ಯಕ್ಷಗಾನ: ಮನಮೋಹಕ ಚಂಡೆ ವಾದಕ ರಾಘವೇಂದ್ರ ಭಟ್ ಶೃಂಗೇರಿ

ದೀಪಕ್ ಕಾಮತ್ ಎಳ್ಳಾರೆ
 ಕ್ಷಗಾನ ರಂಗ ಭೂಮಿಯಲ್ಲಿ ಹಿಮ್ಮೇಳಕ್ಕೆ ಹಿರಿದಾದ ಸ್ಥಾನವಿದೆ. ಹಿಮ್ಮೇಳದವರು ಇರುವುದು ವೇದಿಕೆಯ ಹಿಂಭಾಗದಲ್ಲಾದರೂ ಅವರು ಯೋಚಿಸುವುದು ತಮ್ಮ ಮುಂದೆ ನಡೆಯುತ್ತಿರುವ ಪ್ರದರ್ಶನ ಕಳೆ ಕಟ್ಟುವುದರ ಬಗ್ಗೆ. ಈ ಕಾರ್ಯದಲ್ಲಿ ಭಾಗವತರಷ್ಟೇ ಚಂಡೆವಾದಕರಿಗೂ ಜವಾಬ್ದಾರಿ ಇದೆ. ಚಂಡೆ ವಾದಕ ತನ್ನ ಪ್ರತಿಭಾ ವಿಲಾಸದೊಂದಿಗೆ ಪಾತ್ರಧಾರಿಯ ಸಾಮರ್ಥ್ಯಕ್ಕನುಗುಣವಾಗಿ ಭಾಗವತ ಹಾಗೂ ಮದ್ದಳೆ ವಾದಕರೊಂದಿಗೆ ಸೇರಿಕೊಂಡು ಕಲಾವಿದರನ್ನು ಕುಣಿಸಬಲ್ಲ ಶಕ್ತಿಯನ್ನು ಹೊಂದಿರುವನು. ಈ ಬಗೆಯಲ್ಲಿ ಚಂಡೆ ಬಾರಿಸಿ ಜನರ ಮನಸ್ಸನ್ನು ಸೆಳೆದ ತರುಣ ಚಂಡೆ ವಾದಕ ರಾಘವೇಂದ್ರ ಭಟ್

ಶೃಂಗೇರಿ ತಾಲೂಕಿನ ಮಂಜುನಾಥ್ ಭಟ್ ಹಾಗೂ ಯಶೋಧಮ್ಮ ದಂಪತಿಗಳಿಗೆ ಮಗನಾಗಿ 1987ರಲ್ಲಿ ಜನಿಸಿದ ಇವರು 10ನೇ ತರಗತಿ ವರೆಗೆ ಓದಿದರು. ನಂತರ 5 ವರ್ಷ ವೇದ ಅಭ್ಯಾಸ ಮಾಡಿದರು. ಖ್ಯಾತ ಭಾಗವತ ರಾಘವೇಂದ್ರ ಮಯ್ಯ ಅವರ ಭಾಗವತಿಕೆ ಕೇಳಿ ಇವರಿಗೆ ಯಕ್ಷಗಾನದಲ್ಲಿ ಆಸಕ್ತಿ ಮೂಡಿತು . ನಂತರ ಇವರು ಹಿರಿಯಡ್ಕ ಮೇಳದ 2ನೇ ವೇಷಧಾರಿಯಾಗಿರುವ ಶ್ರೀಕಾಂತ್ ಭಟ್ ಇವರಲ್ಲಿ ತಾಳ ಅಭ್ಯಾಸ ಮಾಡಿದರು. ನಂತರ ರಾಘವೇಂದ್ರ ಅವರನ್ನು ಮಂದಾರ್ತಿ ಮೇಳದ  ಯಕ್ಷಗಾನ ತರಬೇತಿ ಕೇಂದ್ರಕ್ಕೆ ಸೇರಿಸಿದರು. ಅಲ್ಲಿ ಇವರು ಕೆ.ಪಿ. ಹೆಗಡೆ ಇವರಲ್ಲಿ ಸಂಗೀತವನ್ನು ಕಲಿತರು. ಹಾಗೂ ಸಂಗೀತಗಾರರಾಗಿ 1ವರ್ಷ ಸೀತೂರು ಮೇಳದಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ ಬಸವ ಮರಕಾಲ ಮುಂಡಾಡಿ ಇವರಲ್ಲಿ ಚಂಡೆಯನ್ನು ಕಲಿಯುವರು. ಹಾಗೂ ಮಂದಾರ್ತಿ ಮೇಳದಲ್ಲಿ 2ವರ್ಷ ಹಾಗೂ ಗುತ್ತಿಯಮ್ಮ ತೀರ್ಥಹಳ್ಳಿ ಮೇಳದಲ್ಲಿ 3ವರ್ಷ ಚಂಡೆ ವಾದಕರಾಗಿ ಸೇವೆ ಸಲ್ಲಿಸಿರುತ್ತಾರೆ. ಕೆಲವು ಸಮಯ ಬೆಂಗಳೂರಿನ ಯಕ್ಷಗಾನ ಸಂಸ್ಥೆಯಲ್ಲಿದ್ದುಕೊಂಡು ಮುಂಬೈ ಹಾಗೂ ಹಲವು ಕಡೆ ಪ್ರದರ್ಶನ ನೀಡಿರುವರು.

ತಾಳಮದ್ದಳೆ ಕ್ಷೇತ್ರದಲ್ಲಿ ಆನಂದ್ ಪೆರ್ಡೂರರ ಮದ್ದಳೆಗೆ ಇವರ ಚಂಡೆಗಾರಿಕೆ ಹೆಸರುವಾಸಿ. ಇವರ ಕಲಾ  ನೈಪುನ್ಯತೆಗೆ ಹಲವು ಸಂಘ ಸಂಸ್ಥೆಗಳು ಪುರಸ್ಕಾರ ನೀಡಿ ಗೌರವಿಸಿದೆ. ಪ್ರಸ್ತುತ ನಾಗರಕೊಡಿಗೆ ಯಕ್ಷ ಮಿತ್ರ ಕಲಾ ಮಂಡಳಿಯಲ್ಲಿ ಚಂಡೆಗಾರರಾಗಿದ್ದಾರೆ. ವೃತ್ತಿಯಲ್ಲಿ ಅರ್ಚಕರಾಗಿದ್ದು ಪ್ರವೃತ್ತಿಯಲ್ಲಿ ಚಂಡೆಗಾರರಾಗಿ ಯಕ್ಷ ಮಾತೇ ಯ ಸೇವೆಯನ್ನು ಮಾಡುತ್ತಿದ್ದಾರೆ.


ವರ್ಷ ವೊಂದಕ್ಕೆ ಅತಿಥಿ ಕಲಾವಿಧರಾಗಿ ಹಾಗೂ ಮೇಳದಲ್ಲಿ ನೂರಾರು ಪ್ರದರ್ಶನ ನೀಡುವ ಇವರು ಇನ್ನೂ ಯಕ್ಷಗಾನದಲ್ಲಿ ತೊಡಗಿಕೊಳ್ಳುವುದು ನನ್ನ ಬಯಕೆಯಾಗಿದೆ ಎನ್ನುತ್ತಾರೆ. ಇವರು ವೃತ್ತಿಯಲ್ಲಿ ಅರ್ಚಕರಾಗಿದ್ದು 8 ದೇವಾಲಯಗಳಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದು,
ಪ್ರವೃತ್ತಿಯಾಗಿ ಯಕ್ಷಗಾನದಲ್ಲಿ ತೊಡಗಿದ್ದಾರೆ.

ಯಕ್ಷ ಕ್ಷೇತ್ರದಲ್ಲಿ ಮುಂಬೈ, ಆಂಧ್ರಪ್ರದೇಶ, ಪಾವಗಡ,ಉಡುಪಿ, ಶಿವಮೊಗ್ಗ, ಹೊಸನಗರ, ಬೆಂಗಳೂರು ಹಾಗೂ ಮಲೆನಾಡು ಪ್ರದೇಶದ ಹಲವು ಕಡೆ ಪ್ರದರ್ಶನ ನೀಡಿ ಅಭಿಮಾನಿಗಳ ಪಾಲಿನ ಪ್ರಿಯ ಚಂಡೆ ವಾದಕ ರಾಗಿದ್ದಾರೆ.

ಇವರಿಗೆ ಇವರ ಕಲಾ ಸೇವೆಯನ್ನು ಗುರುತಿಸಿ ಅಲಾಸ ಚಂಡಿಕೇಶವ ದೇವಾಲಯ,
 ದುರ್ಗಾಪರಮೇಶ್ವರಿ ದೇವಸ್ಥಾನ ಹಾಸನ, ವಿಜಯದುರ್ಗಾ ಕ್ಷೇತ್ರ ಆಲೂರು, ಮತ್ತು ಪಾವಗಡ ಹಾಗೂ ಇನ್ನಿತರ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ.

ತಮ್ಮದೇ ಆದ ಯಕ್ಷಸಂಸ್ಥೆಯನ್ನು ಕಟ್ಟಿಕೊಂಡು  ಇನ್ನೂ ದೇಶದಾದ್ಯಂತ ಯಕ್ಷಗಾನವನ್ನು ಪಸರಿಸ ಬೇಕು ಎನ್ನುವುದು ನನ್ನ ಅಭಿಲಾಷೆ ಇದೆ ರಾಘವೇಂದ್ರ ಭಟ್ರು.ಇವರ ಕಲಾ ಸೇವೆ ಹೀಗೆ ಮುಂದುವರಿಯಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ