ಪ್ರದೀಪ್ ಪಾಲಡ್ಕ ಈಗ ಸಿನೆಮಾ ನಿರ್ದೇಶಕ

ಲೆನಾರ್ಡ್ ಫೆರ್ನಾಂಡಿಸ್
ಪ್ರದೀಪ್ ಬಾರ್ಬೋಜಾ ಪಾಲಡ್ಕ ಅವರ ಚೊಚ್ಚಲ ಸಿನೆಮಾ “ಏಕ್ ಅಸ್ಲ್ಯಾರ್ ಏಕ್ ನಾ”(ಒಂದಿದ್ದರೆ ಒಂದಿಲ್ಲ) ಕೊಂಕಣಿಯ ಬಹು ನಿರೀಕ್ಷಿತ ಚಲನಚಿತ್ರ.  ಚಿತ್ರದ ಬಗ್ಗೆ ನಿರ್ದೇಶಕರೇ ಇಲ್ಲಿ ಮಾತಾಡಿದ್ದಾರೆ.
ಶನಿವಾರ ಸಮಯ ಸಂಜೆ ಐದಕ್ಕೆ ಆಸುಪಾಸು. ತಮ್ಮ ಚೊಚ್ಚಲ ಸಿನೆಮಾ “ಏಕ್ ಅಸ್ಲ್ಯಾರ್ ಏಕ್ ನಾ”(ಒಂದಿದ್ದರೆ ಒಂದಿಲ್ಲ) ಇದರ ಎರಡನೇ ಭಾಗದ ಡಬ್ಬಿಂಗ್ ಕೆಲಸವನ್ನು ಪೂರ್ತಿಗೊಳಿಸಿ ಸ್ಟುಡಿಯೋದಿಂದ ಹೊರಬಂದ ನಿರ್ದೇಶಕ ಪ್ರದೀಪ್ ಬಾರ್ಬೋಜಾ ಪಾಲಡ್ಕರ ಮುಖದಲ್ಲಿ ಸಂತ್ರಪ್ತಿಯ ಛಾಯೆ ಎದ್ದು ಕಾಣುತ್ತಿತ್ತು. ಕೊಂಕಣಿಯ ಬಹುನಿರೀಕ್ಷೆಯ ಚಿತ್ರದ ಬಗ್ಗೆ ಮಾಹಿತಿ ಸಂಗ್ರಹಿಸಲು ಅಲ್ಲಿಗೆ ಆಗಮಿಸಿದ ಸ್ಥಳೀಯ ಕೆಲ ಮಾಧ್ಯಮ ಪ್ರತಿನಿಧಿಗಳ ಮುಂದೆ ಅವರು ತಮ್ಮ ಚಿತ್ರದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

“ಕೊಂಕಣಿ ಹಾಗೂ ತುಳು ರಂಗಭೂಮಿಯಿಂದ ತನ್ನ ಕಲಾಬೆಳವಣಿಗೆಯ ಬಗೆ ಸಹಕಲಾವಿದರ ಪ್ರೋತ್ಸಾಹ ಹಾಗೂ ಪ್ರೇಕ್ಷಕರ ಆಶೀರ್ವಾದದಿಂದ ಬರೆದು ನಿರ್ದೇಶಿದ ನಾಟಕಗಳೆಲ್ಲವೂ ವಿಶೇಷ ಪ್ರಸಿದ್ಧಿ ಗಳಿಸಿದವು ಎಂದರು. ಇದರ ನಡುವೆ ತಾವು ಯಾಕೆ ಸಿನೆಮಾವೊಂದನ್ನು ನಿರ್ದೇಶಿಸಬಾರದು ಎಂಬ ಪ್ರಶ್ನೆಗಳು ಸಹನಟ, ಅಭಿಮಾನಿ ಹಾಗೂ ಪ್ರೇಕ್ಷಕವೃಂದದಿಂದ ಕೇಳಿಬಂತು. ಈ ಬಗ್ಗೆ ಕೊಲ್ಲಿರಾಷ್ಟ್ರದ ಕೆಲ ಉದ್ಯಮಿಗಳು ನಿರ್ಮಾಣದ ಹೊರೆ ಹೊರುವುದಾಗಿಯೂ ಹೇಳಿ ಮುಂದೆಬಂದರು. ಆದರೆ ಕಲಾ ಜಗತ್ತಿನಲ್ಲಿ ಸಿನೆಮಾ ಹಾಗೂ ನಾಟಕ ಇವೆರಡರ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ. ಆದುದರಿಂದ ತಕ್ಷಣ ಸಮ್ಮತಿ ಸೂಚಿಸದೆ ಸಿನೆಮಾ ಬಗ್ಗೆ ಹೆಚ್ಚು ತಿಳಿದು ಕೊಳ್ಳಲು ನಾಲ್ಕುವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿದೆ. ಧಾರವಾಹಿ ಹಾಗೂ ಸಿನೆಮಾದಲ್ಲಿ ನಟನಾಗಿ ಅಭಿನಯಿಸಿದೆ. ಇನ್ನು ಸಿನೆಮಾ ಕ್ಷೇತ್ರಕ್ಕೆ ಇಳಿಯಬಹುದೆಂದು ಮನವರಿಕೆಯಾದ ಕೂಡಲೇ, ತಾಯಿನೆಲದ ಸೊಗಡು, ನಿತ್ಯ ಆಗುಹೋಗುಗಳ ಸುತ್ತ ಹಾಸ್ಯವಿರುವ ಕಥೆಯೊಂದನ್ನು ಸಿದ್ಧಪಡಿಸಿಕೊಂಡು ಸಿನೆಮಾಕ್ಕೆ ಸೈ ಎಂದೆ. ತಕ್ಷಣ ಈಗಾಗಲೇ ಕೊಂಕಣಿ, ಕನ್ನಡ ಹಾಗೂ ತುಳುವಿನಲ್ಲಿ ನಾಲ್ಕು ಸಿನೆಮಾಗಳನ್ನು ನಿರ್ಮಿಸಿರುವ ಫ್ರ್ಯಾಂಕ್ ಫೆರ್ನಾಂಡಿಸ್‌ರವರು ತಮ್ಮದೇ “ಫರ್ನ್ಸ್ ಮೂವಿ ಇಂಟರ್ ನ್ಯಾಶನಲ್” ಸಂಸ್ಥೆಯ ಮೂಲಕ ಈ ಸಿನೆಮಾವನ್ನು ನಿರ್ಮಿಸಲು ಒಪ್ಪಿಕೊಂಡರು. ಅದೂ ಚಿತ್ರಕಥೆಯ ಸಾಕ್ಷಾತ್ಕಾರಕ್ಕೆ ದುಬಾರಿ ಬಜೆಟ್ ಅಗತ್ಯವಿದೆ ಎಂದು ಅರಿತುಕೊಂಡು. ಈಗ “ಏಕ್ ಅಸ್ಲ್ಯಾರ್ ಏಕ್ ನಾ” ಚಿತ್ರೀಕರಣ ಹಾಗೂ ಡಬ್ಬಿಂಗ್ ಕೆಲಸಗಳನ್ನು ಮುಗಿಸಿ ನಿರ್ಮಾಣದ ಅಂತಿಮ ಹಂತದಲ್ಲಿದೆ. ಚಿತ್ರದ ಈವರೆಗಿನ ಪಯಣ ತುಂಬಾ  ತೃಪ್ತಿದಾಯಕವಾಗಿದೆ” ದೀರ್ಘ ಪೀಠಕೆಗೆ ವಿರಾಮಕೊಟ್ಟಂತೆ ಪ್ರದೀಪ್ ಪಾಲಡ್ಕರು ಮುಗುಳ್ನಕ್ಕರು. ತಕ್ಷಣ ಆಗಾಗಲೇ ಅಲ್ಲಿಗೆ ತಲುಪಿದ್ದ ಅಂತರ್ಜಾಲ ಮಾಧ್ಯಮದ ಪ್ರತಿನಿಧಿಯೋರ್ವರು ಚಿತ್ರದ ವಿಶೇಷತೆಗಳ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಮಗದೊಮ್ಮೆ ಮುಗುಳ್ನಕ್ಕು ಶಾಂತವಾಗಿ ತಮ್ಮ ಚಿತ್ರ ತಂಡದ ಬಗ್ಗೆ ವಿವರಣೆಗಿಳಿದರು.

“ಯಾವುದೇ ತಟಸ್ಥಗಳಿಲ್ಲದೆ ನಿಗದಿತ ಮೂವತ್ತು ದಿನಗಳಲ್ಲಿ ಚಿತ್ರೀಕರಣವನ್ನು ಮುಗಿಸಿದ್ದೇವೆ. ಕನ್ನಡ ಸಿನೆಮಾ “ಸವಾರಿ 2” ಖ್ಯಾತಿಯ ಛಾಯಗ್ರಾಹಕ, ಬಾಲಿವುಡ್ ಹಾಗೂ ಟೋಲಿವುಡ್ ಇವೆರಡರಲ್ಲೂ ಛಾಯಗ್ರಹಣದ ಅನುಭವವಿರುವ ಡಿ.ಶಶಿಕುಮಾರ್ ಚೆನ್ನೈ ಇವರು ಈ ಚಿತ್ರದ ಪ್ರಮುಖ ಛಾಯಾಗ್ರಾಹಕರಾಗಿದ್ದರೆ. ಕನ್ನಡ, ತೆಲುಗು ಸಿನೆಮಾ ಜಗತ್ತಿನ ಆಪ್ತ ಸಾಹಸ ನಿರ್ದೇಶಕ ಮಾಸ್ ಮಾದ ಈ ಚಿತ್ರಕ್ಕೆ ಅದ್ಭುತ ಸಾಹಸಗಳಿಗೆ ನಿರ್ದೇಶನ ನೀಡಿದ್ದರೆ. ಕೋಸ್ಟಲ್ ವುಡ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಂಗಳೂರು ಸೆಂಟ್ರಲ್ ಜೈಲ್ ಹಾಗೂ ವಿಮಾನ ನಿಲ್ದಾನಗಳನ್ನು ಈ ಚಿತ್ರದ ಚಿತ್ರಿಕರಣಕ್ಕಾಗಿ ಬಳಸಲಾಗಿದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರ ಪಂಗಡದ ವನಿಲ್ ವೇಗಸ್ ಸಂಗೀತ ನಿರ್ದೇಶನ ನೀಡಿದ್ದಾರೆ. ಕೊಂಕಣಿಯ ಜನಮೆಚ್ಚಿನ ಸಾಹಿತಿ ವಿಲ್ಸನ್ ಕಟೀಲ್ ಇವರ ಸಾಹಿತ್ಯವಿದೆ ಹಾಗೂ ಕೊಂಕಣಿಯಲ್ಲಿ ಮೊದಲ ಬಾರಿಗೆ ಎಂಬಂತೆ ಸಂಪೂರ್ಣ ಐಟಂ ಡ್ಯಾನ್ಸ್‌ವೊಂದನ್ನು ಚಿತ್ರೀಕರಿಸಲಾಗಿದೆ. ಮೊದಲನೇ ಭಾಗದ ಡಬ್ಬಿಂಗ್ ಕೆಲಸವನ್ನು ತಮಿಳ್ ಸ್ಟಾರ್ ವಿಜಯ್ ಇವರ ಡಬ್ಬಿಂಗ್ ತಂಡದ ಸದಸ್ಯರಾದ ಕೊಚ್ಚಿನ್ ಡಿಕ್ಸನ್ ಇವರ ದುಬಾಯಿಯಲ್ಲಿರುವ ಸ್ಟುಡಿಯೋದಲ್ಲಿ ನಡೆಸಲಾಗಿದೆ. ಕೊಂಕಣಿಯ ಹೆಸರಾಂತ ಹಾಸ್ಯ ತಂಡ “ಮೆಮೊರಿ” ಇದರ ಸದಸ್ಯರ ಜೊತೆಗೆ,”ಆಸ್ಕರ್ ನೋಮಿನೇಷನ್ ಪಟ್ಟಿಗೆ ಸ್ಪರ್ದಿಸಿದ “ನಾಚುಂಯಾ ಕುಂಪಾಸರ್”ಚಿತ್ರ ಖ್ಯಾತಿಯ ನಟ ಜೋನ್ ಡಿ ಸಿಲ್ವಾ ಗೋವಾ ಹಾಗೂ “ನಿರೆಲ್” ಹಾಗೂ “ದಂಡ್” ಖ್ಯಾತಿಯ ದೀಪಕ್ ಪಾಲಡ್ಕ ಹಾಸ್ಯಪ್ರಧಾನ ಕಲಾವಿದರಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ…  ”ಮಾತು ಮುಂದುವರೆದು ಹೋದಂತೆ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ ಅಲ್ಫೋನ್ಸ್ ಮೂಡ್ ಬೆಳ್ಳೆ  “ಬೆಂಗಳೂರಿಗೆ ಹೋಗಲು ಇದೆ..”ಎಂಬ ಪಿಸುಮಾತಿಗೆ  ತಕ್ಷಣವೇ ವಿವರಣೆಗೆ ವಿರಾಮ ಕೊಟ್ಟ ಪ್ರದೀಪರು “ಮುಂದೊಂದು ದಿನ ಆರಾಮವಾಗಿ ಮಾತಾಡೋಣ” ಎಂದು ಭರವಸೆಯನ್ನು ನೀಡುತ್ತಾ ಶಾಂತವಾಗಿ ಮುಂದೆ ನಡೆದರು.

ದ.ಕ ದಿಂದ ಹಿಡಿದು ಕೊಲ್ಲಿರಾಷ್ಟ್ರಗಳ ತನಕ ತನ್ನ ವಿಶಿಶ್ಟ ರೀತಿಯ ಹಾಸ್ಯಪ್ರಧಾನ ನಾಟಕಗಳಿಂದ ಕೊಂಕಣಿ ಭಾಷಿಕರ ನಡುವೆ ವಿಶೇಷ  ಖ್ಯಾತಿ ಗಳಿಸಿರುವ ಪ್ರದೀಪ್‌ರವರು ಸಿನೆಮಾವೊಂದನ್ನು ನಿರ್ದೇಶಿಸುತ್ತಾರೆಂದರೆ ಪ್ರೇಕ್ಷಕರಿಗೆ ಮನೋರಂಜನೆ ತಪ್ಪಿದ್ದಲ್ಲ ಎಂದು ಅವರ ಅಭಿಮಾನಿಗಳ ಅಂಬೋಣ. ಚಿತ್ರ ಬಿಡುಗಡೆಯ ಬಗ್ಗೆ ಈ ವರೆಗೆ ಸಮಯ ನಿಗದಿಪಡಿಸಿಲ್ಲವಾದರೂ ಎಪ್ರಿಲ್-ಮೇ ತಿಂಗಳಲ್ಲಿ ಪ್ರದರ್ಶನಕ್ಕೆ ತಯಾರಿ ನಡೆಯುತ್ತಿದೆ ಎಂಬ ಮಾತು ಚಿತ್ರ ತಂಡದ ಆಪ್ತ ಮೂಲಗಳಿಂದ ಕೇಳಿಬರುತ್ತಿದೆ.

Related Tags: Pradeep Barboza Paladka, Konkani Film, Ek Aslyar Ek Na, Lenard Fernandes
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ