ದೇವರೆಂಬುದಿಲ್ಲ: ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್

ಲಂಡನ್: ದೇವರೆಂಬುದು ಇಲ್ಲ, ಕಂಪ್ಯೂಟರ್‌ಗಳು ಮುಂದಿನ ನೂರು ವರ್ಷಗಳಲ್ಲಿ ಮಾನವರ ಬುದ್ದಿಮತ್ತೆ ಮೀರಿಸಿ ಬೆಳೆಯಲಿವೆ ಎಂದು ವಿಶ್ವವಿಖ್ಯಾತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಹೇಳಿದ್ದಾರೆ. ವಿಜ್ಞಾನ ಎಲ್ಲದರ ಉಗಮವನ್ನು ವಿವರಿಸುವಲ್ಲಿ ಯಶಸ್ವಿಯಾಗಿದ್ದು ದೇವರಿದ್ದಾನೆಂಬುದು ಸುಳ್ಳು ಎಂದು 73 ವರ್ಷ ಪ್ರಾಯದ ವಿಜ್ಞಾನಿ ಸ್ಪಷ್ಟವಾಗಿ ಹೇಳಿದ್ದಾರೆ.

ವಿಜ್ಞಾನಿಗಳು ದೇವರನ್ನು ನಂಬಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಟೀಫನ್ ಹಾಕಿಂಗ್ ನಾನು ದೇವರೆಂಬ ಪದವನ್ನು ಪ್ರಕೃತಿಯ ನಿಯಮಗಳಿಗೆ ಐನ್‌ಸ್ಟೀನ್ ಬಳಸಿದ ಹಾಗೆ ಬಳಸುತ್ತೇನೆ ಎಂದರು. ಮನುಷ್ಯರು ಮುಂದೊಂದು ದಿನ ಧರ್ಮ ಮತ್ತು ದೇವರನ್ನು ಬಿಟ್ಟುಬಿಡಹುದೆ ಎಂಬ ಪ್ರಶ್ನೆಗೆ ವಿಶ್ವದ ಉಗಮವನ್ನು ವಿಜ್ಞಾನದ ತತ್ವಗಳೇ ಸಾಕು, ದೇವರನ್ನು ಅವಾಹಿಸುವ ಅಗತ್ಯವೇ ಇಲ್ಲ, ವಿಜ್ಞಾನವನ್ನು ಅರಿಯುವ ಮುನ್ನ ವಿಶ್ವವನ್ನು ದೇವರು ಸೃಷ್ಟಿಸಿದ ಎಂದು ನಂಬುವುದು ಸ್ವಾಭಾವಿಕ, ಆದರೆ ವಿಜ್ಞಾನ ಹೆಚ್ಚು ಅರ್ಥಪೂರ್ಣ ವ್ಯಾಖ್ಯಾನವನ್ನು ಈಗ ನಮಗೆ ನೀಡಿದೆ. ದೇವರು ಎಂಬುವವ ಇದ್ದಿದ್ದರೆ ಆತನಿಗೆ ಏನೆಲ್ಲ ಗೊತ್ತಿರಬಹುದಿತ್ತೊ ಅದೆಲ್ಲವೂ ಈಗ ನಮಗೆ ಗೊತ್ತಿದೆ, ಆದರೆ ದೇವರೆಂಬುದಿಲ್ಲ, ನಾನು ನಾಸ್ತಿಕ ಎಂದು ಹಾಕಿಂಗ್ ಹೇಳಿದ್ದಾರೆ.

ಆನ್ಯಲೋಕದ ಜೀವಿಗಳು ಭೂಮಿಗೆ ಬಂದರೆ ಅವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಲ್ಲವು. ಅನ್ಯಲೋಕದ ಜೀವಿಗಳು ಅಲೆಮಾರಿಗಳಾಗಿದ್ದಿರಬಹುದು ಮತ್ತು ಅವು ಸಾಧ್ಯವಾದ ಗೃಹಗಳನ್ನೆಲ್ಲ ತಲುಪಲು ಪ್ರಯತ್ನಿಸಬಹುದು, ಅನ್ಯಲೋಕದ ಜೀವಿಗಳು ಇರುವುದಂತೂ ನಿಜ, ಅವು ಹೇಗಿರುತ್ತವೆ ಎಂದು ಕಂಡುಕೊಳ್ಳುವುದು ಮಾತ್ರ ಈಗಿರುವ ಸವಾಲು ಎಂದು ಹೇಳಿರುವ ಹಾಕಿಂಗ್ ಮುಂದಿನ ನೂರು ವರ್ಷಗಳಲ್ಲಿ ಕಂಪ್ಯೂಟರ್‌ಗಳು ಮನುಷ್ಯರನ್ನು ಮೀರಿಸಲಿವೆ. ಹಾಗಾದಾಗ ಕಂಪ್ಯೂಟರ್‌ಗಳು ನಮ್ಮ ಗುರಿಗಳೊಂದಿಗೆ ಸಮಾನವಾದ ಗುರಿಗಳನ್ನು ಹೊಂದಿರುವಂತೆ ನಾವು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಭೂಮಿಗೆ ದೊಡ್ಡ ದುರಂತವೊಂದು ಅಪ್ಪಳಿಸುವ ಅಪಾಯ ಹೆಚ್ಚುತ್ತಿದ್ದು ವಿಶ್ವದ ಬೇರೆಡೆ ವಾಸಕ್ಕಾಗಿ ಸುರಕ್ಷಿತ ಸ್ಥಳವನ್ನು ನಾವು ಹುಡುಕಬೇಕು ಎಂದು ಹೇಳಿರುವ ಭೌತಶಾಸ್ತ್ರಜ್ಞ ಹಾಕಿಂಗ್ ತಾನೊಬ್ಬ ನಾಸ್ತಿಕ ಎಂದು ಪುನರುಚ್ಚರಿಸಿದ್ದಾರೆ.

Related Tags: Steffen Hawking, Aliens
 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ