ಆ್ಯಂಟಿಬಯಾಟಿಕ್‌‌ಗೆ ವಿಜ್ಞಾನಿಗಳಿಂದ ಪರ್ಯಾಯ

ಲಂಡನ್: ಆ್ಯಂಟಿಬಯಾಟಿಕ್‌ಗಳನ್ನು ತಿಂದು ತಿಂದು ಸಾಕಾಗಿದೆ ಎಂದು ಬಹುಶ ಇನ್ನು ಮುಂದೆ ರೋಗಿಗಳು ಹೇಳಲಾರರು. ವೈದ್ಯಕೀಯ ವಿಜ್ಞಾನದಲ್ಲಿ ಮಹತರ್ರ ಬೆಳವಣಿಗೆಯೊಂದು ನಡೆದಿದೆ. ಆ್ಯಂಟಿಬಯಾಟಿಕ್‌ಗಳಿಗೆ ಪರ್ಯಾಯ ಔಷಧವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಎಂಬ ಸುದ್ದಿ ಕುತೂಹಲ ಮೂಡಿಸಿದೆ. ಈಗಾಗಲೇ ಇದನ್ನು ರೋಗಿಗಳ ಮೇಲೆ ಪ್ರಾಯೋಗಿಕವಾಗಿ ಬಳಸಲಾಗಿದ್ದು ಈ ಹೊಸ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.
ಮುಂದುವರಿದ ದೇಶಗಳಲ್ಲಿ ಆ್ಯಂಟಿಬಯಾಟಿಕ್‌ಗಳ ಬಳಕೆ ಅತ್ಯಂತ ಸೂಕ್ಷ್ಮ ವಿಷಯ. ಅಲ್ಲಿ ಬೇಕಾಬಿಟ್ಟಿ ಆ್ಯಂಟಿಬಯಾಟಿಕ್ ಔಷಧಗಳ ಬಳಕೆ ಇಲ್ಲ. ಆದರೆ ಭಾರತದಲ್ಲಿ ಚಿಕ್ಕಪುಟ್ಟ ತೊಂದರೆಗಳಿಗೂ ವೈದ್ಯರು ಆ್ಯಂಟಿಬಯಾಟಿಕ್‌ಗಳನ್ನು ಬರೆದುಕೊಡುವುದು ರೂಢಿಯಾಗಿದೆ. ಹೆಚ್ಚೆಚ್ಚು ಆ್ಯಂಟಿಬಯಾಟಿಕ್ ಬಳಕೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನೇ ಕುಂಠಿತಗೊಳಿಸುತ್ತದೆ. ಆ್ಯಂಟಿಬಯಾಟಿಕ್ಸ್‌‌ಗಳ ಈ ರೀತಿಯ ದುರ್ಬಳಕೆ ಮುಂದೆ ದೊಡ್ಡ ಆಪತ್ತಿಗೆ ಕಾರಣವಾಗಬಹುದು ಅಥವಾ ಆ್ಯಂಟಿಬಯಾಟಿಕ್‌ಗಳು ರೋಗಿಯ ದೇಹದ ಮೇಲೆ ಪರಿಣಾಮ ಬೀರುವ ಶಕ್ತಿಯನ್ನೇ ಕಳೆದುಕೊಳ್ಳಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದರು. ಕಲೆದ ಕೆಲವು ವರ್ಷಗಳಿಂದ ಆ್ಯಂಟಿಬಯಾಟಿಕ್‌ಗಳು ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತಿರುವುದನ್ನು ವಿಜ್ಞಾನಿಗಳು ಗಮನಿಸಿದ್ದರು.

ಈ ಹೊಸ ಸಂಶೋಧನಾ ಔಷಧವು ಆ್ಯಂಟಿಬಯೋಟಿಕ್‌ಗಳಿಗೆ ಸಮರ್ಥ ಪರ್ಯಾಯ ಆಗುವ ಸಾಧ್ಯತೆ ಇದೆ. ಆದರೆ ಇದು ಮಾತ್ರೆ ಅಥವಾ ಚುಚ್ಚುಮದ್ದಿನ ರೂಪದಲ್ಲಿ ಸಾರ್ವಜನಿಕರಿಗೆ ಸಿಗುವಂತಾಗಲು ನಾಲ್ಕೈದು ವರ್ಷ ಕಾಯಬೇಕು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ