸಾಧ್ಯವೇ?

ಸುರೇಶ ಭಟ್ ಬಾಕ್ರಬೈಲ್

2014ಕ್ಕೆ ಮುಂಚೆ ಗೋಮಾಂಸ ರಫ್ತಿನಲ್ಲಿ ಭಾರತ ನಂಬರ್ ವನ್ ಆದುದಕ್ಕೆ ಜನರೇಕೆ ಪ್ರತಿಕ್ರಿಯಿಸುತ್ತಿಲ್ಲವೆಂದು ಕೇಳುವ; ಪ್ರಾಣಿಗಳನ್ನು ಕಡಿದು ಮಟನ್, ಬೀಫ್ ರಫ್ತು ಮಾಡಿದ 'ಪಿಂಕ್' ಕ್ರಾಂತಿಯ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ವ್ಯಕ್ತಿಯೂ, 2014ರ ನಂತರ ತನ್ನ ಮೊತ್ತಮೊದಲ ಟೌನ್ಹಾಲ್ ಭಾಷಣದಲ್ಲಿ ಗೋರಕ್ಷಕರ ವಿರುದ್ಧ ಹರಿಹಾಯುವ ವ್ಯಕ್ತಿಯೂ ಒಬ್ಬನೇ ಆಗಿರುವುದು ಸಾಧ್ಯವೇ?

ಪಂಚಾಯತು, ಜಿಲ್ಲಾ ಪಂಚಾಯತು, ನಗರಪಾಲಿಕೆ, ರಾಜ್ಯಗಳಲ್ಲಿನ ಘಟನೆಗಳ ಬಗ್ಗೆ ತನ್ನ ಪ್ರತಿಕ್ರಿಯೆ ನಿರೀಕ್ಷಿಸುವುದೇಕೆಂದು ಕೇಳುವ ವ್ಯಕ್ತಿಯೂ ಹೆಚ್ಚುಕಮ್ಮಿ ಪ್ರತಿಯೊಂದು ವಿದ್ಯಮಾನದ ಬಗ್ಗೆ ಟ್ವೀಟ್ ಮಾಡುವ ವ್ಯಕ್ತಿಯೂ ಒಬ್ಬನೇ ಆಗಿರುವುದು ಸಾಧ್ಯವೇ?

ಹೌದು, ಸಂದರ್ಭೋಚಿತವಾಗಿ ಮಾತನಾಡಬಲ್ಲ, ಎರಡು ನಾಲಿಗೆಯ, ಆಷಾಢಭೂತಿ, ಅವಕಾಶವಾದಿ ವ್ಯಕ್ತಿಗಳಿರುವ ಭರತಖಂಡದಲ್ಲಿ ಇದೆಲ್ಲವೂ ಸಾಧ್ಯ. ದಲಿತ ವೋಟುಗಳಿಂದ ಚುನಾವಣೆ ಗೆದ್ದು ಮನುಸ್ಮೃತಿ ಆಧಾರಿತ ಜಾತಿವಾದಿ, ಕೋಮುವಾದಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಬಯಸುತ್ತಿರುವವರು ತಮ್ಮ ಗುರಿ ಸಾಧಿಸಲು ಏನು ಬೇಕಾದರೂ ಹೇಳಬಲ್ಲರು, ಮಾಡಬಲ್ಲರು. ಮತದಾರರು, ಅದರಲ್ಲೂ ವಿಶೇಷವಾಗಿ ದಲಿತರು, ಒಂದು ಮುಖ್ಯ ವಿಷಯವನ್ನು ಮರೆಯಬಾರದು - ಹುಲಿ ಎಂದೂ ತನ್ನ ಪಟ್ಟೆಗಳನ್ನು ಬದಲಾಯಿಸದು.

Related Tags: Goraksha, Central Govt, Hindu
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ