ಮಕ್ಕಳ ದಿನವೇ ದುರ್ಘಟನೆ: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಕರಾವಳಿ ಕರ್ನಾಟಕ ವರದಿ

ವಿಟ್ಲ:
ಶಾಲಾ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಟ್ಲದ ಕೋಟಿಕೆರೆಯಲ್ಲಿ ನಡೆದಿದೆ. ವಿಟ್ಲಪಡ್ನೂರು ಗ್ರಾಮದ ಕಡಂಬು ನಿವಾಸಿ ಜುಬೈದಾ ಎಂಬವರ ಮಗ, ಒಂಬತ್ತನೇ ತರಗತಿ ವಿದ್ಯಾರ್ಥಿ ಅಶ್ವದ್ ಅಹ್ಮದ್(14) ಎಂದು ಮೃತ ಬಾಲಕನನ್ನು ಗುರುತಿಸಲಾಗಿದೆ.

ಕೋಟಿಕೆರೆಯಲ್ಲಿ ಹಲವರು ಈಜುವುದನ್ನು ಕೆರೆ ಬದಿ ನಿಂತು ನೋಡುತ್ತಿದ್ದ ಸಂದರ್ಭ ಕಾಲು ಜಾರಿ ಅಶ್ವದ್ ಕೆರೆಗೆ ಬಿದ್ದಿದ್ದು, ಸ್ಥಳೀಯರು ನೀರಿನಿಂದ ಮೇಲಕ್ಕೆತ್ತಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಅಶ್ವದ್ ಮೃತಪಟ್ಟಿದ್ದಾರೆ.
ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ