ಜಮಾಲಾಬಾದ್ ಕೋಟೆ ರಸ್ತೆ ಅಧೋಗತಿ


ವಿಶೇಷ ವರದಿ: ಶಿಬಿಧರ್ಮಸ್ಧಳ
ಬೆಳ್ತಂಗಡಿ: ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ, ಚಾರಣಿಗರ ಸ್ವರ್ಗ, ಸ್ವಾತಂತ್ರ್ಯ ಹೋರಾಟದ ಕುರುಹುಗಳನ್ನು ಇನ್ನೂ ತನ್ನಲ್ಲಿ ಉಳಿಸಿಕೊಂಡಿರುವ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಟಿಪ್ಪು ಸುಲ್ತಾನನ ಯದ್ದ ಕೇಂದ್ರವಾಗಿದ್ದ  ಜಮಲಾಬಾದ್ ಕೋಟೆ (ಗಡಾಯಿಕಲ್ಲು) ಪ್ರತಿ ನಿತ್ಯ ತನ್ನತ್ತ ರಾಜ್ಯದ ವಿವಿದ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಆದರೆ ಈ ಇತಿಹಾಸ ಪ್ರಸಿದ್ದ ಪ್ರವಾಸಿತಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾತ್ರ ಸಂಪೂರ್ಣ ಹದಗೆಟ್ಟು ಹೋಗಿದ್ದು ಪ್ರತಿನಿತ್ಯ ಬರುವ ಪ್ರವಾಸಿಗರು, ಇಲ್ಲಿನ ನಿವಾಸಿಗಳು ಸರಕಾರಕ್ಕೆ ಶಾಪ ಹಾಕುತ್ತಲೆ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಬೆಳ್ತಂಗಡಿ ಕಿಲ್ಲೂರು ರಸ್ತೆಯಲ್ಲಿ 5 ಕಿ ಮೀ ಸಾಗಿದರೆ ಗಡಯಿಕಲ್ಲು ರಸ್ತೆ ಸಿಗುತ್ತದೆ. ಇಲ್ಲಿಂದ ಮೂರು ಕಿಲೋಮೀಟರ್ ಸಾಗಬೇಕೆಂದರೆ ಅದೊಂದು ಸಾಹಸವೆ ಸರಿ. ಈ ರಸ್ತೆ ಡಾಮರು ಕಂಡು ಎರಡು ದಶಕಗಳೇ ಕಳೆದಿದೆ, ಕೆಲ ವರ್ಷಗಳ ಹಿಂದೆ ರಸ್ತೆ ದುರಸ್ತಿ ಮಾಡಲಾಗಿತ್ತು ಆದರೆ ಅದು ಒಂದೇ ವರ್ಷದಲ್ಲಿ ಎದ್ದು ಹೋಯಿತು ಎನ್ನುತಾರೆ ಸ್ಧಳೀಯರು.  ರಸ್ತೆಯ ಡಾಮರು ಸಂಪೂರ್ಣವಾಗಿ ಕಿತ್ತು ಹೋಗಿದೆ, ದೊಡ್ಡ ಹೊಂಡಗಳೆ ನಿಮರ್ಾಣಗೊಂಡಿದೆ. ವಾಹನಗಳು ಎದ್ದೂ ಬಿದ್ದೂ ಸಾಗಬೇಕಾದ ಸ್ಧಿತಿಯಿದೆ. ಸ್ಧಳೀಯ ರಿಕ್ಷಾ ಚಾಲಕರುಗಳಂತೂ ಈ ರಸ್ತೆಯಲ್ಲಿ ಸಂಚರಿಸಲು ಹೆದರುತ್ತಾರೆ. ಬೈಕ್ ಪ್ರಯಾಣಿಕರ ಪಾಡಂತೂ ಹೇಳತೀರದ್ದಾಗಿದೆ ಹೊಂಡಗಳಿಗೆ ಬಿದ್ದು ಬೈಕ್ಗಳು ಉರುಳಿರುವ ಪ್ರಕರಣಗಳು ಅನೇಕವಿದೆ ಎನ್ನುತ್ತಾರೆ ಸ್ಧಳೀಯರು.

ಜಮಲಾಬಾದ್ ಕೋಟೆಯ ಪರಿಸರದಲ್ಲಿ ಹಾಗು ಇಲ್ಲೇ ಮುಂದೆ ಮೂಡಾಯಿ ಗುತ್ತು ಪ್ರದೇಶದಲ್ಲಿ ಸುಮಾರು 300 ಕ್ಕೂ ಹೆಚ್ಚು ಮನೆಗಳಿದ್ದು ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು, ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ವಾಹನಗಳ ಸಂಚಾರವಿರಲಿ ಕಾಲ್ನಡಿಗೆಯಲ್ಲಿ ಹೋಗುವುದೇ ಕಷ್ಟವಾಗಿ ಮಾರ್ಪಟ್ಟಿದೆ. ಇದೀಗ ಸ್ಧಳೀಯ ಯುವಕರು ರಸ್ತೆಯ ಹೊಂಡಗಳಿಗೆ ಮಣ್ಣು ಹಾಕಿರುವುದರಿಂದ ಕಷ್ಟ ಪಟ್ಟಾದರು ಹೋಗಬಹುದು, ಇನ್ನು ಮಳೆಗಾಲ ಆರಂಭಗೊಂಡಿತೆಂದರೆ ಈ ಹಾಕಿದ ಮಣ್ಣು ಎದ್ದು ಹೋಗಿ ಹೊಂಡಗಳಲ್ಲಿ ನೀರು ನಿಂತು ಸಂಚಾರ ಇನ್ನಷ್ಟು ಕಷ್ಟವಾಗಲಿದೆ. ರಸ್ತೆಯ ಪರಿಚಯವಿಲ್ಲದ ಪ್ರವಾಸಿಗರೆ ಹೆಚ್ಚಾಗಿ ಈ ರಸ್ತೆಯಲ್ಲಿ ಸಂಚರಿಸುವುದರಿಂದ ಅಪಘಾತಗಳಿಗೂ ಆಹ್ವಾನ ನೀಡಿದಂತಾಗಲಿದೆ. ಈ ರಸ್ತೆಯ ದುರಸ್ಧಿಗಾಗಿ ಇಲ್ಲಿನ ಜನರು ರಾಜಕಾರಣಿಗಳಲ್ಲಿ ಅಧಿಕಾರಿಗಳಲ್ಲಿ ಮನವಿ ಸಲ್ಲಿಸುತ್ತಲೆ ಬಂದಿದ್ದಾರೆ ಆದರೆ ಈ ವರೆಗೆ ರಸ್ತೆ ಮಾತ್ರ ದುರಸ್ತಿಯಾಗಿಲ್ಲ.
ಇದೀಗ ರಜಾದಿನಗಳಾದುದರಿಂದ ಬರುತ್ತಿರುವ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗುತ್ತಿದೆ, ಹೊರ ರಾಜ್ಯಗಳಿಂದಲೂ ಜನರು ಇಲ್ಲಿಗೆ ಬರುತ್ತಿದ್ದಾರೆ ವಾರಾತ್ಯಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ ರಸ್ತೆಯ ದುಸ್ದಿತಿ ಮಾತ್ರ ಎಲ್ಲರನ್ನು ಕಾಡುತ್ತಿದೆ.

ಇತಿಹಾಸ ಪ್ರಸಿದ್ದ ಪ್ರವಾಸಿತಾಣ:
ಜಮಲಾಬಾದ್ ಕೋಟೆ ಒಂದು ಐತಿಹಾಸಿಕ ತಾಣವಾಗಿದೆ. ಮೊದಲು ನರಸಿಂಹಗಡ ಎಂಬ ಹೆಸರು ಇದಕ್ಕಿತ್ತು ಟಿಪ್ಪಿಸುಲ್ತಾನ್ ಇದನ್ನು ಗೆದ್ದುಕೊಂಡು ಇಲ್ಲಿ ಕೋಟೆ ನಿರ್ಮಿಸಿ ಬ್ರಿಟೀಷರ ವಿರುದ್ದದ ಹೋರಾಟದ ಕೇಂದ್ರವಾಗಿಸಿದ್ದ. ಸಮುದ್ರ ಮಟ್ಟದಿಂದ 1788 ಅಡಿ ಎತ್ತರವಿರುವ ಬೃಹತ್ ಬಂಡೆಯ ಮೇಲೆ ಕೋಟೆ ,ಪಿರಂಗಿ, ಕೆರೆ ಗಳಿವೆ ಬಂಡೆಯನ್ನೇರುವುದೇ ಒಂದು ಸಾಹಸವಾಗಿದೆ. ಇದೀಗ ಪುರಾತತ್ವ ಇಲಾಖೆಯು ಇದನ್ನುನೋಡಿಕೊಳ್ಳುತ್ತಿದೆ. ಕುದುರೇಮುಖ ರಾಷ್ಟ್ರೀಯ ಉಧ್ಯಾನ ವನದ ಒಳಗಿರುವುದರಿಂದ ವನ್ಯಜೀವಿ ಇಲಾಖೆಯ ನಿಯಂತ್ರಣವು ಇದೆ.

ಕ್ರಿಯಾ ಯೋಜನೆ ಸಿದ್ದವಿದೆ.
ಪ್ರವಾಸಿ ತಾಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಅಭಿವೃದ್ದಿಗೆ ಪ್ರವಾಸೋಧ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಒಂದು ಕೋಟಿಯ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ ಸರಕಾರದ ಮಟ್ಟದಲ್ಲಿ ಅಂತಿಮ ಅನುಮೋದನೆ ಮಾತ್ರ ಬಾಕಿಯಿದ್ದು ಕೆಲವೇ ದಿನಗಳಲ್ಲಿ ಅದು ಸಿಗಲಿದೆ ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದೆಂದು ಶಾಸಕ ವಸಂತ ಬಂಗೇರ ಹೇಳಿದ್ದಾರೆ.

ಪ್ರತಿ ನಿತ್ಯ ಇಲ್ಲಿಗೆ ನೂರಾರು ಪ್ರವಸಿಗರು ಬಂದು ಹೋಗುತ್ತಿದ್ದಾರೆ, ಸ್ಧಳೀಯ ಜನರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈ ರಸ್ತೆಯಲ್ಲಿ ಓಡಾಡುವುದು ಕಷ್ಟ ಕಳೆದೊಂದು ದಶಕದಿಂದ ಇದನ್ನು ಅನುಭವಿಸುತ್ತಿದ್ದೇವೆ ಇನ್ನಾದರು ರಸ್ತೆ ದುರಸ್ತಿ ಮಾಡಿಕೊಡಿ ಎಂಬುದು ಸ್ಥಳಿಯ ನಿವಾಸಿ ಸಿರಿಲ್ ಮಿರಾಂದರ ಬೇಡಿಕೆ.
ರಸ್ತೆ ಅಭಿವೃದ್ದಿಯಾಗಬೇಕಾದುದು ಅತಿ ಅಗತ್ಯವಾಗಿದೆ ಅದು ಪ್ರವಾಸೋಧ್ಯಮಕ್ಕೂ ಪೂರಕವಾಗಿದೆ. ಈ ಬಗ್ಗೆ ಈಗಾಗಲೆ ಶಾಸಕರ ಅಧಿಕಾರಿಗಳ ಗಮನ ಸೆಳೆಯಲಾಗಿದ್ದು ಕೆಲವೇ ದಿನಗಳಲ್ಲಿ ರಸ್ತೆ ದುರಸ್ತಿಯಾಗುವ ಭರವಸೆಯಿದೆ ಎಂದು ನಡ ಪಂಚಾಯತ್ ಅಧ್ಯಕ್ಷ ಪ್ರವೀಣ್ ವಿ ಜಿ ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ