ಟಿ.ವಿ., ಪುಸ್ತಕದ ವಿಚಾರವಾಗಿ...

ವಿಲ್ಸನ್, ಕಟೀಲ್

 
            ಟಿ.ವಿ., ಪುಸ್ತಕದ ವಿಚಾರವಾಗಿ...


ಟಿ.ವಿ.- ನೋಡುವುದು
ಪುಸ್ತಕ- ಓದುವುದು
ನೋಡುವುದು- ಸೌಂದರ್ಯ
ಓದುವುದು- ವಿದ್ಯೆ!
*
ಟಿ.ವಿ. ನೋಡಲು
ಕಣ್ಣಿದ್ದರೆ ಸಾಕು
ಪುಸ್ತಕ ಓದಲು
ಮನಸೂ ಬೇಕು!
*
ನೋಡುವವರ ಕಣ್ಣಿಗೆ
ಬಣ್ಣವನ್ನಷ್ಟೇ ಎರಚಬಲ್ಲದು- ಟಿ.ವಿ.
ಓದುವವರ ಮನಸಿಗೆ
ವಿಚಾರವನ್ನೂ ದಾಟಿಸಬಲ್ಲದು- ಪುಸ್ತಕ!
*
ಟಿ.ವಿ.ಗೆ ಮಾತೇ ಬಂಡವಾಳ
ವೇದಿಕೆಮೇಲಿನ ರಾಜಕಾರಣಿಯೆಂತೆ
ಆದರೆ, ಪುಸ್ತಕ ಮೌನಿ
ಪರೀಕ್ಷೆಗೆ ಓದುವ ವಿದ್ಯಾರ್ಥಿಯಂತೆ
*
ಪೊಳ್ಳು ಜ್ಯೋತಿಷ್ಯ, ಟೊಳ್ಳು ಧಾರವಾಹಿ
ಸುಳ್ಳು ಜಾಹೀರಾತು, ಪ್ರಾಯೋಜಿತ ಭಾಷಣ
ಟಿವಿ.- ಕ್ಷಣಕ್ಕೊಮ್ಮೆ ಬದಲಾಯಿಸುತ್ತೆ ರಂಗು
ಆದರೆ ಪುಸ್ತಕ ಹಾಗಲ್ಲ
ಅದಕ್ಕಿಲ್ಲ ರಿಮೋಟ್ ಕಂಟ್ರೋಲಿನ ಹಂಗು!
*
ನನ್ನೂರಲ್ಲೊಂದು ವಿಚಿತ್ರ ನಡೆದು,
ಟಿ.ವಿ.ಯೇ ಗ್ರಂಥಾಲಯದ
ಅಧಿಕಾರಿಯಾಗಿ,
ಬಂಡಾಯವೆದ್ದ ಪುಸ್ತಕಗಳೆಲ್ಲಾ ಬೀದಿಗಿಳಿದಿವೆ!
*
ಈಗ, ಪುಸ್ತಕಗಳೂ ಕೈಯಲ್ಲಿ ಮೈಕು ಹಿಡಿದಿವೆ
ಕಬಾಟುಗಳ ಬಂಧನಕ್ಕೊಂದು ಗುದ್ದು!
ಕೇಳಿ... ಕೇಳಿ... ಸರ್ಕಾರಿ ಕಛೇರಿಯಲ್ಲೆಲ್ಲೋ
ಟಿ.ವಿ. ಒಡೆದ ಸದ್ದು!
***

 

Related Tags: Wilson Kateel, Kannada Poem, Karavali Karnataka, Sahitya Loka, T V Pustakada Vicharavaagi
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ