ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ. ಅದ್ಭುತ ಅನುಭವ ಎಂದ ರಾಜನಾಥ್ ಸಿಂಗ್
ಫ್ರಾನ್ಸ್ ನಿರ್ಮಿತ ರಫೆಲ್ ಯುದ್ಧ ವಿಮಾನದಲ್ಲಿನ ಹಾರಾಟ ಅದ್ಭುತ ಅನುಭವ ಮತ್ತು ಅತ್ಯಂತ ಆರಾಮದಾಯಕ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ

ಬೋರ್ಡಾಕ್ಸ್​
: ಭಾರೀ ಹಗರಣ ಎಂದು ಬಿಂಬಿತವಾಗಿದ್ದ ರಫೇಲ್ ಯುದ್ಧ ವಿಮಾನಗಳ ವ್ಯವಹಾರ ಕೊನೆಗೂ ವಿಮಾನಗಳ ಪೂರೈಕೆಯಲ್ಲಿ ಸಾಕಾರಗೊಂಡಿದ್ದು ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರಗೊಂಡಿದೆ. 

ಫ್ರಾನ್ಸ್‌ನ ಬೊರಾಡೆಕ್ಸ್‌ ಸಮೀಪದ ಮೆರಿಗ್ನ್ಯಾಕ್‌ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧವಿಮಾನವನ್ನು ಭಾರತದ ಪರವಾಗಿ ಸ್ವೀಕರಿಸಿದರು.

ಫ್ರಾನ್ಸ್ ನಿರ್ಮಿತ ರಫೆಲ್ ಯುದ್ಧ ವಿಮಾನದಲ್ಲಿನ ಹಾರಾಟ ಅದ್ಭುತ ಅನುಭವ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಡಸ್ಸಾಲ್ಟ್ ಏವಿಯೇಷನ್ ನಿರ್ಮಿಸಿದ ರಫೆಲ್ ಫೈಟರ್ ಜೆಟ್ ಯುದ್ಧ ವಿಮಾನದ ಹಸ್ತಾಂತರ ಬಳಿಕ ರಾಜನಾಥ್ ಸಿಂಗ್ ರಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.

2021ರ ವೇಳೆಗೆ 18 ವಿಮಾನಗಳು ಭಾರತಕ್ಕೆ ಲಭ್ಯವಾಗಲಿವೆ. 2022ರ ಏಪ್ರಿಲ್‌–ಮೇ ಹೊತ್ತಿಗೆ ಉಳಿದ ರಫೇಲ್‌ ವಿಮಾನಗಳು ಹಸ್ತಾಂತರಗೊಳ್ಳಲಿವೆ. ಇದು ನಮ್ಮ ರಕ್ಷಣೆಗಾಗಿಯೇ ಹೊರತು, ಯಾರಾದ್ದೋ ವಿರುದ್ಧ ಆಕ್ರಮಣಕ್ಕಲ್ಲ. ಇದು ರಕ್ಷಕ ವಿಮಾನ, ಎಂದೂ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ