ಕಟೀಲು ಭ್ರಮರಾಂಬೆಗೆ ರಂಗಪೂಜೆ, ಚಿನ್ನದ ರಥೋತ್ಸವ
ಕೊಡುಗೈ ದಾನಿ ಐಕಳ ಹರೀಶ್‌ ಶೆಟ್ಟಿ ಹಾಗೂ ಚಂದ್ರಿಕಾ ಶೆಟ್ಟಿ ಅವರ ವೈವಾಹಿಕ ಜೀವನದ ಬೆಳ್ಳಿಹಬ್ಬ ಸಂಭ್ರಮದ ಅಂಗವಾಗಿ ಕಟೀಲು ಭ್ರಮರಾಂಬೆಗೆ ರಂಗಪೂಜೆ, ಚಿನ್ನದ ಪಲ್ಲಕ್ಕಿ ಉತ್ಸವ, ಚಿನ್ನದ ರಥೋತ್ಸವ ನಡೆಯಿತು.

ಕರಾವಳಿಕರ್ನಾಟಕ ವರದಿ
ಮಂಗಳೂರು:
ಕಟೀಲು ದೇವಸ್ಥಾನದಲ್ಲಿ ಮುಂಬಯಿಯ ಹೆಸರಾಂತ ಉದ್ಯಮಿ, ಚತುರ ಸಂಘಟಕ ಹಾಗೂ ಕೊಡುಗೈ ದಾನಿ ಐಕಳ ಹರೀಶ್‌ ಶೆಟ್ಟಿ ಹಾಗೂ ಚಂದ್ರಿಕಾ ಶೆಟ್ಟಿ ಅವರ ವೈವಾಹಿಕ ಜೀವನದ ಬೆಳ್ಳಿಹಬ್ಬ ಸಂಭ್ರಮದ ಅಂಗವಾಗಿ ಕಟೀಲು ಭ್ರಮರಾಂಬೆಗೆ ರಂಗಪೂಜೆ, ಚಿನ್ನದ ಪಲ್ಲಕ್ಕಿ ಉತ್ಸವ, ಚಿನ್ನದ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ . ಭ್ರಮರಾಂಬೆಯ ನಿತ್ಯ ಆರಾಧಕರಿಗೆ ಗುರುವಂದನೆ ಮತ್ತು ದ.ಕ. ಉಡುಪಿ. ಕಾಸರಗೋಡು ಸಹಿತ ಮುಂಬಯಿ ಧಾರ್ಮಿಕ ಕ್ಷೇತ್ರದ 50ಕ್ಕೂ ಮಿಕ್ಕಿ ಸಾಧಕರಿಗೆ ಗೌರವಾರ್ಪಣೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಅಭಯಚಂದ್ರ ಜೈನ್‌ ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ನಿಟ್ಟೆ ವಿದ್ಯಾ ಸಂಸ್ಥೆಯ ಕುಲಾಧಿಪತಿ ಎನ್‌. ವಿನಯ ಹೆಗ್ಡೆ, ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಚಿವ ಅಮರನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಸುನಿಲ್‌ ಕುಮಾರ್‌, ಶ್ರೀದೇವಿ ಶಿಕ್ಷಣ ಸಂಸ್ಥೆಯ ಎ. ಸದಾನಂದ ಶೆಟ್ಟಿ,  ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಅತ್ತೂರು ಹೊಸಲೊಟ್ಟು ಬಾಬು ಎನ್‌. ಶೆಟ್ಟಿ, ಮರವೂರು ಪಾಪ್ಯುಲರ್‌ ಫಾರ್ಮ್ಸ್‌ನ ಜಗದೀಶ ಶೆಟ್ಟಿ, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ, ಮಹಾರಾಷ್ಟ್ರ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಪಾಲೆತ್ತಾಡಿ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಂಗಳೂರು ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ರೈ ಮಾಲಾಡಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ , ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಪುಣೆ, ಕಟೀಲಿನ ಆಡಳಿತಾಧಿಕಾರಿ ಗೋಕುಲ್‌ದಾಸ್‌ ನಾಯಕ್‌, ಉಡುಪಿ ಯುವ ಬಂಟರ ಸಂಘದ ಇಂದ್ರಾಳಿ ಜಯಕರ್‌ ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ, ಮುಂಬಯಿ ಉದ್ಯಮಿಗಳಾದ ಸುಬ್ಬಯ್ಯ ಶೆಟ್ಟಿ, ಮುಂಬಯಿ ಪಯ್ಯಡೆ ಸಂಸ್ಥೆಯ ಪದ್ಮನಾಭ ಪಯ್ಯಡೆ, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಿ.ಎ. ಶಂಕರ ಶೆಟ್ಟಿ, ಮುಂಬಯಿ ಉದ್ಯಮಿ ರವಿ ಶೆಟ್ಟಿ, ಮುಂಬಯಿ ಉದ್ಯಮಿ ಸುಧಾಕರ ಹೆಗ್ಡೆ, ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಐಕಳ ಕುಂಬಿಲ್‌ಗ‌ುತ್ತು ಕುಟುಂಬದ ಅಧ್ಯಕ್ಷ ರಾಮಣ್ಣ ಶೆಟ್ಟಿ, ಮುಂಡ್ಕೂರು ಕೋರಿಬೆಟ್ಟು ಅನ್ನೆದಗುತ್ತು ಕುಟುಂಬ ಅಧ್ಯಕ್ಷ ಕೃಷ್ಣ ವಿ. ಶೆಟ್ಟಿ, ಯಮುನಾ ಶೆಟ್ಟಿ ಅನ್ನೆದ ಗುತ್ತು, ಅರ್ಜುನ್‌ ಶೆಟ್ಟಿ, ಸನ್ನಿಧಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಆಳ್ವಾಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಮೋಹನ ಆಳ್ವ ಪ್ರಸ್ತಾವನೆಗೈದರು. ಐಕಳ ಹರೀಶ್‌ ಶೆಟ್ಟಿ ಸ್ವಾಗತಿಸಿದರು. ಅಶೋಕ್‌ ಪಕ್ಕಳ ಮುಂಬಯಿ, ಪುರುಷೋತ್ತಮ ಭಂಡಾರಿ ಅಡ್ಯಾರ್‌, ಸಾಯಿನಾಥ ಶೆಟ್ಟಿ ಮುಂಡ್ಕೂರು, ಶರತ್‌ ಶೆಟ್ಟಿ, ಪ್ರೇಮನಾಥ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು. ಗುಣಪಾಲ ಶೆಟ್ಟಿ ಐಕಳ ವಂದಿಸಿದರು.

Related Tags: Aikala Harish Shetty, Kateel Temple, Bharmaramba, Silver Wedding Anniversary, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ