ಉಡುಪಿ ಅಪಘಾತ: ಇಬ್ಬರಿಗೆ ಗಾಯ

ಕರಾವಳಿಕರ್ನಾಟಕ ವರದಿ
ಉಡುಪಿ: ಎಂಜಿಎಂ ಕಾಲೇಜಿನ ಬಳಿ ವೇಗವಾಗಿ ಧಾವಿಸುತ್ತಿದ್ದ ಕಾರೊಂದು ರಸ್ತೆ ದೀಪದ ಕಂಬಕ್ಕೆ ಗುದ್ದಿದಾಗ ಇಬ್ಬರು ತೀವೃವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ಪ್ರಯಾಣಿಕರ ಜೀವ ಉಳಿಸಿರಬೇಕೆಂದು ಹೇಳಲಾಗುತ್ತಿದೆ. ಅಪಘಾತದ ತೀವೃತೆಗೆ ಕಾರಿನ ಚಕ್ರ ಮತ್ತಿತರ ಭಾಗಗಳು ನಜ್ಜುಗುಜ್ಜಾಗಿವೆ.

ಮಣಿಪಾಲದಿಂದ ಉಡುಪಿಯತ್ತ ಬರುತ್ತಿದ್ದ ಗಜಾನನ ನಾಯಕ್(25) ಮತ್ತು ಅವರ ಸ್ನೇಹಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕ್ಕೆ ಗುದ್ದಿದಾಗ, ಕಂಬಕ್ಕೆ ಗುದ್ದಿ  ಹಲವು ದೂರ ಚಲಿಸಿ ಕೊನೆಗೂ ಕಾರು ನಿಂತಿದೆ.

ಉಡುಪಿ ಟ್ರಾಫಿಕ್ ಠಾಣೆ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.

Related Tags: Udupi MGM Accident, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ